ETV Bharat / bharat

ಬೆಳಗಾವಿಯಲ್ಲಿ ಡಿಸೆಂಬರ್​​ 26ರಂದು ಇವಿಎಂ ವಿರುದ್ಧ ಆಂದೋಲನಕ್ಕೆ ಕಾಂಗ್ರೆಸ್​ ಚಾಲನೆ ನೀಡುವ ಸಾಧ್ಯತೆ

ಮಹಾತ್ಮಾ ಗಾಂಧಿ ಅವರು 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್​ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಆ ಅಧಿವೇಶನದ 100 ನೇ ವಾರ್ಷಿಕೋತ್ಸವದ ನಿಮಿತ್ತ ಬೆಳಗಾವಿಯಲ್ಲಿ ಸಿಡಬ್ಲ್ಯೂಸಿ ಸಭೆ ನಡೆಯಲಿದ್ದು, ಬೆಳಗಾವಿಯಲ್ಲಿ ದೊಡ್ಡ ರ‍್ಯಾಲಿ ಕೂಡಾ ನಡೆಯಲಿದೆ.

congress-top-brass-meets-to-deliberate-on-recent-poll-reverses
ಬೆಳಗಾವಿಯಲ್ಲಿ ಡಿಸೆಂಬರ್​​ 26ರಿಂದ ಇವಿಎಂ ವಿರುದ್ಧ ಕಾಂಗ್ರೆಸ್​ ಆಂದೋಲನ ಸಾಧ್ಯತೆ (ETV Bharat)
author img

By ETV Bharat Karnataka Team

Published : Nov 29, 2024, 9:41 PM IST

ನವದೆಹಲಿ: ಡಿಸೆಂಬರ್ 26 ರಂದು ಕರ್ನಾಟಕದ ಬೆಳಗಾವಿಯಿಂದ ಇವಿಎಂಗಳ ವಿರುದ್ಧ ಕಾಂಗ್ರೆಸ್ ರಾಷ್ಟ್ರವ್ಯಾಪಿ ಆಂದೋಲನ ಪ್ರಾರಂಭಿಸಲಿದ್ದು. ಸಿಡಬ್ಲ್ಯೂಸಿ ಸಭೆಯ ನಂತರ ಬೃಹತ್ ರ‍್ಯಾಲಿ ನಡೆಯಲಿದೆ ಎಂದು ಕಾಂಗ್ರೆಸ್​ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

1924 ರಲ್ಲಿ ಇದೇ ದಿನದಂದು ಮಹಾತ್ಮಾ ಗಾಂಧಿಯವರು ಕಾಂಗ್ರೆಸ್​ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಇದು ಅವರ ಮೊದಲ ಮತ್ತು ಕೊನೆಯ ಅಧ್ಯಕ್ಷ ಪಟ್ಟವಾಗಿದೆ. ಈ ದಿನದ 100 ನೇ ವಾರ್ಷಿಕೋತ್ಸವದ ನಿಮಿತ್ತ ಬೆಳಗಾವಿಯಲ್ಲಿ ಕಾಂಗ್ರೆಸ್​​​​​​ ಕಾರ್ಯಕಾರಿ ಮಂಡಳಿ - ಸಿಡಬ್ಲ್ಯುಸಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ದೇಶದ ಎಲ್ಲ ಕಾಂಗ್ರೆಸ್​​​​​​​​​​ ರಾಷ್ಟ್ರೀಯ ನಾಯಕರು, ಕಾಂಗ್ರೆಸ್​ ಆಡಳಿತ ಇರುವ ಮುಖ್ಯಮಂತ್ರಿಗಳು ಭಾಗವಹಿಸಲಿದ್ದು, ಸಭೆ ಮುಕ್ತಾಯದ ಬಳಿಕ ಅತಿ ದೊಡ್ಡ ರ‍್ಯಾಲಿ ಆಯೋಜಿಸಲಾಗಿದೆ.

