ETV Bharat / bharat

ಬಿಹಾರ, ಆಂಧ್ರಕ್ಕೆ ವಿಶೇಷ ಸ್ಥಾನಮಾನ; ಬಿಜೆಪಿ ಹಾಗೂ ಮಿತ್ರಪಕ್ಷಗಳ ಹಣಿಯಲು ಕಾಂಗ್ರೆಸ್ ಪ್ಲಾನ್​ - Congress to Target BJP

ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿ ಜೆಡಿಯು ಮತ್ತು ಟಿಡಿಪಿ ಪ್ರಮುಖ ಪಾಲುದಾರ ಪಕ್ಷಗಳಾಗಿವೆ. ಬಿಹಾರ, ಆಂಧ್ರಪ್ರದೇಶದ ಎರಡು ರಾಜ್ಯಗಳ ವಿಶೇಷ ಸ್ಥಾನಮಾನವು ವಿಪಕ್ಷ ಕಾಂಗ್ರೆಸ್​ ಗಮನ ಸೆಳೆದಿದೆ. ಇದೇ ವೇಳೆ, ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಹಣಿಯಲು ನಿರ್ಧರಿಸಿದೆ.

Etv Bharat
Etv Bharat (Etv Bharat)
author img

By ETV Bharat Karnataka Team

Published : Jun 29, 2024, 11:03 PM IST

ನವದೆಹಲಿ: ಸಂಸತ್ತಿನಲ್ಲಿ ಎನ್‌ಡಿಎಯನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್, ಬಿಹಾರ ಮತ್ತು ಆಂಧ್ರಪ್ರದೇಶದ ರಾಜ್ಯಗಳಿಗೆ ವಿಶೇಷ ಸ್ಥಾನಮಾನದ ವಿಷಯದಲ್ಲಿ ಬಿಜೆಪಿ ಮಿತ್ರಪಕ್ಷಗಳಾದ ಟಿಡಿಪಿ, ಜೆಡಿಯು ಪಕ್ಷವನ್ನು ಹಣಿಯಲು ಮುಂದಾಗಿದೆ.

ಎರಡು ರಾಜ್ಯಗಳಿಗೆ ವಿಶೇಷ ಸ್ಥಾನಮಾನದ ವಿಷಯವು ಕಳೆದ ಹಲವಾರು ವರ್ಷಗಳಿಂದ ಚರ್ಚಿಸಲ್ಪಟ್ಟಿದೆ. ಆದರೆ, ಜೆಡಿಯು ಮತ್ತು ಟಿಡಿಪಿ ಎರಡೂ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಪ್ರಮುಖ ಪಾಲುದಾರರಾದ ನಂತರ ರಾಜಕೀಯ ಮಹತ್ವವನ್ನು ಪಡೆದುಕೊಂಡಿದೆ. ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದರೆ, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿದೆ.

ಕಾಂಗ್ರೆಸ್ ಒಳಗಿನವರ ಪ್ರಕಾರ, ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ವಿಷಯವನ್ನು ಸಂಸತ್ತಿನಲ್ಲಿ ಮತ್ತು ಆಯಾ ರಾಜ್ಯಗಳಲ್ಲಿ ಪಕ್ಷದ ಘಟಕವು ಎತ್ತಲಿದೆ. ಅಲ್ಲದೇ, ಜುಲೈನಲ್ಲಿ ಕೇಂದ್ರ ಬಜೆಟ್ 2024-25 ಮಂಡನೆಗೆ ಮುಂಚಿತವಾಗಿ ಎರಡು ಎನ್‌ಡಿಎ ಪಾಲುದಾರ ಪಕ್ಷಗಳು ಮತ್ತು ಬಿಜೆಪಿಯನ್ನು ಸಾರ್ವಜನಿಕವಾಗಿ ಇಕ್ಕಟ್ಟಿಗೆ ಸಿಲುಕಿಸಲು ನಿರ್ಧರಿಸಿದೆ.

