ETV Bharat / bharat

ಚಂಡೀಪುರ ವೈರಸ್​ ಪಾಸಿಟಿವ್​ ಪ್ರಕರಣಗಳ ಸಂಖ್ಯೆ 37ಕ್ಕೆ ಏರಿಕೆ: ಸಾವನ್ನಪ್ಪಿದವರ ಸಂಖ್ಯೆ 44: ಏನಿದು ಹೊಸ ರೋಗ? ಲಕ್ಷಣಗಳೇನು? - Chandipur cases rise to 37

author img

By ETV Bharat Karnataka Team

Published : Jul 26, 2024, 5:29 PM IST

ಗುಜರಾತ್​ ಅಲ್ಲದೇ ಗಂಡಿ ಹಂಚಿಕೊಂಡಿರುವ ರಾಜಸ್ಥಾನದಿಂದ ಆರು ಪ್ರಕರಣಗಳು ವರದಿಯಾದರೆ, ಮಧ್ಯಪ್ರದೇಶ, ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲೂ ಕ್ರಮವಾಗಿ ಇಬ್ಬರು ಮತ್ತು ಒಬ್ಬ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

Representational Picture
ಸಾಂದರ್ಭಿಕ ಚಿತ್ರ (ETV Bharat)

ಗಾಂಧಿನಗರ (ಗುಜರಾತ್​): ಒಂದೆಡೆ ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಹಲವು ಗ್ರಾಮಗಳ ಜನಜೀವನ ಅಸ್ತವ್ಯಸ್ತವಾಗಿದ್ದರೆ, ಮತ್ತೊಂದೆಡೆ ರಾಜ್ಯದಲ್ಲಿ ಚಂಡೀಪುರ ವೈರಸ್​ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿವೆ. ಇದುವರೆಗೆ ರಾಜ್ಯದಲ್ಲಿ ಸುಮಾರು 124 ಶಂಕಿತ ಚಂಡಿಪುರ ವೈರಸ್​​​ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 37 ಪ್ರಕರಣಗಳು ದೃಢಪಟ್ಟಿವೆ. ಇದುವರೆಗೆ ಸೋಂಕಿನಿಂದ 44 ಜನರು ಸಾವನ್ನಪ್ಪಿದ್ದಾರೆ.

ವೈರಲ್ ಎನ್ಸೆಫಾಲಿಟಿಸ್​ ಸಿಂಡ್ರೋಮ್​ನೊಂದಿಗೆ ಆಸ್ಪತ್ರೆಗಳಿಗೆ ದಾಖಲಾದ 54 ರೋಗಿಗಳಲ್ಲಿ 26 ರೋಗಿಗಳನ್ನು ತೃಪ್ತಿದಾಯಕ ಚೇತರಿಕೆಯ ನಂತರ ಬಿಡುಗಡೆ ಮಾಡಲಾಗಿದೆ. ಪಂಚಮಹಲ್​ ಜಿಲ್ಲೆ ಹಾಗೂ ಸಬರ್ಕಾಂತ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಪಂಚಮಹಲ್​ ಜಿಲ್ಲೆಯಲ್ಲಿ 15 ಶಂಕಿತ ಪ್ರಕರಣಗಳು ದಾಖಲಾಗಿದ್ದು, ಸಬರ್ಕಾಂತ ಮತ್ತು ಅಹಮದಾಬಾದ್​ ಕಾರ್ಪೋರೇಷನ್​ಗಳಲ್ಲಿ ತಲಾ 12 ಪ್ರಕರಣಗಳು ಪತ್ತೆಯಾಗಿವೆ. ಅರಾವಳಿಯಲ್ಲಿ 9, ಮಹಿಸಾಗರ್​ 2, ಖೇಡಾ 6, ಮೆಹ್ಸಾನಾ 7, ರಾಜ್​ಕೋಟ್​ 5, ಸುರೇಂದ್ರನಗರ 4, ಗಾಂಧಿನಗರ 6, ಜಾಮ್​ನಗರ 6, ಮೊರ್ಬಿ 5, ಗಾಂಧಿನಗರ ಕಾರ್ಪೋರೇಷನ್​ 3, ಛೋಟೌಡೆಪುರ 2, ದಾಹೋದ್​ 2, ವಡೋದರಾ 6, ನರ್ಮದಾ 2, ಬನಸ್ಕಾಂತ 5, ವಡೋದರಾ ಕಾರ್ಪೋರೇಷನ್​ 2, ಭಾವನಗರ 1, ದೇವಭೂಮಿ ದ್ವಾರಕಾ 1, ರಾಜ್​ಕೋಟ್​ ಕಾರ್ಪೋರೇಷನ್​ 4, ಕಚ್​ 3, ಸೂರತ್​ ಕಾರ್ಪೋರೇಷನ್​ 2, ಭರೂಚ್​ 3, ಅಹಮದಾಬಾದ್​ 1 ಮತ್ತು ಜಾಮ್​ನಗರ ಕಾರ್ಪೋರೇಷನ್​ 1 ಪ್ರಕರಣಗಳು ದಾಖಲಾಗಿವೆ.

