ETV Bharat / bharat

ದೆಹಲಿಯಲ್ಲಿ ಜ್ಯೂಸ್​ ಕಲಬೆರಕೆ ಆರೋಪ: ಬಣ್ಣ ಮಿಶ್ರಣ ಮಾಡಿ ದಾಳಿಂಬೆ ರಸವೆಂದು ಮಾರಾಟ! - JUICE ADULTERATION - JUICE ADULTERATION

ದೆಹಲಿಯ ಅಂಗಡಿಯಲ್ಲಿ ಬಣ್ಣ ಮಿಶ್ರಿತ ಜ್ಯೂಸ್​ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ದೆಹಲಿಯಲ್ಲಿ ಜ್ಯೂಸ್​ ಕಲಬೆರಕೆ ಆರೋಪ
ದೆಹಲಿಯಲ್ಲಿ ಜ್ಯೂಸ್​ ಕಲಬೆರಕೆ ಆರೋಪ (ETV Bharat)
author img

By ETV Bharat Karnataka Team

Published : Sep 25, 2024, 3:42 PM IST

ನವದೆಹಲಿ: ತಿರುಪತಿ ಲಡ್ಡು ಕಲಬೆರಕೆ ಪ್ರಕರಣದ ಬಳಿಕ ದೇಶದೆಲ್ಲೆಡೆ ಇಂಥಹದ್ದೇ ಹೀನ ಘಟನೆಗಳು ವರದಿಯಾಗುತ್ತಿವೆ. ಉತ್ತರಪ್ರದೇಶದ ಗಾಜಿಯಾಬಾದ್​​ನಲ್ಲಿ ಜ್ಯೂಸ್​​ನಲ್ಲಿ ಮೂತ್ರ ಬೆರೆಸಿದ ಘಟನೆ ಬಳಿಕ, ದೆಹಲಿಯಲ್ಲೂ ಜ್ಯೂಸ್​​ನಲ್ಲಿ ಬಣ್ಣ ಮಿಶ್ರಣ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪ ಕೇಳಿಬಂದ ಬಳಿಕ ಜ್ಯೂಸ್​ ಅಂಗಡಿ ಮೇಲೆ ದಾಳಿ ಮಾಡಿರುವ ಪೊಲೀಸರು, ದಾಳಿಂಬೆ ಜ್ಯೂಸ್​ನಲ್ಲಿ ಬಣ್ಣ ಬೆರೆಸಿದ್ದನ್ನು ಪತ್ತೆ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಜೊತೆಗೆ ಆಹಾರ ಸುರಕ್ಷತಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ.

ಕಲಬೆರಕೆಯ ವಿವರ: ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಜ್ಯೂಸ್ ಮಾರಾಟಗಾರ ಅಯೂಬ್ ಖಾನ್ ಮತ್ತು ಆತನ ಪಾಲುದಾರ ರಾಹುಲ್‌ ಎಂಬಾತನನ್ನು ಜ್ಯೂಸ್​​ ಕಲಬೆರಕೆ ಮಾಡುತ್ತಿದ್ದ ಆರೋಪದ ಮೇಲೆ ಜನರು ಥಳಿಸಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕಾಗಮಿಸಿ ಪೊಲೀಸರು ಜ್ಯೂಸ್​ ತಪಾಸಿಸಿದಾಗ ದಾಳಿಂಬೆ ಜ್ಯೂಸ್​​ನಲ್ಲಿ ಬಣ್ಣ ಮಿಶ್ರಣ ಮಾಡಿದ್ದು ಕಂಡುಬಂದಿದೆ.

ವಿಚಾರಣೆ ವೇಳೆ ಸಿಬ್ಬಂದಿ ಅಯೂಬ್ ಖಾನ್ ಮತ್ತು ರಾಹುಲ್ ಕಲಬೆರಕೆಯನ್ನು ಒಪ್ಪಿಕೊಂಡಿದ್ದಾರೆ. ಜ್ಯೂಸ್‌ಗೆ ಬಣ್ಣ ಬೆರೆಸುವಂತೆ ಅಂಗಡಿ ಮಾಲೀಕ ಶೋಯೆಬ್ ಸೂಚಿಸಿದ್ದರು ಎಂದು ಬಾಯ್ಬಿಟ್ಟಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿಗಳು ಜ್ಯೂಸ್​​ನ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆಯ ಬಗ್ಗೆ ಸದ್ಯ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.

