ETV Bharat / bharat

ಕಾಂಗ್ರೆಸ್​ನ 43 ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ; ಕಮಲ್​​ ನಾಥ್, ಅಶೋಕ್ ಗೆಹ್ಲೋಟ್ ಪುತ್ರರು ಕಣಕ್ಕೆ

ಗುಜರಾತ್‌, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್​ ಪಕ್ಷ ತನ್ನ 43 ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.

Congress Announces 2nd List Of 43 LS Candidates; Nakul Nath In Chhindwara, Vaibhav Gehlot In Jalore
ಕಾಂಗ್ರೆಸ್​ನ 43 ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ; ಕಮಲ್​​ ನಾಥ್, ಅಶೋಕ್ ಗೆಹ್ಲೋಟ್ ಪುತ್ರರು ಕಣಕ್ಕೆ
author img

By ETV Bharat Karnataka Team

Published : Mar 12, 2024, 9:37 PM IST

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಗುಜರಾತ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 43 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಈ ಹೊಸ ಪಟ್ಟಿಯಲ್ಲಿ ಮಧ್ಯಪ್ರದೇಶದ ಸಿಎಂ ಕಮಲ್​ ನಾಥ್ ಪುತ್ರ ನಕುಲ್ ನಾಥ್, ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಗೆಹ್ಲೋಟ್ ಸೇರಿ ಹಲವರಿಗೆ ಟಿಕೆಟ್​ ಘೋಷಿಸಲಾಗಿದೆ.

ಮಾರ್ಚ್​ 8ರಂದು ರಾಹುಲ್ ಗಾಂಧಿ ಸೇರಿ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಲಾಗಿತ್ತು. ಇಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತಷ್ಟು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ. ಅಸ್ಸೋಂನ 12 ಕ್ಷೇತ್ರ, ಮಧ್ಯಪ್ರದೇಶದ 10 ಕ್ಷೇತ್ರ, ಗುಜರಾತ್‌ನ 7 ಕ್ಷೇತ್ರ, ರಾಜಸ್ಥಾನದ 10 ಕ್ಷೇತ್ರ, ಉತ್ತರಾಖಂಡದ 3 ಕ್ಷೇತ್ರ, ದಮನ್ ಮತ್ತು ದಿಯು ಲೋಕಸಭೆ ಕ್ಷೇತ್ರ ಸೇರಿ 43 ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಈ ಪೈಕಿ 10 ಸಾಮಾನ್ಯ ಅಭ್ಯರ್ಥಿಗಳು, 13 ಹಿಂದುಳಿದ ವರ್ಗದ ಅಭ್ಯರ್ಥಿಗಳು, 10 ಎಸ್‌ಸಿ ಅಭ್ಯರ್ಥಿಗಳು, 9 ಎಸ್‌ಟಿ ಅಭ್ಯರ್ಥಿಗಳು ಮತ್ತು ಓರ್ವ ಮುಸ್ಲಿಂ ಅಭ್ಯರ್ಥಿ ಸೇರಿದ್ದಾರೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರನ್ನು ಛಿಂದ್ವಾರಾ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಉಳಿದಂತೆ ಫೂಲ್ ಸಿಂಗ್ ಬರಯ್ಯ (ಭಿಂಡ್‌), ಪಂಕಜ್ ಅಹಿರ್ವಾರ್ (ಟಿಕಮ್‌ಗಢ), ಸಿದ್ಧಾರ್ಥ್ ಕುಶ್ವಾಹ (ಸತ್ನಾ), ಕಮಲೇಶ್ವರ್ ಪಟೇಲ್ (ಸಿಧಿ), ಓಂಕಾರ್ ಸಿಂಗ್ ಮಾರ್ಕಮ್ (ಮಂಡ್ಲಾ), ರಾಜೇಂದ್ರ ಮಾಳವಿಯಾ (ದೇವಾಸ್‌), ರಾಧೇಶ್ಯಾಮ್ ಮುವೆಲ್ (ಧಾರ್‌), ಪೊರ್ಲಾಲ್ ಖಾರ್ಟೆ (ಖಾರ್ಗೋನ್‌), ರಾಮು ಟೇಕಮ್ (ಬೆತುಲ್‌) ಅವರಿಗೆ ಟಿಕೆಟ್​ ನೀಡಲಾಗಿದೆ.

