ನವದಹೆಲಿ: ಶ್ರೀಲಂಕಾದ ಎಡಗೈ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಎಲ್ಲ ಸ್ವರೂಪದ ಕ್ರಿಕೆಟ್‌ನಿಂದ ಒಂದು ವರ್ಷದವರೆಗೆ ನಿಷೇಧ ಹೇರಿದೆ. ಅಲ್ಲದೇ ಆರು ತಿಂಗಳ ಕಾಲ ದೇಶೀಯ ಕ್ರಿಕೆಟ್ನಿಂದಲೂ ಬ್ಯಾನ್ ಮಾಡಿ ಆದೇಶ ಮಾಡಿದೆ.
ಐಸಿಸಿ ಭ್ರಷ್ಟಾಚಾರ ನಿಗ್ರಹ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಯವಿಕ್ರಮ ಮೇಲೆ ಈ ನಿಷೇಧ ಹೇರಲಾಗಿದೆ. ಸಂಹಿತೆಯ ಆರ್ಟಿಕಲ್ 2.4.7 ಅನ್ನು ಉಲ್ಲಂಘಿಸಿರುವುದನ್ನು ಜಯವಿಕ್ರಮ ಒಪ್ಪಿಕೊಂಡಿದ್ದಾರೆ. ಈ ಆರ್ಟಿಕಲ್ ಪ್ರಕಾರ ಭ್ರಷ್ಟಾಚಾರ ನಿಗ್ರಹ ಘಟಕ ನಡೆಸುವ ಯಾವುದೇ ತನಿಖೆಯನ್ನು ತಡೆಯುವುದು ಅಥವಾ ವಿಳಂಬಗೊಳಿಸುವುದು, ಯಾವುದೇ ದಾಖಲೆ ಮರೆಮಾಚುವುದು, ತಿದ್ದುವುದು ಅಥವಾ ನಾಶಪಡಿಸುವುದು ಒಳಗೊಂಡಿರುತ್ತದೆ.
ವರದಿ ಪ್ರಕಾರ, ಪ್ರವೀಣ್ ಜಯವಿಕ್ರಮ ವಿರುದ್ಧದ ಈ ಆರೋಪಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಲಂಕಾ ಪ್ರೀಮಿಯರ್ ಲೀಗ್‌ಗೆ ಸಂಬಂಧಿಸಿವೆ. ಈ ಹಿನ್ನೆಲೆ ಅವರ ವಿರುದ್ಧ ಕಲಂ 2.4.7ರ ಅಡಿ ಐಸಿಸಿ ಕ್ರಮ ತೆಗೆದುಕೊಂಡಿದೆ.
ಜಯವಿಕ್ರಮ ಅವರು ಶ್ರೀಲಂಕಾ ಪರ ಐದು ಟೆಸ್ಟ್, ಐದು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಿದ್ದಾರೆ. ಮೂರು ಸ್ವರೂಪಗಳಲ್ಲಿ ಒಟ್ಟು 15 ಪಂದ್ಯಗಳನ್ನು ಆಡಿದ್ದು 32 ವಿಕೆಟ್‌ಗಳನ್ನು ಪಡೆದಿದ್ದಾರೆ. ಜಯವಿಕ್ರಮ ಅವರು ಕೊನೆಯದಾಗಿ 2022ರಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸಿದ್ದರು. ಈ ಎಡಗೈ ಸ್ಪಿನ್ನರ್ 2021ರಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ನೊಂದಿಗೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಮತ್ತು ಆ ಪಂದ್ಯದಲ್ಲಿ 178 ರನ್‌ಗಳಿಗೆ 11 ವಿಕೆಟ್‌ಗಳನ್ನು ಪಡೆದು ಅಚ್ಚರಿ ಪಡೆಸಿದ್ದರು.
ಇದನ್ನೂ ಓದಿ: 20 ಕೋಟಿ ರೂಪಾಯಿ ಅವ್ಯವಹಾರ ಆರೋಪ: ಟೀಂ ಇಂಡಿಯಾ ಮಾಜಿ ನಾಯಕನಿಗೆ ಇಡಿ ಸಮನ್ಸ್ ಜಾರಿ! - ED summons to Azharuddin