ಪಕ್ಷದ ಮೂಲಗಳ ಪ್ರಕಾರ, ಶುಕ್ರವಾರ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಹಲವಾರು ಸದಸ್ಯರು ಇವಿಎಂಗಳ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ನೂತನ ಸಂಸದೆ ಪ್ರಿಯಾಂಕಾ ಗಾಂಧಿ, ನಿರ್ಣಾಯಕ ಕ್ರಮಕ್ಕೆ ಇದು ಸುಸಮಯ ಎಂದು ಹೇಳಿದ್ದಾರೆ. ಇನ್ನು ಕೆಲ ಪಕ್ಷದ ಆಂತರಿಕ ಮೂಲಗಳ ಹೇಳಿಕೆ ಪ್ರಕಾರ, ಇವಿಎಂಗಳ ವಿರುದ್ಧದ ಉದ್ದೇಶಿತ ಆಂದೋಲನವು ಚುನಾವಣಾ ಆಯೋಗವನ್ನೇ ಕೇಂದ್ರೀಕರಿಸಿ ರೂಪಿಸಲಾಗುತ್ತದೆ. ಆಯೋಗದಿಂದ ಆಗುವ ಲೋಪಗಳಿಂದಲೇ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆಯನ್ನು ಉಂಟುಮಾಡಿದೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ಭಾರತ್ ಜೋಡೋ ಯಾತ್ರೆ ಮಾದರಿಯಲ್ಲಿ ಚಳವಳಿ: 2022 ರಲ್ಲಿ ಅಹಮದಾಬಾದ್‌ನ ಮಹಾತ್ಮ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿದ ಬಳಿಕ ರಾಹುಲ್ ಗಾಂಧಿ ಅವರು ದ್ವೇಷ ರಾಜಕಾರಣದ ವಿರುದ್ಧ ಭಾರತ್ ಜೋಡೋ ಯಾತ್ರೆ ಪ್ರಾರಂಭಿಸಿದ್ದರು. ಇದೇ ರೀತಿಯಲ್ಲಿ ಇವಿಎಂಗಳ ದುರ್ಬಳಕೆ ವಿರುದ್ಧ ಉದ್ದೇಶಿತ ರ‍್ಯಾಲಿ ನಡೆಸಲು ನಿರ್ಧರಿಸಲಾಗಿದೆ ಮತ್ತು ಈ ಚಳವಳಿಯು ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿದು ಬಂದಿದೆ. ಕರ್ನಾಟಕ ಸರ್ಕಾರ ಈ ಹಿಂದೆ ವಿಧಾನಸಭೆಯ ಜಂಟಿ ಅಧಿವೇಶನ ಕರೆಯುವ ಮೂಲಕ, ಬೆಳಗಾವಿ ಕಾಂಗ್ರೆಸ್​ ಅಧಿವೇಶನದ 100 ನೇ ವಾರ್ಷಿಕೋತ್ಸವ ಆಚರಿಸಲು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿಕೊಂಡಿತ್ತು.

ಇವಿಎಂ ವಿರುದ್ಧ ಕಾಂಗ್ರೆಸ್​​​​​​​​​ ಅನುಮಾನ ಮತ್ತಷ್ಟು ಪ್ರಬಲ: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲನುಭವಿಸಿದ ನಂತರ ಇವಿಎಂ ವಿರುದ್ಧ ಕಾಂಗ್ರೆಸ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಎರಡೂ ರಾಜ್ಯಗಳ ಫಲಿತಾಂಶವನ್ನು ಪಕ್ಷದ ನಾಯಕರು ಅರಗಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಆದರೆ, ಈ ಮೊದಲಿನಿಂದಲೂ ಕಾಂಗ್ರೆಸ್​​​​​ ಇವಿಎಂ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿದೆ.

