ETV Bharat / bharat

ಲ್ಯಾಂಡ್ ಫಾರ್ ಜಾಬ್ ಪ್ರಕರಣ: ಮಾಜಿ ಸಿಎಂ ರಾಬ್ರಿ ದೇವಿ, ಇಬ್ಬರು ಪುತ್ರಿಯರಿಗೆ ಮಧ್ಯಂತರ ಜಾಮೀನು - ರಾಬ್ರಿ ದೇವಿ

ಲ್ಯಾಂಡ್ ಫಾರ್ ಜಾಬ್ ಪ್ರಕರಣದಲ್ಲಿ ಇಡಿ ದಾಖಲಿಸಿದ್ದ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಪುತ್ರಿಯರಾದ ಮಿಸಾ ಭಾರ್ತಿ, ಹಿಮಾ ಯಾದವ್ ಮತ್ತು ಹೃದಯಾನಂದ್ ಚೌಧರಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದೂಡಿದೆ.

ಲ್ಯಾಂಡ್ ಫಾರ್ ಜಾಬ್ ಪ್ರಕರಣ
ಲ್ಯಾಂಡ್ ಫಾರ್ ಜಾಬ್ ಪ್ರಕರಣ
author img

By ETV Bharat Karnataka Team

Published : Feb 9, 2024, 12:57 PM IST

ಪಾಟ್ನಾ/ದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪತ್ನಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ಅವರ ಪುತ್ರಿಯರಾದ ಮಿಸಾ ಭಾರತಿ ಮತ್ತು ಹೇಮಾ ಯಾದವ್‌ಗೆ ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣದಲ್ಲಿ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಮೂವರಿಗೂ ರಿಲೀಫ್​ ಸಿಕ್ಕಂತಾಗಿದೆ. ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ವಿಶೇಷ ನ್ಯಾಯಾಧೀಶರಾದ ವಿಶಾಲ್ ಗೋಗಾನೆ ಅವರ ಪೀಠ, ತಲಾ 1 ಲಕ್ಷ ರೂಪಾಯಿ ಬಾಂಡ್ ಶ್ಯೂರಿಟಿ ಇಡುವಂತೆ ಮಧ್ಯಂತರ ಜಾಮೀನು ನೀಡಿ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 28ಕ್ಕೆ ಮುಂದೂಡಿದೆ.

ಕಳೆದ ತಿಂಗಳು, ರೈಲ್ವೆ ಜಮೀನು - ಉದ್ಯೋಗಕ್ಕಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಜಾರಿ ನಿರ್ದೇಶನಾಲಯ ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್‌ ಸಲ್ಲಿಸಿತ್ತು. ರಾಬ್ರಿ ದೇವಿ, ಮಿಸಾ ಭಾರ್ತಿ, ಹಿಮಾ ಯಾದವ್, ಹೃದಯಾನಂದ್ ಚೌಧರಿ ಮತ್ತು ಅಮಿತ್ ಕತ್ಯಾಲ್ ಅವರನ್ನು ಆರೋಪಿಗಳೆಂದು ಆರೋಪಪಟ್ಟಿಯಲ್ಲಿ ಹೆಸರಿಸಿ ಚಾರ್ಜ್ ಶೀಟ್‌ ಸಲ್ಲಿಸಿತ್ತು. ನಂತರ ನ್ಯಾಯಾಲಯ ಫೆ. 9 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಇದರಂತೆ ರಾಬ್ರಿ, ಮಿಸಾ, ಹೇಮಾ ಅವರು ನ್ಯಾಯಲಯಕ್ಕೆ ಹಾಜರಾಗಿದ್ದರು. ಅಮಿತ್ ಅವರನ್ನು ಇತ್ತೀಚೆಗೆ ಇಡಿ ಬಂಧಿಸಿದ್ದರಿಂದ ಅವರು ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರಾಗಿದ್ದರು.

ಆರೋಪಿಗಳನ್ನು ತನಿಖೆಯ ಸಂದರ್ಭದಲ್ಲಿ ಬಂಧಿಸದೇ ಇರುವಾಗ, ಈಗೇಕೆ ಆರೋಪಿಗಳನ್ನು ವಶಕ್ಕೆ ಕೇಳುತ್ತಿದ್ದೀರಿ ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಜಾರಿ ನಿರ್ದೇಶನಾಲಯವನ್ನು ಪ್ರಶ್ನಿಸಿತು. ಕೊನೆಗೆ ರಾಬ್ರಿ ದೇವಿ ಮತ್ತು ಅವರ ಪುತ್ರಿಯರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತು.

