ಅಮೃತ್ಸರ್: ಪಂಜಾಬ್ ಗಡಿಯಲ್ಲಿ ಬಿಎಸ್ಎಫ್ ಯೋಧರು ಪಾಕಿಸ್ತಾನದ ಮೂರು ಸುಧಾರಿತ ತಂತ್ರಜ್ಞಾನದ ಡ್ರೋನ್ಗಳನ್ನು ವಶಕ್ಕೆ ಪಡೆದಿದ್ದಾರೆ. ಅಮೃತ್ಸರದ ರಜತಲ್ ಗ್ರಾಮದಲ್ಲಿ ಈ ಡ್ರೋನ್ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಧಾರಿತ ತಂತ್ರಜ್ಞಾನ ಬಳಕೆ ಮಾಡಿ ಈ ಡ್ರೋನ್ಗಳನ್ನು ಬಿಎಸ್ಎಫ್ ಪರಿಣಾಮಕಾರಿಯಾಗಿ ತಟಸ್ಥಗೊಳಿಸಿದೆ. ಹಾಗೇ ಮಾದಕವಸ್ತು ಕಳ್ಳಸಾಗಣೆಗೆ ಬಳಸದಂತೆ ತಡೆಯಲಾಗಿದೆ ಎಂದು ಬಿಎಸ್ಎಫ್ ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಎಸ್ಎಫ್ ಪಂಜಾಬ್, ಇಂದಿನ ಮಹತ್ವದ ಕಾರ್ಯಾಚರಣೆಯಲ್ಲಿ ಬಿಎಸ್ಎಫ್ ಪಂಜಾಬ್ ಪಡೆ ಎರಡು ಡಿಜೆಐ ಮ್ಯಾಟ್ರಿಕ್ ಆರ್ಟಿಕೆ ಡ್ರೋನ್ ಮತ್ತು ಡಿಜೆಐ ಮ್ಯಾವಿಕ್ 3 ಕ್ಲಾಸಿಕ್ ಸೇರಿದಂತೆ 3 ಡ್ರೋನ್ ಗಳನ್ನ ಪಂಜಾಬ್ ಗಡಿಯ ರಜತಲ್ ಗ್ರಾಮದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.
ಗಡಿಯಲ್ಲಿ ಭದ್ರತೆ ಬಿಗಿಗೊಳಿಸುವಲ್ಲಿ, ಹಾಗೇ ಗಡಿದಾಟಿ ನಡೆಯುವ ಮಾದಕ ವಸ್ತು ಕಳ್ಳ ಸಾಗಣೆ ಚಟುವಟಿಕೆ ತಡೆಗೂ ಬಿಎಸ್ಎಫ್ ಪಂಜಾಬ್ ಬದ್ದವಾಗಿದೆ ಎಂದು ಅದು ತಿಳಿಸಿದೆ.
ಈ ನಡುವೆ ಬಿಎಸ್ಎಫ್ ಪಂಜಾಬ್ ಪೊಲೀಸರೊಂದಿಗೆ ಕೂಡ ಸಂಯೋಜನೆ ಮಾಡಿಕೊಂಡು, ತರ್ನ್ ತರನ್ ಜಿಲ್ಲೆಯ ಗಡಿ ಪ್ರದೇಶದಲ್ಲಿ ಹೆರಾಯಿನ್ ಅನ್ನು ವಶಕ್ಕೆ ಪಡೆದಿದೆ ಎಂದು ಬಿಎಸ್ಎಫ್ ಭಾನುವಾರ ತಿಳಿಸಿದೆ.
ಬಿಎಸ್ಎಫ್ ಗುಪ್ತಚರ ದಳಕ್ಕೆ ಲಭ್ಯವಾದ ಮಾಹಿತಿ ಆಧಾರದ ಮೇಲೆ ಬಿಎಸ್ಎಫ್ ಪಡೆ ಜೊತೆಗೆ ಪಂಜಾಬ್ ಪೊಲೀಸ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, 543 ಗ್ರಾಂನಷ್ಟು ಹೆರಾಯಿನ್ ವಶಕ್ಕೆ ಪಡೆದಿದೆ ಎಂದು ಬಿಎಸ್ಎಫ್ ಪಂಜಾಬ್ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ: 2024ಕ್ಕೆ ಗುಡ್ ಬೈ, 2025ಕ್ಕೆ ವೆಲ್ಕಮ್ ಮಾಡಲು ಕ್ಷಣಗಣನೆ: ದೆಹಲಿಯಲ್ಲಿ ಭಾರಿ ಬಿಗಿ ಭದ್ರತೆ