ETV Bharat / bharat

ಶಿರಡಿಯಲ್ಲಿ ಸಾಯಿಬಾಬಾ ದರ್ಶನ ಪಡೆದ ಚಿರಾಗ್ ಪಾಸ್ವಾನ್; 'ಬಿಹಾರದಲ್ಲಿ ಎನ್‌ಡಿಎ 40 ಸ್ಥಾನ ಗೆಲ್ಲಲಿದೆ' ಎಂದು ವಿಶ್ವಾಸ - Chirag Paswan

author img

By ETV Bharat Karnataka Team

Published : Mar 21, 2024, 7:53 PM IST

ಚಿರಾಗ್ ಪಾಸ್ವಾನ್ ಇಂದು ಕುಟುಂಬ ಸಮೇತ ಶಿರಡಿಗೆ ಭೇಟಿ ನೀಡಿ ಬಾಬಾರ ದರ್ಶನ ಪಡೆದರು.

chirag-paswan-took-darshan-of-sai-baba-at-shirdi-
ಶಿರಡಿಯಲ್ಲಿ ಸಾಯಿಬಾಬಾರ ದರ್ಶನ ಪಡೆದ ಚಿರಾಗ್ ಪಾಸ್ವಾನ್

ಶಿರಡಿ(ಮಹಾರಾಷ್ಟ್ರ): ಬಿಹಾರದಲ್ಲಿ ಎನ್‌ಡಿಎ ಅಭ್ಯರ್ಥಿಗಳು 40 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಚಿರಾಗ್​ ಪಾಸ್ವಾನ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಲೋಕಜನ ಶಕ್ತಿ ಪಾರ್ಟಿ ಎಲ್​​ಜೆಪಿ ತಾನು ಸ್ಪರ್ಧಿಸಿರುವ ಎಲ್ಲ 5 ಸ್ಥಾನಗಳಲ್ಲೂ ವಿಜಯ ಸಾಧಿಸಲಿದೆ ಎಂದು ಅವರು ಹೇಳಿದ್ದಾರೆ. ಜತೆಗೆ ಪ್ರಧಾನಿ ಮೋದಿಯವರ ಕನಸು ನನಸಾಗಲಿದೆ ಎಂದು ಎಲ್​​​ಜೆಪಿ ಮುಖಂಡ ಚಿರಾಗ್ ಪಾಸ್ವಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರಿಂದು ಕುಟುಂಬಸ್ಥರ ಸಮೇತ (ಮಾರ್ಚ್ 21) ಶಿರಡಿಗೆ ಬಂದು ಸಾಯಿಬಾಬಾರ ದರ್ಶನ ಪಡೆದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೂ ಮುನ್ನ ಕುಟುಂಬದವರು ಶಿರಡಿ ಸಾಯಿಬಾಬಾರ ದರ್ಶನಕ್ಕೆ ಬರಲು ಬಯಸಿದ್ದರು. ಮುಂದಿನ ದಿನಗಳಲ್ಲಿ ಮತ್ತೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಬೇಕು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿಯವರ 400 ಸ್ಥಾನಗಳ ಕನಸು ನನಸಾಗಲಿ ಎಂಬ ಕಾರಣಕ್ಕೆ ಸಾಯಿ ಬಾಬಾರ ದರ್ಶನ ಪಡೆದಿದ್ದೇನೆ ಎಂದರು.

ಬಿಹಾರದಲ್ಲಿ 40 ಸ್ಥಾನ ಗೆಲ್ಲುತ್ತೇವೆ : ಕಳೆದ ಎರಡೂವರೆ ವರ್ಷಗಳಿಂದ ಬಿಹಾರ ರಾಜ್ಯದ ಹಲವು ಗ್ರಾಮಗಳಿಗೆ ಪ್ರವಾಸ ಮಾಡುತ್ತಿದ್ದೇನೆ. ಬಿಹಾರ ರಾಜ್ಯದಲ್ಲಿ 'ಎನ್‌ಡಿಎ' ನಲವತ್ತು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ನಾನು ನಂಬಿದ್ದೇನೆ. ನಮ್ಮ ಪಕ್ಷ ಕೂಡಾ ಸ್ಪರ್ಧಿಸಿರುವ ಎಲ್ಲ ಐದು ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಧಾನಿ ಮೋದಿಯವರ ಕನಸನ್ನು ನನಸು ಮಾಡಲಿದೆ ಎಂದು ಚಿರಾಗ್ ಪಾಸ್ವಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತೇಜಸ್ವಿ ಯಾದವ್ ವಿರುದ್ಧ ಟೀಕಾ ಪ್ರಹಾರ: ತೇಜಸ್ವಿ ಯಾದವ್ ಜೊತೆ ನಿತೀಶ್ ಕುಮಾರ್ ಇದ್ದಾಗ ಚೆನ್ನಾಗಿತ್ತು. ರಾಷ್ಟ್ರೀಯ ಜನತಾ ದಳ ಮತ್ತು ಪ್ರತಿಪಕ್ಷಗಳು ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿವೆ. ಹಾಗಾಗಿ ಏನಾದರೂ ಮಾಡಿ ಮೈತ್ರಿ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಬಿಹಾರದ ಜನರು ನಲವತ್ತು ಸ್ಥಾನಗಳಲ್ಲಿ ಎನ್​​ಡಿಎ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಿದ್ದಾರೆ. ನನ್ನ ಆಪ್ತರು ನನ್ನ ವಿರುದ್ಧ, ಪಕ್ಷದ ವಿರುದ್ಧ ಷಡ್ಯಂತ್ರ ರೂಪಿಸಿದ್ದರು. ನನ್ನ ಜನರು ನನ್ನೊಂದಿಗಿದ್ದರೆ ನನ್ನ ಕುಟುಂಬ ಒಡೆಯುತ್ತಿರಲಿಲ್ಲ ಎಂದು ಚಿರಾಗ್ ಪಾಸ್ವಾನ್ ಇದೇ ವೇಳೆ ಹೇಳಿದರು.

ಇದನ್ನೂ ಓದಿ : ಎನ್​ಡಿಎ ಸಭೆಯಲ್ಲಿ ಪ್ರಧಾನಿ ಮೋದಿ ಕಾಲಿಗೆರಗಿದ ಚಿರಾಗ್ ಪಾಸ್ವಾನ್​: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.