ಇಡಿ ಜನವರಿ 1, 2024 ರಂದು ಅಮಿತ್ ಕತ್ಯಾಲ್, ರಾಬ್ರಿ ದೇವಿ, ಮಿಶಾ ಭಾರತಿ, ಹೇಮಾ ಯಾದವ್, ಹೃದಯಾನಂದ್ ಚೌಧರಿ ಮತ್ತು ಎರಡು ಕಂಪನಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ), 2002 ರ ನಿಬಂಧನೆಗಳ ಅಡಿ ಪ್ರಾಸಿಕ್ಯೂಷನ್ ದೂರು (ಪಿಸಿ) ದಾಖಲಿಸಿದೆ. ಈಗಾಗಲೇ ಎಕೆ ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎಬಿ ಎಕ್ಸ್‌ಪೋರ್ಟ್ಸ್ ಪ್ರೈ. Ltd. ಪ್ರಕರಣ ನವದೆಹಲಿಯ ವಿಶೇಷ ನ್ಯಾಯಾಲಯದ (PMLA) ಮುಂದೆ ಇದೆ.

2004-2009ರ ಅವಧಿಯಲ್ಲಿ ಭಾರತೀಯ ರೈಲ್ವೆ ಇಲಾಖೆಯಲ್ಲಿ ಗ್ರೂಪ್ ಡಿ ದರ್ಜೆಯ ನೇಮಕಾತಿಗಾಗಿ ಆಗಿನ ರೈಲ್ವೆ ಸಚಿವರಾಗಿದ್ದ ಲಾಲು ಯಾದವ್ ಅವರು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿ, ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ ಎಫ್‌ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ಎಫ್‌ಐಆರ್‌ನಲ್ಲಿ ತಿಳಿಸಿರುವ ಪ್ರಕಾರ ಇಲಾಖೆಯಲ್ಲಿ ಉದ್ಯೋಗಕ್ಕೆ ಬದಲಾಗಿ ಭೂಮಿಯನ್ನು ಲಂಚದ ರೂಪದಲ್ಲಿ ನೀಡುವ ಬಗ್ಗೆ ಅಭ್ಯರ್ಥಿಗಳಿಗೆ ತಿಳಿಸಲಾಗಿದೆ. ಈ ಬಗ್ಗೆ ಸಿಬಿಐ ಕೂಡ ಚಾರ್ಜ್ ಶೀಟ್ ಸಲ್ಲಿಸಿದೆ. ಲಾಲು ಪ್ರಸಾದ್​ ಯಾದವ್ ರೈಲ್ವೆ ಸಚಿವರಾಗಿದ್ದಾಗ ಈ ಹಗರಣ ನಡೆದಿದ್ದು, ಭೋಲಾ ಯಾದವ್ ಅವರನ್ನು ಈ ಹಗರಣದ ಮಾಸ್ಟರ್ ಮೈಂಡ್ ಎಂದು ಪರಿಗಣಿಸಲಾಗಿದೆ. ಭೋಲಾ ಯಾದವ್ 2004 ರಿಂದ 2009 ರವರೆಗೆ ಲಾಲು ಯಾದವ್ ಅವರ OSD ಆಗಿದ್ದರು. ಉದ್ಯೋಗಕ್ಕೆ ಬದಲಾಗಿ ಭೂಮಿ ನೀಡುವ ಕೆಲಸವನ್ನು ಭೋಲಾ ಯಾದವ್‌ಗೆ ವಹಿಸಲಾಗಿತ್ತು ಎಂಬ ಮಾಹಿತಿ ಕೂಡ ಇದೆ. 2015ರ ವಿಧಾನಸಭಾ ಚುನಾವಣೆಯಲ್ಲಿ ಭೋಲಾ ಯಾದವ್ ಬಹದ್ದೂರ್‌ಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಮೇ 2023 ರಲ್ಲಿ ಈ ಪ್ರಕರಣದಲ್ಲಿ ಲಾಲು ಯಾದವ್ ಅವರ ಕುಟುಂಬಕ್ಕೆ ಸಂಬಂಧಿಸಿದ 17 ಸ್ಥಳಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು

ಪ್ರಕರಣ ಸಂಬಂಧ ಈ ಹಿಂದೆ, ಜಾರಿ ನಿರ್ದೇಶನಾಲಯವು ಲಾಲು ಪ್ರಸಾದ್ ಯಾದವ್ ಅವರನ್ನು 10 ಗಂಟೆಗಳ ಕಾಲ, ತೇಜಸ್ವಿ ಯಾದವ್ ಅವರನ್ನು ಎಂಟು ಗಂಟೆಗಳ ಕಾಲ, ರಾಬ್ರಿ ದೇವಿ ಮತ್ತು ಮಿಸಾ ಭಾರ್ತಿ ಅವರನ್ನು ತಲಾ ಮೂರು ಗಂಟೆಗಳ ಕಾಲ ಪಾಟ್ನಾದಲ್ಲಿ ವಿಚಾರಣೆ ನಡೆಸಿತ್ತು. ರಾಬ್ರಿ ದೇವಿ, ಮಿಸಾ ಭಾರತಿ, ಹೇಮಾ ಯಾದವ್, ಅಮಿತ್ ಕತ್ಯಾಲ್, ಹೃದಯಾನಂದ್ ಚೌಧರಿ ಮತ್ತು ಇತರರು 600 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಬಿಹಾರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ: ಆರ್​ಜೆಡಿ- ಜೆಡಿಯು ಸಭೆ, ವಿವಾದ ಸೃಷ್ಟಿಸಿದ ಲಾಲು ಪುತ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.