ಚಂದೌಲಿ (ಉತ್ತರ ಪ್ರದೇಶ): ಇಲ್ಲಿಯ ಮುಘಲ್ಸರಾಯ್ ಕೊಟ್ವಾಲಿ ಪ್ರದೇಶದ ಜೈಸ್ವಾಲ್ ಎಂಬ ಶಾಲೆ ಬಳಿಯ ಕಟ್ಟಡವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಗುಡಿಯಾ ಗುಪ್ತಾ (40) ಮತ್ತು ರಾಜು ಗುಪ್ತಾ (45) ಆತ್ಮಹತ್ಯೆ ಮಾಡಿಕೊಂಡವರು.
ಪ್ರಾಥಮಿಕ ಮಾಹಿತಿ ಪ್ರಕಾರ ಆತ್ಮಹತ್ಯೆ ಮಾಡಿಕೊಂಡವರು ಸಹೋದರ ಮತ್ತು ಸಹೋದರಿ ಎಂದು ತಿಳಿದು ಬಂದಿದೆ. ಇಬ್ಬರ ಶವಗಳು ಮನೆಯ ಒಂದೇ ಕೊಠಡಿಯಲ್ಲಿ ಪತ್ತೆಯಾಗಿವೆ. ಮೇಲ್ನೋಟಕ್ಕೆ ಮೃತರು ಮಾನಸಿಕ ಸಮಸ್ಯೆ ಎದುರಿಸುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದ್ದು, ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯಕ್ಕೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಾಗಾಗಿ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.
ಜೈಸ್ವಾಲ್ ಶಾಲೆಯ ಹಿಂಭಾಗದ ಖಾಸಗಿ ಮನೆಯಲ್ಲಿ ವಾಸಿಸುತ್ತಿದ್ದರು. ಮೃತರ ಪೋಷಕರು ಸುಮಾರು 8 ವರ್ಷಗಳ ಹಿಂದೆ ನಿಧನರಾಗಿದ್ದರು. ಇವರಿಬ್ಬರು ಮದುವೆ ಆಗಿರಲಿಲ್ಲ. ಇಬ್ಬರ ಮೃತದೇಹಗಳು ಮನೆಯ ಮೇಲಿನ ಮಹಡಿಯ ಕೊಠಡಿಯಲ್ಲಿ ಪತ್ತೆಯಾಗಿವೆ. ಪಕ್ಕದ ವ್ಯಕ್ತಿಯೊಬ್ಬರು ರಾಜು ಅವರನ್ನು ಹುಡುಕಿಕೊಂಡು ಬಂದಾಗ ಈ ವಿಷಯ ಗೊತ್ತಾಗಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಸಿಒ ಅನಿರುದ್ಧ್ ಸಿಂಗ್ ಕೂಡ ಸ್ಥಳದಲ್ಲಿದ್ದರು.
ಗುರುವಾರವೇ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಿರುವ ಸಿಒ ಅನಿರುದ್ಧ್ ಸಿಂಗ್, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಥಳೀಯ ಪೊಲೀಸರೊಂದಿಗೆ, ವಿಧಿವಿಜ್ಞಾನ ತಂಡವು ಈ ಪ್ರಕರಣದ ತನಿಖೆಯಲ್ಲಿ ನಿರತವಾಗಿದೆ. ಈ ಬಗ್ಗೆ ಶೀಘ್ರದಲ್ಲೆ ಮತ್ತಷ್ಟು ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಕುಟುಂಬದ ಮತ್ತೊಬ್ಬ ಸದಸ್ಯ ಪ್ರತ್ಯೇಕವಾಗಿ ವಾಸಿಸುತ್ತಿದ್ದಾನೆ. ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಲಾರಿ-ಟಾಟಾ ಏಸ್ ಮಧ್ಯೆ ಅಪಘಾತ, ಕಂತೆ-ಕಂತೆ ಹಣ ಕಂಡ ಗಾಬರಿಗೊಂಡ ಸ್ಥಳೀಯರು! - HUGE CASH FOUND