ETV Bharat / bharat

ಮಮತಾ ಬ್ಯಾನರ್ಜಿ ಪತ್ರಕ್ಕೆ ಕೇಂದ್ರದ ಕೌಂಟರ್: ಬಂಗಾಳ ಸಿಎಂಗೆ ಕೇಂದ್ರ ಕೊಟ್ಟ ಉತ್ತರವೇನು? - entre slams mamata banerjee

ಪಶ್ಚಿಮ ಬಂಗಾಳದಲ್ಲಿ 48,600 ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣಗಳು ಬಾಕಿ ಉಳಿದಿದ್ದರೂ ರಾಜ್ಯವು ಹೆಚ್ಚುವರಿ 11 ಎಫ್‌ಟಿಎಸ್‌ಸಿಗಳನ್ನು ಕಾರ್ಯಗತಗೊಳಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಮೂಲಕ ಮಮತಾ ಬ್ಯಾನರ್ಜಿ ಅವರ ಪತ್ರಕ್ಕೆ ತಿರುಗೇಟು ನೀಡಿದೆ.

factually-incorrect-to-cover-up-delays-centre-slams-mamata-banerjee-in-reply-to-her-letter
ಮಮತಾ ಬ್ಯಾನರ್ಜಿ (ಈಟಿವಿ ಭಾರತ್​​)
author img

By ETV Bharat Karnataka Team

Published : Aug 31, 2024, 1:45 PM IST

ನವದೆಹಲಿ: ಮಹಿಳೆಯರ ವಿರುದ್ದದ ಹಿಂಸೆ ಮತ್ತು ಅಪರಾಧಗಳ ನಿರ್ವಹಣೆಗೆ ಈಗಿರುವ ಕಾನೂನು ಕಠಿಣವಾಗಿದ್ದು, ಅವುಗಳನ್ನು ರಾಜ್ಯ ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರ ಮಮತಾ ಬ್ಯಾನರ್ಜಿಗೆ ತಿಳಿಸಿದೆ. ಅತ್ಯಾಚಾರ ಮತ್ತು ಕೊಲೆಗಳಂತಹ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಎರಡನೇ ಪತ್ರಕ್ಕೆ ಪ್ರತಿಕ್ರಿಯಿಸಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಈ ಉತ್ತರ ಸಲ್ಲಿಸಿದ್ದಾರೆ.

ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣಗಳ ನಿರ್ವಹಣೆಗೆ ಅಂತಾನೆ ಪಶ್ಚಿಮ ಬಂಗಾಳ ಸರ್ಕಾರ ಫಾಸ್ಟ್​ ಟ್ರಾಕ್​ ನ್ಯಾಯಾಲಯಗಳನ್ನು (ಎಫ್‌ಟಿಸಿ) ಸ್ಥಾಪಿಸಿದೆ. ಇವು ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಬರುವಂತಹ ಫಾಸ್ಟ್​​ ಟ್ರಾಕ್​ ವಿಶೇಷ ಕೋರ್ಟ್ (ಎಫ್​ಟಿಎಸ್​ಸಿ)​ ರೀತಿ ಇಲ್ಲ ಎಂಬ ಅಂಶವನ್ನು ಮಮತಾ ಅವರ ಗಮನಕ್ಕೆ ತರಲಾಗಿದೆ.

ದೇಶದೆಲ್ಲೆಡೆ ಬಿರುಗಾಳಿ ಎಬ್ಬಿಸಿದ ಆರ್​ ಕೆ ಕರ್​ ಮೆಡಿಕಲ್​ ಕಾಲೇಜಿನ​ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಘಟನೆ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಆಗಸ್ಟ್​ 9 ರಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಅತ್ಯಾಚಾರ, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ವಿಲೇವಾರಿಯನ್ನು ಕಾಲಮಿತಿಯಲ್ಲಿ ಕಡ್ಡಾಯಗೊಳಿಸುವ ಅವಶ್ಯಕತೆ ಇದೆ ಎಂದು ಕೋರಿದ್ದರು.

