ETV Bharat / bharat

22 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಪ್ರತ್ಯಕ್ಷ: ಭಿಕ್ಷೆ ಸ್ವೀಕರಿಸಲು ಮನೆಗೆ ಬಂದ ಪುತ್ರನ ಕಂಡು ಕಣ್ಣೀರಿಟ್ಟ ಪೋಷಕರು - ಕಾಣೆಯಾಗಿದ್ದ ಬಾಲಕ ಪತ್ಯಕ್ಷ

ಪೋಷಕರು ಬೈದರೆಂದು ಮನೆ ತೊರೆದಿದ್ದ ಬಾಲಕ 22 ವರ್ಷಗಳ ಬಳಿಕ ಮರಳಿ ಗ್ರಾಮಕ್ಕೆ ಬಂದು ತಾಯಿಯಿಂದ ಭಿಕ್ಷೆ ಪಡೆದು ಹೊರಟು ಹೋಗಿದ್ದಾನೆ.

22 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ತಾಯಿಯಿಂದ ಭಿಕ್ಷೆ ಸ್ವೀಕರಿಸಲು ಮನೆಗೆ ಬಂದ

author img

By ETV Bharat Karnataka Team

Published : Feb 8, 2024, 6:15 AM IST

ಅಮೇಥಿ (ಉತ್ತರ ಪ್ರದೇಶದ): ಉತ್ತರ ಪ್ರದೇಶದ ಅಮೇಥಿಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪೋಷಕರು ನಿಂದಿಸಿದರು ಎಂದು ಮನೆ ತೊರೆದಿದ್ದ 10 ವರ್ಷದ ಬಾಲಕ 22 ವರ್ಷಗಳ ನಂತರ ಸಾಧು ವೇಷದಲ್ಲಿ ಮನೆಗೆ ಮರಳಿದ್ದಾನೆ. ಒಂದೆಡೆ ಮಗ ಮರಳಿ ಬಂದನು ಎಂದು ಖುಷಿಯಲ್ಲಿದ್ದ ಪೋಷಕರಿಗೆ, ಆತ ಬಂದಿರುವ ಉದ್ದೇಶ ಕೇಳಿ ಪೋಷಕರು ಸೇರಿದಂತೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಹೌದು, ಈ ಎಲ್ಲ ಘಟನೆ ನಡೆದಿದ್ದು, ಉತ್ತರಪ್ರದೇಶದ ಅಮೇಥಿ ಜಿಲ್ಲೆಯ ಖರೌಲಿ ಎಂಬ ಗ್ರಾಮದಲ್ಲಿ. ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ, ಅಂದರೆ, 2002ರಲ್ಲಿ ಅಮೇಥಿ ನಿವಾಸಿಯಾದ ರತಿಪಾಲ್ ಸಿಂಗ್ ಅವರು ತಮ್ಮ ಪತ್ನಿ ಮತ್ತು ಮಗನೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದರು. ಈ ವೇಳೆ ಅವರ ಮೊದಲ ಪತ್ನಿ ಅನಾರೋಗ್ಯದಿಂದ ಹಠಾತ್​ ನಿಧನ ಹೊಂದಿದ್ದರು. ಮಗನ ಮತ್ತು ಕುಟುಂಬವನ್ನು ನೋಡಿಕೊಳ್ಳಲು ಎಂದು ರತಿಪಾಲ್​ ಭಾನುಮತಿ ಎಂಬ ಮಹಿಳೆಯೊಂದಿಗೆ ಎರಡನೇ ಮದುವೆಯಾದರು. ರತಿಪಾಲ್ ತನ್ನ ಮಗ ಮತ್ತು ಭಾನುಮತಿ ಮಗಳೊಂದಿಗೆ ವಾಸಿಸುತ್ತಿದ್ದರು.

ಆದರೆ, 2002ರಲ್ಲಿ ಪುತ್ರ ಪಿಂಕು ಸಿಂಗ್ ಗಲಾಟೆ ಮಾಡಿದ್ದ ಎಂದು ತಂದೆ ತಾಯಿ ಇಬ್ಬರು ಬೈದಿದ್ದರು. ಇದರಿಂದ ಮನನೊಂದ ಪಿಂಕು ಮನೆ ತೊರೆದಿದ್ದ. ಆಗ ಪಿಂಕುಗೆ 11 ವರ್ಷ ವಯಸ್ಸಿನ ಬಾಲಕನಾಗಿದ್ದ. ಮಗನಿಗಾಗಿ ಪೋಷಕರು ಸಾಕಷ್ಟು ಹುಡುಕಾಟ ನಡೆಸಿದ್ದರೂ ಪಿಂಕು ಎಲ್ಲೂ ಪತ್ತೆಯಾಗಿರಲಿಲ್ಲ. ನಂತರ ಮಗು ತಮ್ಮ ಅದೃಷ್ಟದಲ್ಲಿಲ್ಲ ಎಂದು ಕೊರಗಿ ಹುಡುಕಾಟ ನಿಲ್ಲಿಸಿದ್ದರು.