ನಿತೀಶ್ ಕುಮಾರ್ ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬಗ್ಗೆ ದೀರ್ಘಕಾಲ ಮಾತನಾಡುತ್ತಿದ್ದಾರೆ. ಈಗ ಅವರು ಎನ್‌ಡಿಎಯ ಪ್ರಮುಖ ಭಾಗವಾಗಿದ್ದಾರೆ. ಅವರು ನಿಜವಾಗಿಯೂ ಬಿಜೆಪಿ ಅಧಿಕಾರದಲ್ಲಿ ಉಳಿಯಲು ಸಹಾಯ ಮಾಡುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಇದು ಅತ್ಯಂತ ಅನುಕೂಲಕರ ಸಮಯ. ನಿತೀಶ್ ಕುಮಾರ್ ಸರ್ಕಾರ ಇದಕ್ಕಾಗಿ ಕ್ಯಾಬಿನೆಟ್ ನಿರ್ಣಯವನ್ನು ಅಂಗೀಕರಿಸಬೇಕು ಮತ್ತು ಅದನ್ನು ಕೇಂದ್ರಕ್ಕೆ ಆದಷ್ಟು ಬೇಗ ಕಳುಹಿಸಬೇಕು. ಈ ವಿಷಯವನ್ನು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ ಎಂದು ಬಿಹಾರದ ಸಸಾರಾಮ್‌ನ ಕಾಂಗ್ರೆಸ್ ಸಂಸದ ಮನೋಜ್ ಕುಮಾರ್ 'ಈಟಿವಿ ಭಾರತ್‌'ಗೆ ತಿಳಿಸಿದರು.

ಬಿಹಾರವು ಹಿಂದುಳಿದ ರಾಜ್ಯವಾಗಿದೆ. ವಿಶೇಷ ಸ್ಥಾನಮಾನದಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತದೆ. ವರ್ಧಿತ ಬಜೆಟ್ ಹಂಚಿಕೆಗಳು ಮತ್ತು ಕೇಂದ್ರ ನಿಧಿಗಳ ಉದಾರ ಹರಿವು ರಾಜ್ಯಕ್ಕೆ ಅಭಿವೃದ್ಧಿಯನ್ನು ವೇಗಗೊಳಿಸಲು ಬಳಸಬಹುದು. ಬಿಹಾರದಂತೆಯೇ, ವಿಶೇಷ ಸ್ಥಾನಮಾನದ ವಿಷಯವು 2013 ರಿಂದ ಆಂಧ್ರಪ್ರದೇಶದ ಜನರಲ್ಲಿ ಭಾರಿ ಚರ್ಚೆಯನ್ನುಂಟು ಹಾಕಿದೆ.

ಆಂಧ್ರಪ್ರದೇಶದ ವಿಶೇಷ ಸ್ಥಾನಮಾನದ ಬಗ್ಗೆ ಹಿಂದಿನ ರಾಜ್ಯ ಸರ್ಕಾರಗಳು ಕೇಂದ್ರದಿಂದ ಅನುಮೋದನೆ ಪಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ಕೇಂದ್ರದಲ್ಲಿ 'ಇಂಡಿಯಾ' ಒಕ್ಕೂಟ ಅಧಿಕಾರಕ್ಕೆ ಬಂದರೆ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಲಾಗುವುದು ಎಂದು ವಿಧಾನಸಭೆ ಚುನಾವಣೆಯ ಸಮಯದಲ್ಲಿ ಘೋಷಣೆ ಮಾಡಿದ್ದೇವು. ಈಗಲೂ ಈ ವಿಷಯಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಆಂಧ್ರಪ್ರದೇಶದ ಎಐಸಿಸಿ ಉಸ್ತುವಾರಿ ಮಾಣಿಕಂ ಟ್ಯಾಗೋರ್ 'ಈಟಿವಿ ಭಾರತ್‌'ಗೆ ಹೇಳಿದರು.

ತಮಿಳುನಾಡಿನ ವಿರುದುನಗರದ ಲೋಕಸಭಾ ಸಂಸದರೂ ಆಗಿರುವ ಟ್ಯಾಗೋರ್, ಪ್ರಧಾನಿ ಮೋದಿಯವರೊಂದಿಗೆ ಈಗ ಉತ್ತಮ ಸಂಬಂಧ ಹೊಂದಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಂದ ಜನರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಈ ಹಿಂದೆ ಇದೇ ವಿಚಾರವಾಗಿ ನಾಯ್ಡು ಎನ್‌ಡಿಎ ತೊರೆದಿದ್ದರು. ಅವರು ಈಗ ಏನು ಮಾಡುತ್ತಾರೆಂದು ನೋಡೋಣ ಎಂದೂ ಸವಾಲೆಸೆದರು.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಹಿಂದಿನ ಯುಪಿಎ ಸರ್ಕಾರ ಭರವಸೆ ನೀಡಿತ್ತು. 2014 ರಲ್ಲಿ ಯುಪಿಎ ಅಧಿಕಾರ ಕಳೆದುಕೊಂಡ ನಂತರ ಮತ್ತು ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಈ ಸಮಸ್ಯೆ ಬಾಕಿ ಉಳಿದಿದೆ.

ಇದನ್ನೂ ಓದಿ: ದೆಹಲಿ ಸಿಎಂ ಕೇಜ್ರಿವಾಲ್​ಗೆ ಮತ್ತೆ ಸೆರೆವಾಸ: 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.