ತಿರುಪತಿ (ಆಂಧ್ರಪ್ರದೇಶ): ತಿರುಮಲದಲ್ಲಿ ಮತ್ತೊಮ್ಮೆ ಚಿರತೆಗಳ ಓಡಾಟ ಸಂಚಲನವನ್ನು ಸೃಷ್ಟಿಸಿದೆ. ಅಲಿಪಿರಿ ಕಾಲು ದಾರಿಯ ಕೊನೆಯ ಮೆಟ್ಟಿಲಗಳ ಬಳಿ ಎರಡು ಚಿರತೆಗಳನ್ನು ಕಂಡು ಭಕ್ತರು ಭಯಭೀತರಾಗಿ ಕಿರುಚಿಕೊಂಡರು. ಭಕ್ತರ ಕಿರುಚಾಟದೊಂದಿಗೆ ಚಿರತೆಗಳು ಕಾಡಿನತ್ತ ಓಡಿಹೋದವು. ಸ್ಥಳಕ್ಕೆ ವಿಜಿಲೆನ್ಸ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅರಣ್ಯ ಸಿಬ್ಬಂದಿ ಚಿರತೆಯ ಜಾಡು ಹುಡುಕಲು ಕಾಡಿನೊಳಗೆ ತೆರಳಿದ್ದಾರೆ. ಚಿರತೆಗಳ ಚಲನವಲನದಿಂದ ಎಚ್ಚೆತ್ತ ಭದ್ರತಾ ಸಿಬ್ಬಂದಿ ಗುಂಪು ಗುಂಪಾಗಿ ಭಕ್ತರನ್ನು ಕಳುಹಿಸುತ್ತಿದ್ದಾರೆ.
Two Leopards Spotted at Tirumala: ಕೆಲವು ದಿನಗಳ ಹಿಂದೆ ತಿರುಮಲ ಬೆಟ್ಟದಲ್ಲಿ ಚಿರತೆಯೊಂದು ಓಡಾಡಿತ್ತು. ಇತ್ತೀಚೆಗೆ ಚಿರತೆಯ ಚಲನವಲನ ಮತ್ತೊಮ್ಮೆ ಸಂಚಲನ ಮೂಡಿಸಿತ್ತು. ಇದೇ ತಿಂಗಳ 15ರಂದು ತಿರುಪತಿಯಿಂದ ತಿರುಮಲಕ್ಕೆ ಹೋಗುವ ಎರಡನೇ ಘಾಟ್ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಮುಂಜಾನೆ ಚಿರತೆಯೊಂದು ಭಕ್ತರ ಕಾರಿಗೆ ಅಡ್ಡ ಬಂದಿತ್ತು. ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆಯ ದೃಶ್ಯಗಳು ದಾಖಲಾಗಿವೆ. ಚಿರತೆಯನ್ನು ನೋಡಿದ ಭಕ್ತರು ಬೆಚ್ಚಿಬಿದ್ದಿದ್ದರು. ಚಿರತೆ ರಸ್ತೆ ದಾಟುತ್ತಿದ್ದಂತೆ ಭಕ್ತರು ನಿಟ್ಟುಸಿರು ಬಿಟ್ಟರು. ಈ ಹಿಂದೆ ಕೂಡ ತಿರುಮಲದಲ್ಲಿ ಚಿರತೆ ಕಾಣಿಸಿಕೊಂಡು ಭಕ್ತರಲ್ಲಿ ಭಯದ ವಾತಾವರಣ ಸೃಷ್ಟಿಯಾಗುವಂತೆ ಮಾಡಿತ್ತು.
ಓದಿ:ಕಾಡಿನಿಂದ ನಾಡಿಗೆ ನುಗ್ಗಿದ ಚಿರತೆ: ಯುವಕನ ಮೇಲೆ ದಾಳಿ, ಸ್ಥಳದಲ್ಲಿ ಅರಣ್ಯ ಇಲಾಖೆ ಮೊಕ್ಕಾಂ - Leopard Attack