ಘಟನೆ ಸುಮಾರು 22 ವರ್ಷಗಳ ನಂತರ, ಕಳೆದ ವಾರ ಪಿಂಕು ತನ್ನ ಹಳೆಯ ಮನೆಗೆ ಬಂದಿದ್ದಾನೆ. ಅವರ ಹೊಟ್ಟೆಯಲ್ಲಿ ಶಸ್ತ್ರಚಿಕಿತ್ಸೆಯ ಗುರುತುಗಳು ಇರುವುದನ್ನು ಕಂಡು ಕುಟುಂಬ ಸದಸ್ಯರು ಗುರುತಿಸಿದ್ದಾರೆ. ಬಳಿಕ ವಿಷಯವನ್ನು ದೆಹಲಿಯಲ್ಲಿ ನೆಲೆಸಿರುವ ಆತನ ಪೋಷಕರಿಗೆ ತಿಳಿಸಿದ್ದಾರೆ. ಇದನ್ನು ತಿಳಿದು ತಂದೆ ತಾಯಿ ಮನೆಗೆ ಬಂದು ಆತನ ಅವತಾರ ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಈ ವೇಳೆ, ಪೋಷಕರು ಯಾಕೆ ಹೀಗಾಗಿರುವುದಾಗಿ ಮಗನನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಮಗ ಪಿಂಕು ನಾನು ನಿಮ್ಮೊಂದಿಗೆ ಇರಲು ಅಥವಾ ಭೇಟಿಯಾಗಲು ಮನೆಗ ಬಂದಿಲ್ಲ. ಬದಲಿಗೆ ತಾನು ಸನ್ಯಾಸ ಧೀಕ್ಷೆ ಸ್ವೀಕರಿಸಿದ್ದು, ತಾಯಿಯಿಂದ ಭಿಕ್ಷೆ ಪಡೆದರೆ ಮಾತ್ರ ಸಂಪೂರ್ಣವಾಗಿ ಸನ್ಯಾಸ ಸ್ವೀಕಾರ ಮಾಡಿದಂತಾಗುತ್ತದೆ ಎಂದು ತಿಳಿಸಿದ್ದಾನೆ. ಇದರಿಂದ ಆತನ ಪೋಷಕರು ಕಣ್ಣೀರಿಟ್ಟಿದ್ದಾರೆ. ತಂದೆ ಕಣ್ಣಲ್ಲಿ ನೀರು ತುಂಬಿ ಮಗನನ್ನು ಅಪ್ಪಿಕೊಂಡಿದ್ದಾರೆ.

ಬಳಿಕ ಮಗು ತಾಯಿಯಿಂದ ಭಿಕ್ಷೆ ಕೇಳಿದ, ಆದರೆ ತಾಯಿ ನಿರಾಕರಿಸಿದಳು. ಸನ್ಯಾಸತ್ವ ಬಿಡು ಎಂದು ಮನವಿ ಮಾಡಿದರು. ಇದು ಯಾವುದಕ್ಕೂ ಒಪ್ಪದ ಪಿಂಕು ಸಿಂಗ್​ ಮನ ಮುಟ್ಟುವಂತೆ ಹಾಡು ಹಾಡಿ ತನ್ನ ಜೀವನ ಸಫಲವಾಲಿ ಎಂದು ತಾಯಿ ನಿನ್ನ ಕೈಯಿಂದ ಭಿಕ್ಷೆ ಕೊಡು ಎಂದು ಹೇಳಿದ್ದಾನೆ. ಬಳಿಕ ಭಿಕ್ಷೆ ಪಡೆದು ಅಲ್ಲಿಂದ ಹೊರಟು ಹೋಗಿದ್ದಾನೆ.

22 ವರ್ಷಗಳ ನಂತರ ತವರಿಗೆ ಮರಳಿದ ಮಗ ತಾಯಿಂದ ಭಿಕ್ಷೆ ಪಡೆದು ಮರಳಿ ಹೋಗಿದ್ದು, ಪೋಷಕರು ಸೇರಿದಂತೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ಸಂವಿಧಾನ ರಚನೆಕಾರರ ಕನಸು ನನಸು, ಇತರ ರಾಜ್ಯಗಳೂ ಯುಸಿಸಿ ಕಾಯ್ದೆ ತರಲಿ: ಉತ್ತರಾಖಂಡ ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.