ಮಮತಾ ಅವರ ಪತ್ರಕ್ಕೆ ಉತ್ತರಿಸಿರುವ ಕೇಂದ್ರ ಸರ್ಕಾರ, ಪಶ್ಚಿಮ ಬಂಗಾಳದಲ್ಲಿ 48,600 ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣಗಳು ಬಾಕಿ ಉಳಿದಿದ್ದರೂ ರಾಜ್ಯವು ಹೆಚ್ಚುವರಿ 11 ಎಫ್‌ಟಿಎಸ್‌ಸಿಗಳನ್ನು ಕಾರ್ಯಗತಗೊಳಿಸಿಲ್ಲ. ರಾಜ್ಯದ ಅವಶ್ಯಕತೆಗೆ ಅನುಗುಣವಾಗಿ ಎಫ್​ಟಿಎಸ್​ಸಿ ಪೋಕ್ಸೊ ಮತ್ತು ಅತ್ಯಾಚಾರ ಹಾಗೂ ಪೋಕ್ಸೊ ಪ್ರಕರಣದ ಕುರಿತು ವ್ಯವಹರಿಸುತ್ತದೆ. ಪತ್ರದಲ್ಲಿ ಮಾಹಿತಿ ವಾಸ್ತವಿಕವಾಗಿ ತಪ್ಪಾಗಿದೆ. ರಾಜ್ಯದಲ್ಲಿ ಎಫ್​ಟಿಎಸ್​ಸಿ ಕಾರ್ಯಾಚರಣೆ ವಿಳಂಬವನ್ನು ಮುಚ್ಚಿಡುವ ಯತ್ನ ನಡೆಸಲಾಗಿದೆ ಎಂದು ಹೇಳಿದೆ.

ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯ ಪ್ರಕರಣಗಳ ವಿಲೇವಾರಿಗಾಗಿ ಒಬ್ಬ ನ್ಯಾಯಾಂಗ ಅಧಿಕಾರಿ ಮತ್ತು ಏಳು ಸಿಬ್ಬಂದಿಗೆ ಈ ಯೋಜನೆಯ ಕುರಿತು ಈಗಾಗಲೇ ಮಾರ್ಗಸೂಚಿಯಲ್ಲಿ ಸ್ಪಷ್ಟ ಮಾಹಿತಿ ಒದಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಫ್​ಟಿಎಸ್​ಸಿಯ ಹೆಚ್ಚುವರಿ ಅಧಿಕಾರಕ್ಕೆ ಯಾವುದೇ ಖಾಯಂ ನ್ಯಾಯಾಂಗ ಅಧಿಕಾರಿ ಅಥವಾ ನ್ಯಾಯಾಲಯದ ಸಿಬ್ಬಂದಿಯನ್ನು ನೀಡಲು ಸಾಧ್ಯವಿಲ್ಲ. ಈ ಸ್ಥಾನಗಳ ಕುರಿತು ಪಶ್ಚಿಮ ಬಂಗಾಳಕ್ಕೆ ಈ ಮೊದಲೇ ಸ್ಪಷ್ಟೀಕರಣ ನೀಡಲಾಗಿದೆ.

ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಉದ್ಯೋಗಿಗಳ ಕೊರತೆ ಇದ್ದಲ್ಲಿ ಮಾತ್ರ ಎಫ್​ಟಿಎಸ್​ಸಿ ಯೋಜನೆ ಅಡಿ ಒಪ್ಪಂದದ ಆಧಾರದ ಮೇಲೆ ನ್ಯಾಯಾಂಗ ಅಧಿಕಾರಿಗಳು ಮತ್ತು ನ್ಯಾಯಾಲಯ ಸಿಬ್ಬಂದಿಗಳನ್ನು ನೀಡಬಹುದು. ಅತ್ಯಾಚಾರ / ಅತ್ಯಾಚಾರ ಮತ್ತು ಕೊಲೆಯಂತಹ ಹೀನ ಕೃತ್ಯಗಳಿಗೆ ಶಿಕ್ಷೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಈಗಾಗಲೇ ಕಠಿಣ ಕಾನೂನುಗಳು ಇವೆ ಎಂದು ಮತ್ತೊಮ್ಮೆ ತಿಳಿಸುತ್ತೇನೆ. ಮಹಿಳೆಯರ ವಿರುದ್ಧದ ಹಿಂಸಾಚಾರ ಮತ್ತು ಅಪರಾಧ ತಡೆಯುವಲ್ಲಿ ಕೇಂದ್ರ ಸರ್ಕಾರವು ಕಠಿಣವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಅಚ್ಚರಿ..! ನಿಮ್ಮ ಮಗ ರಾಜಕಾರಣಿಯಾಗಲಿಲ್ಲ; ಜಯ್​ ಐಸಿಸಿ ಅಧ್ಯಕ್ಷರಾದ ಬಳಿಕ ಅಮಿತ್ ಶಾಗೆ ಮಮತಾ ಅಭಿನಂದನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.