ಸಿಡಬ್ಲ್ಯೂಸಿ ಸದಸ್ಯ ಜಗದೀಶ್ ಠಾಕೂರ್ ಹೇಳುವುದಿಷ್ಟು: ನಾವು ಈ ಬಗ್ಗೆ ಆಂತರಿಕ ಸಮಿತಿಯನ್ನು ರಚಿಸಿದ್ದೇವೆ, ಅದರಲ್ಲಿ ಹಿರಿಯ ನಾಯಕರಾದ ದಿಗ್ವಿಜಯ್ ಸಿಂಗ್ ಮತ್ತು ಕಮಲ್ ನಾಥ್ ಅವರನ್ನು ಸದಸ್ಯರನ್ನಾಗಿ ಮಾಡಿದ್ದೇವೆ. ಅವರು ತಜ್ಞರೊಂದಿಗೆ ಈ ಬಗ್ಗೆ ಸಮಾಲೋಚಿಸಿದ್ದರು ಮತ್ತು ಇವಿಎಂಗಳನ್ನು ಹ್ಯಾಕ್ ಮಾಡಬಹುದು ಎಂದು ಅವರು ಹೇಳಿದ್ದಾರೆ. ವಿವಿಪ್ಯಾಟ್ ಸ್ಲಿಪ್‌ಗಳ ಸೆಂಟ್ ಮ್ಯಾಚಿಂಗ್ ಅನ್ನು ಚುನಾವಣಾ ಆಯೋಗ ನಡೆಸಬೇಕು. ಸಾಂವಿಧಾನಿಕ ಆದೇಶವನ್ನು ಜಾರಿಗೆ ತರಲು ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯಾಗಬೇಕು ಎಂದು ನಮ್ಮ ಬೇಡಿಕೆಯನ್ನು ತಿರಸ್ಕರಿಸಲಾಗಿದೆ. ಇವಿಎಂಗಳ ಪಾತ್ರದ ಬಗ್ಗೆ ಹೆಚ್ಚಿನ ಸಂಖ್ಯೆಯ ಮತದಾರರ ಮನಸ್ಸಿನಲ್ಲಿ ಅನುಮಾನವಿದ್ದರೆ ಅದನ್ನು ಸರಿಪಡಿಸಬೇಕು ಎಂದು ಸಿಡಬ್ಲ್ಯೂಸಿ ಸದಸ್ಯ ಜಗದೀಶ್ ಠಾಕೂರ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಕಾಂಗ್ರೆಸ್ ಈಗಾಗಲೇ ಮಹಾರಾಷ್ಟ್ರದ ಚುನಾವಣಾ ಪ್ರಕ್ರಿಯೆಯಲ್ಲಿನ ವಿವಿಧ ನ್ಯೂನತೆಗಳನ್ನು ಪಟ್ಟಿ ಮಾಡಿ ವಿವರವಾದ ದಾಖಲೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಕ್ಷೇತ್ರವಾರು ವೈಪರೀತ್ಯಗಳನ್ನು ವಿವರಿಸಲು ಅದರೊಂದಿಗೆ ಸಭೆ ನಡೆಸುವಂತೆ ಕೋರಲಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.

ನಾವು ಇವಿಎಂಗಳನ್ನು ವಿರೋಧಿಸುತ್ತೇವೆ ಹಾಗೂ ಯಂತ್ರಗಳ ಉದ್ದೇಶಿತ ಕುಶಲತೆಯನ್ನು ತನಿಖೆ ಮಾಡಬೇಕು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಹಿರಿಯ ಪದಾಧಿಕಾರಿಯೊಬ್ಬರು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ಧೈರ್ಯಗುಂದದಂತೆ ಕಾರ್ಯಕರ್ತರಿಗೆ ಮನವಿ: ಲೋಕಸಭೆ ಚುನಾವಣೆಯಲ್ಲಿ ಇಂಡಿ ಒಕ್ಕೂಟ ಮತ್ತು ಕಾಂಗ್ರೆಸ್ ಯಶಸ್ಸು ಗಳಿಸಿದೆ. ಫಲಿತಾಂಶದ ಬಳಿಕ ಉನ್ನತ ಮಟ್ಟದಲ್ಲಿದ್ದ ಪಕ್ಷದ ಕಾರ್ಯಕರ್ತರಿಗೆ ಇತ್ತೀಚಿನ ರಾಜ್ಯ ಫಲಿತಾಂಶಗಳು ಉತ್ತೇಜನಕಾರಿಯಾಗಿಲ್ಲ. ಆದರೆ ಅವರು ಭರವಸೆ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದು CWC ಸದಸ್ಯ ಅವಿನಾಶ್ ಪಾಂಡೆ ಪಕ್ಷದ ಕಾರ್ಯಕರ್ತರಲ್ಲಿ ಧೈರ್ಯ ತುಂಬಿದ್ದಾರೆ.

ಡಿಸೆಂಬರ್ 28 ರಂದು ಕಾಂಗ್ರೆಸ್ ಸಂಸ್ಥಾಪನಾ ದಿನಕ್ಕೆ ಎರಡು ದಿನಗಳ ಮೊದಲು ಬೆಳಗಾವಿ ರ‍್ಯಾಲಿ ನಡೆಯಲಿದೆ. ಇನ್ನು ಪಕ್ಷದ ಮುಖ್ಯಸ್ಥ ಖರ್ಗೆ ಅವರು ಇತ್ತೀಚಿನ ರಾಜ್ಯದಲ್ಲಿ ನಡೆದ ಚುನಾವಣೆಗಳ ಬಗ್ಗೆ ಪರಿಶೀಲಿಸಲು ಸಮಿತಿಗಳನ್ನು ರಚಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ: EVM ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ: ಅಭ್ಯರ್ಥಿಗಳಿಂದ 14 ಹಂತದ ಪರಿಶೀಲನೆ - ಇನ್ಫೋ ಇನ್ ಡೇಟಾ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.