ಅಸ್ಸೋಂನಲ್ಲಿ ಗೌರವ್ ಗೊಗೊಯ್ (ಜೋರ್ಹತ್), ಗರ್ಜನ್ ಮಶ್ಹರಿ (ಕೊಕ್ರಜಾರ್‌), ರಾಕಿಬುಲ್ ಹುಸೇನ್ (ಧುಬ್ರಿ), ದೀಪ್ ಬಯಾನ್ (ಬರ್ಪೇಟಾ), ಮೀರಾ ಬಾರ್ಥಕುರ್ ಗೋಸ್ವಾಮಿ (ಗುವಾಹಟಿ) ಸೇರಿದಂತೆ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ರಾಜಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಅವರಿಗೆ ಜಲೋರ್ ಲೋಕಸಭಾ ಕ್ಷೇತ್ರದ ಟಿಕೆಟ್​ ಘೋಷಿಸಲಾಗಿದೆ.

ಸೋಮವಾರವಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ರಾಹುಲ್ ಕಸ್ವಾನ್ ರಾಜಸ್ಥಾನದ ಚುರು ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಕಸ್ವಾನ್ ಚುರು ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಉಳಿದಂತೆ ತಾರಾಚಂದ್ ಮೀನಾ (ಉದಯಪುರ), ಉದಯಲಾಲ್ ಅಜಾನಾ (ಚಿತ್ತೋಡಗಢ), ಲಲಿತ್ ಯಾದವ್ (ಅಲ್ವಾರ್‌), ಸಂಜನಾ ಜಾತವ್ (ಭರತ್‌ಪುರ), ಹರೀಶ್ ಚಂದ್ರ ಮೀನಾ (ಟೋಂಕ್ - ಸವಾಯಿ ಮಾಧೋಪುರ), ಕರಣ್ ಸಿಂಗ್ ಉಚ್ಚಿಯಾರ್ಡಾ (ಜೋಧ್‌ಪುರ) ಅವರಿಗೆ ಕಾಂಗ್ರೆಸ್​ ಟಿಕೆಟ್​ ನೀಡಿದೆ.

ಗುಜರಾತ್‌ನಲ್ಲಿ ನಿತೀಶ್‌ಭಾಯ್ ಲಾಲನ್ (ಕಛ್), ಗೆನಿಬೆನ್ ಠಾಕೋರ್ (ಬನಸ್ಕಾಂತ), ರೋಹನ್ ಗುಪ್ತಾ (ಅಹಮದಾಬಾದ್ ಪೂರ್ವ), ಭರತ್ ಮಕ್ವಾನಾ (ಅಹಮದಾಬಾದ್ ಪಶ್ಚಿಮ), ಲಲಿತಭಾಯಿ ವಸೋಯಾ (ಪೋರಬಂದರ್‌), ಸಿದ್ಧಾರ್ಥ್ ಚೌಧರಿ (ಬಾರ್ಡೋಲಿ), ಅನಂತ್‌ಭಾಯ್ ಪಟೇಲ್ (ವಲ್ಸಾದ್‌) ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಈ 43 ಅಭ್ಯರ್ಥಿಗಳ ಘೋಷಣೆಯೊಂದಿಗೆ ಕಾಂಗ್ರೆಸ್ ಇದುವರೆಗೆ 82 ಲೋಕಸಭಾ ಸ್ಥಾನಗಳಿಗೆ ಹೆಸರುಗಳನ್ನು ಘೋಷಿಸಿದೆ. ಬಿಜೆಪಿ ಕೂಡ 195 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಇದನ್ನೂ ಓದಿ: ಲೋಕ ಸಮರಕ್ಕೆ ಕಾಂಗ್ರೆಸ್​ ಮೊದಲ ಪಟ್ಟಿ ಬಿಡುಗಡೆ: ರಾಹುಲ್ ಗಾಂಧಿ ಸೇರಿ 39 ಅಭ್ಯರ್ಥಿಗಳ ಹೆಸರು ಪ್ರಕಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.