ETV Bharat / bharat

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 370, ಎನ್‌ಡಿಎಗೆ 400ಕ್ಕೂ ಹೆಚ್ಚು ಸೀಟು: ಪ್ರಧಾನಿ ಮೋದಿ

author img

By ANI

Published : Feb 5, 2024, 7:36 PM IST

Updated : Feb 5, 2024, 8:01 PM IST

ಬರುವ ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ 400ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

PM Modi predicts at least 370 seats for BJP, over 400 for NDA in next Lok Sabha polls

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಮತ್ತು ಬಿಜೆಪಿ ಕನಿಷ್ಠ 370 ಸ್ಥಾನ ಗೆಲ್ಲಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಶ್ವಾಸ ವ್ಯಕ್ತಪಡಿಸಿದರು. ವಿರೋಧ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯವನ್ನೇ ಕಳೆದುಕೊಂಡಿವೆ ಮತ್ತು ದೀರ್ಘಕಾಲದವರೆಗೆ ವಿರೋಧ ಪಕ್ಷದ ಸ್ಥಾನದಲ್ಲಿಯೇ ಉಳಿಯಲಿವೆ ಎಂಬುದು ತಮಗೆ ಮನವರಿಕೆಯಾಗಿದೆ ಎಂದು ಮೋದಿ ಹೇಳಿದರು.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಲೋಕಸಭೆಯಲ್ಲಿ ಉತ್ತರಿಸಿ ಪ್ರಧಾನಿ ಮಾತನಾಡಿದರು. "ನಾನು ರಾಷ್ಟ್ರದ ಮನಸ್ಥಿತಿಯನ್ನು ಅಳೆಯಬಲ್ಲೆ. ಎನ್​ಡಿಎ ಖಂಡಿತವಾಗಿಯೂ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಮತ್ತು ಬಿಜೆಪಿಗೆ ಕನಿಷ್ಠ 370 ಸ್ಥಾನ ಸಿಗಲಿವೆ" ಎಂದು ಪ್ರಧಾನಿ ಹೇಳಿದರು. ಸರ್ಕಾರದ ಮೂರನೇ ಅವಧಿ ಆರಂಭವಾಗುವುದು ಬಹಳ ದೂರವಿಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಮಾತನಾಡಿದ ಪ್ರಧಾನಿ, ಒಂದೇ ಉತ್ಪನ್ನವನ್ನು ಮತ್ತೆ ಮತ್ತೆ ಲಾಂಚ್ ಮಾಡುವ ಪ್ರಯತ್ನದಿಂದಾಗಿ ಕಾಂಗ್ರೆಸ್ ಶೀಘ್ರದಲ್ಲೇ ತನ್ನ ಅಂಗಡಿಯನ್ನು ಮುಚ್ಚಬೇಕಾಗಬಹುದು ಎಂದು ಹೇಳಿದರು. "ಇದು ಚುನಾವಣಾ ಸಮಯ ಮತ್ತು ನೀವು ಸ್ವಲ್ಪ ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು. ಹೊಸದನ್ನು ತರಬೇಕಾಗಿತ್ತು ಮತ್ತು ಜನರಿಗೆ ಸಂದೇಶ ನೀಡಬೇಕಿತ್ತು. ಆದರೆ ನೀವು ದಯನೀಯವಾಗಿ ವಿಫಲರಾಗಿರುವಿರಿ ಎಂದು ಮೋದಿ ತೀಕ್ಷ್ಣವಾಗಿ ಹೇಳಿದರು.

ಇನ್ನು ಹೆಚ್ಚೆಂದರೆ 100 ರಿಂದ 125 ದಿನಗಳು ಉಳಿದಿವೆ ಎಂದು ಅವರು ಮುಂಬರುವ ಲೋಕಸಭಾ ಚುನಾವಣೆಯನ್ನು ಉಲ್ಲೇಖಿಸಿ ಹೇಳಿದರು. "ಅಬ್​ಕಿ ಬಾರ್​" ಎಂದು ಮೋದಿ ಹೇಳಿದಾಗ, ಬಿಜೆಪಿ ಸದಸ್ಯರು ಒಗ್ಗಟ್ಟಾಗಿ "ಚಾರ್​ ಸೌ ಪಾರ್" ಎಂದು ಹೇಳಿದರು. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಮೋದಿ, ಖರ್ಗೆ ಕೂಡ ಇದನ್ನೇ ಹೇಳುತ್ತಿದ್ದಾರೆ ಎಂದರು.

ಎನ್​ಡಿಎಯ ಮೂರನೇ ಅವಧಿಯಲ್ಲಿ ಇನ್ನೂ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಈ ನಿರ್ಧಾರಗಳು ದೇಶದ ಮುಂದಿನ 1,000 ವರ್ಷಗಳ ಭವಿಷ್ಯಕ್ಕೆ ಅಡಿಪಾಯ ಹಾಕಲಿವೆ ಎಂದರು.

ವಂಶಪಾರಂಪರ್ಯ ರಾಜಕಾರಣದ ವಿಷಯದ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಉತ್ತಮ ವಿರೋಧ ಪಕ್ಷವಾಗಿ ಕೆಲಸ ಮಾಡಲು ಕಾಂಗ್ರೆಸ್​ಗೆ ಉತ್ತಮ ಅವಕಾಶವಿತ್ತು, ಆದರೆ ಅದನ್ನು ನಿಭಾಯಿಸುವಲ್ಲಿ ಅದು ವಿಫಲವಾಗಿದೆ ಎಂದು ಹೇಳಿದರು. ವಿರೋಧ ಪಕ್ಷದ ಕೆಲ ನಾಯಕರು ತಮ್ಮ ಲೋಕಸಭಾ ಕ್ಷೇತ್ರಗಳನ್ನು ಬದಲಾಯಿಸಲು ಮುಂದಾಗಿದ್ದಾರೆ ಮತ್ತು ಇನ್ನೂ ಕೆಲವರು ರಾಜ್ಯಸಭೆಗೆ ಹೋಗಲು ಯೋಜಿಸುತ್ತಿದ್ದಾರೆ ಎಂದು ಅವರು ನುಡಿದರು.

ಇದನ್ನೂ ಓದಿ: ಉತ್ತರ ಪ್ರದೇಶ ಬಜೆಟ್: 2025ರ ಮಹಾಕುಂಭ ಮೇಳಕ್ಕೆ ₹100 ಕೋಟಿ ಮೀಸಲು

Last Updated : Feb 5, 2024, 8:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.