ಪ್ರಕರಣ ದೃಢಪಟ್ಟ ಜಿಲ್ಲೆಗಳು: ಇಲ್ಲಿಯವರೆಗೆ ಇಲ್ಲಿ 37 ದೃಢಪಟ್ಟ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಸಬರ್ಕಾಂತ ಮತ್ತು ಪಂಚಮಹಲ್​ನಲ್ಲಿ ತಲಾ 6, ಮೆಹ್ಸಾನಾದಲ್ಲಿ ನಾಲ್ಕು ಮತ್ತು ಅರಾವಳಿ, ಖೇಡಾ ಮತ್ತು ಅಹಮದಾಬಾದ್ ಕಾರ್ಪೊರೇಷನ್‌ನಲ್ಲಿ ತಲಾ ಮೂರು ಪಾಸಿಟಿವ್​ ಪ್ರಕರಣಗಳು ಕಂಡು ಬಂದಿವೆ. ಮಹಿಸಾಗರ್, ರಾಜ್‌ಕೋಟ್, ಸುರೇಂದ್ರನಗರ, ಗಾಂಧಿನಗರ, ಜಾಮ್‌ನಗರ, ಮೊರ್ಬಿ, ದಾಹೋದ್, ವಡೋದರಾ, ಬನಸ್ಕಾಂತ, ದೇವಭೂಮಿ ದ್ವಾರಕಾ ಮತ್ತು ರಾಜ್‌ಕೋಟ್ ಕಾರ್ಪೊರೇಷನ್‌ನಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.

ಸಾವನ್ನಪ್ಪಿದವರ ಸಂಖ್ಯೆ: ಇದುವರೆಗೆ ಚಂಡೀಪುರ ವೈರಸ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 44ಕ್ಕೆ ಏರಿದೆ. ಅದರಲ್ಲಿ ಸಬರ್ಕಾಂತದಿಂದ ಇಬ್ಬರು, ಅರಾವಳಿಯಿಂದ ಮೂರು, ಮಹಿಸಾಗರದಿಂದ ಎರಡು, ಖೇಡಾದಿಂದ ಎರಡು, ಮೆಹ್ಸಾನಾದಿಂದ ಎರಡು, ರಾಜ್‌ಕೋಟ್‌ನಿಂದ ಮೂರು, ಸುರೇಂದ್ರನಗರದಿಂದ ಒಂದು, ಅಹಮದಾಬಾದ್ ಕಾರ್ಪೊರೇಷನ್‌ನಿಂದ ನಾಲ್ಕು, ಗಾಂಧಿನಗರದಿಂದ ಎರಡು, ಪಂಚಮಹಲ್‌ನಿಂದ ಐದು, ಜಾಮ್‌ನಗರದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಮೋರ್ಬಿಯಿಂದ ಮೂರು, ಗಾಂಧಿನಗರ ಕಾರ್ಪೊರೇಷನ್‌ನಿಂದ ಇಬ್ಬರು, ದಾಹೋದ್‌ನಿಂದ ಇಬ್ಬರು, ವಡೋದರಾದಿಂದ ಒಬ್ಬರು, ನರ್ಮದಾದಿಂದ ಒಬ್ಬರು, ಬನಸ್ಕಾಂತದಿಂದ ಮೂರು, ವಡೋದರಾ ಕಾರ್ಪೊರೇಷನ್‌ನಿಂದ ಒಬ್ಬರು, ದೇವಭೂಮಿ ದ್ವಾರಕಾದಿಂದ ಒಬ್ಬರು, ಸೂರತ್ ಕಾರ್ಪೊರೇಷನ್‌ನಿಂದ ಒಬ್ಬರು ಮತ್ತು ಜಾಮ್‌ನಗರ ಪಾಲಿಕೆಯಿಂದ ಒಬ್ಬರು ಸಾವನ್ನಪ್ಪಿದ್ದಾರೆ.