ವರದಿ ಬಳಿಕ ಕಾನೂನು ಕ್ರಮ: ಪೊಲೀಸರಿಂದ ನೀಡಿದ ಮಾಹಿತಿಯ ಪ್ರಕಾರ, ಬುಧವಾರ ಬೆಳಗ್ಗೆ 10.30ರ ಸುಮಾರಿಗೆ ಗ್ರಾಹಕರು ಜ್ಯೂಸ್​​ ಅಂಗಡಿಯಲ್ಲಿನ ಕಲಬೆರಕೆ ಬಗ್ಗೆ ಮಾಹಿತಿ ನೀಡಿದರು. ಮೇಲ್ನೋಟಕ್ಕೆ ಅಂಗಡಿಯಲ್ಲಿ ಜ್ಯೂಸ್​​ಗೆ ಬಳಸಲಾದ ರಾಸಾಯನಿಕಗಳು ಸಿಕ್ಕಿವೆ. ಪೊಲೀಸರು, ಆಹಾರ ಸುರಕ್ಷತಾ ನಿರೀಕ್ಷಕರನ್ನು ಕರೆಸಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಜ್ಯೂಸ್​​ನಲ್ಲಿ ಮೂತ್ರ ಬೆರೆಸಿದ್ದ ಪ್ರಕರಣ: ಇದಕ್ಕೂ ಮೊದಲು, ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿ ಜ್ಯೂಸ್​​​ನಲ್ಲಿ ಮೂತ್ರ ಬೆರೆಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಲೋಣಿ ಬಾರ್ಡರ್ ಪೊಲೀಸ್ ಠಾಣೆ ವ್ಯಾಪ್ತಿಯ "ಖುಷಿ ಜ್ಯೂಸ್ ಕಾರ್ನರ್" ಅಂಗಡಿಯಲ್ಲಿ ಈ ಕೃತ್ಯ ನಡೆದಿತ್ತು. ಮಾಲೀಕ ಅಮೀರ್ ಖಾನ್ ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ಮೂತ್ರ ಮಿಶ್ರಣದ ಜ್ಯೂಸ್ ನೀಡುತ್ತಿದ್ದರು. ಮಾಹಿತಿ ಹೊರಬಿದ್ದ ಬಳಿಕ ಇಡೀ ಪ್ರದೇಶದಲ್ಲಿ ಆಕ್ರೋಶದ ವಾತಾವರಣ ನಿರ್ಮಾಣವಾಗಿತ್ತು.

ಮೂತ್ರ ಬೆರೆಸಿದ ಜ್ಯೂಸ್ ಮಾರಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಜ್ಯೂಸ್​ ಅಂಗಡಿ ತಪಾಸಣೆ ನಡೆಸಿದಾಗ, 1 ಲೀಟರ್ ಮೂತ್ರ ಸಿಕ್ಕಿತ್ತು. ಅಂಗಡಿಯ ಮಾಲೀಕನನ್ನು ಬಂಧಿಸಿದ್ದರು.

ಇದನ್ನೂ ಓದಿ: ಢಾಬಾ, ರೆಸ್ಟೋರೆಂಟ್​​, ಹೋಟೆಲ್​​ಗಳ ಆಹಾರ ಸ್ವಚ್ಛತೆ ಪರಿಶೀಲನೆಗೆ ಸೂಚಿಸಿದ ಸಿಎಂ ಯೋಗಿ ಆದಿತ್ಯನಾಥ್​: ಏಕೆ ಗೊತ್ತಾ? - CM Yogi Adityanath

ETV Bharat Logo

Copyright © 2025 Ushodaya Enterprises Pvt. Ltd., All Rights Reserved.