ಗ್ಯಾಂಗ್ಟಕ್(ಅಸ್ಸಾಂ): ಒಂಬತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸಿಕ್ಕಿಂ ರಾಜ್ಯದ ಮಾಜಿ ಸಚಿವ ಆರ್.ಸಿ.ಪೌಡ್ಯಾಲ್(80) ಅವರ ಮೃತದೇಹ ಪಶ್ಚಿಮ ಬಂಗಾಳದ ಸಿಲಿಗುರಿ ಸಮೀಪದ ಕಾಲುವೆಯಲ್ಲಿ ಸಿಕ್ಕಿದೆ.
ಪೌಡ್ಯಾಲ್ ಮೃತದೇಹ ಮಂಗಳವಾರ ಫುಲ್ಬರಿಯಲ್ಲಿರುವ ತೀಸ್ತಾ ಕಾಲುವೆಯಲ್ಲಿ ತೇಲುತ್ತಿತ್ತು ಎಂದು ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.
ಕೈ ಗಡಿಯಾರ ಮತ್ತು ಅವರು ಧರಿಸಿದ್ದ ಬಟ್ಟೆಗಳಿಂದ ಮೃತದೇಹದ ಗುರುತು ಕಂಡುಹಿಡಿಯಲಾಗಿದೆ. ಜುಲೈ 7ರಂದು ಪಾಕ್ಯೊಂಗ್ ಜಿಲ್ಲೆಯ ಚೋಟಾ ಸಿಂಗ್ಟಾಮ್‌ನಿಂದ ಪೌಡ್ಯಾಲ್ ನಾಪತ್ತೆಯಾಗಿದ್ದರು. ಶೋಧಕ್ಕಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೌಡ್ಯಾಲ್ ಸಿಕ್ಕಿಂ ವಿಧಾನಸಭೆಯಲ್ಲಿ ಉಪಸಭಾಪತಿಯಾಗಿದ್ದರು. ಅರಣ್ಯ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. 1970-80ರ ದಶಕದ ಉತ್ತರಾರ್ಧದಲ್ಲಿ ರೈಸಿಂಗ್ ಸನ್ ಪಾರ್ಟಿ ಸ್ಥಾಪಿಸಿದ್ದರು.
"ಸಿಕ್ಕಿಂ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವ ರಾಜನೀತಿಜ್ಞ, ಹಿರಿಯ ರಾಜಕೀಯ ನಾಯಕ ಆರ್.ಸಿ.ಪೌಡ್ಯಾಲ್ ಅವರ ಹಠಾತ್ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ" ಮುಖ್ಯಮಂತ್ರಿ ಪಿ.ಎಸ್.ತಮಾಂಗ್ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: 35 ವರ್ಷದ ರಾಜಸ್ಥಾನದ ಯುವಕನ ವರಿಸಿದ್ದ 78ರ ಅಮೆರಿಕದ ವೃದ್ಧೆ ಸಾವು - American Woman Dies In Rajasthan