ಇದಲ್ಲದೇ ರಾಜಸ್ಥಾನದಿಂದ ಆರು ಪ್ರಕರಣಗಳು ವರದಿಯಾಗಿದೆ. ಈ ಪೈಕಿ ಐವರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಮಧ್ಯಪ್ರದೇಶದಿಂದ ಇಬ್ಬರು ಮತ್ತು ಮಹಾರಾಷ್ಟ್ರದಿಂದ ಒಬ್ಬ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪಾಸಿಟಿವ್​ ಮತ್ತು ಶಂಕಿತ ರೋಗಿಗಳ ಮನೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ಒಟ್ಟು 41,211 ವಾಸಸ್ಥಳಗಳನ್ನು ಆರೋಗ್ಯ ಇಲಾಖೆ ತಂಡಗಳು ಮೇಲ್ವಿಚಾರಣೆ ಮಾಡುತ್ತಿವೆ. ವೈರಲ್ ಎನ್ಸೆಫಾಲಿಟಿಸ್‌ನ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಗ್ರಾಮಗಳಿಗೆ ಮಲಾಥಿಯಾನ್ ಪೌಡರ್ ಮತ್ತು ಇತರ ಕೀಟನಾಶಕಗಳನ್ನು ಸಿಂಪಡಿಸಲು ವಿನಂತಿಸಲಾಗಿದೆ ಮತ್ತು ರೋಗವಾಹಕಗಳಿಂದ ಹರಡುವ ರೋಗಗಳನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಗಳಿಗೆ ತಿಳಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ಏನಿದರ ಲಕ್ಷಣಗಳು?: ಚಂಡಿಪುರ ವೈರಸ್‌ಗೆ ಒಡ್ಡಿಕೊಂಡ 2 ರಿಂದ 14 ದಿನಗಳಲ್ಲಿ ರೋಗಲಕ್ಷಣಗಳು ಕಂಡುಬರುತ್ತವೆ, ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಶೀತ, ಸ್ನಾಯು ನೋವು, ತಲೆನೋವು, ನೋಯುತ್ತಿರುವ ಗಂಟಲು ಮತ್ತು ರುಚಿ ಅಥವಾ ವಾಸನೆಯ ನಷ್ಟವನ್ನು ಈ ರೋಗ ಒಳಗೊಂಡಿರಬಹುದು ಎಂದು ತಜ್ಞರು ಗುರುತಿಸಿದ್ದಾರೆ.

ಏನಿದು ಚಂಡೀಪುರ: ಚಂಡೀಪುರ ವೈರಸ್ (CHPV) ರಾಬ್ಡೋವಿರಿಡೆ ವರ್ಗಕ್ಕೆ ಸೇರಿದ್ದು, ದೇಶದ ಪಶ್ಚಿಮ, ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ, ವಿಶೇಷವಾಗಿ ಮಾನ್ಸೂನ್ ಅವಧಿಯಲ್ಲಿ ವಿರಳ ಪ್ರಕರಣಗಳಲ್ಲಿ ಕಂಡು ಬರುವ ರೋಗ ಇದಾಗಿದೆ. ಇದು ಮರಳು ನೊಣಗಳು ಮತ್ತು ಉಣ್ಣಿಗಳಂತಹ ಜೀವಿಗಳಿಂದ ಹರಡುತ್ತದೆ.

ಇದನ್ನೂ ಓದಿ: ಕೀಟ ನಿಯಂತ್ರಣ, ಸ್ವಚ್ಛತೆ ಕಾಪಾಡುವ ಮೂಲಕ ಚಂಡಿಪುರ ವೈರಸ್​ ನಿಯಂತ್ರಣ ಸಾಧ್ಯ: ತಜ್ಞರ ಸಲಹೆ - Chandipura virus

ETV Bharat Logo

Copyright © 2024 Ushodaya Enterprises Pvt. Ltd., All Rights Reserved.