ETV Bharat / bharat

ಹಾಲಿ ಸಂಸದೆ ಪೂನಂ ಮಹಾಜನ್​ಗೆ ಬಿಜೆಪಿ ಟಿಕೆಟ್ ನಿರಾಕರಣೆ; ಖ್ಯಾತ ವಕೀಲ ಉಜ್ವಲ್ ನಿಕಮ್​ ಗೆ ಮಣೆ - Ujjwal Nikam

ಮಹಾರಾಷ್ಟ್ರದ ಮುಂಬೈ ಉತ್ತರ ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಖ್ಯಾತ ವಕೀಲ ಉಜ್ವಲ್ ನಿಕಮ್ ಅವರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರದ ಹಾಲಿ ಸಂಸದೆ ಪೂನಂ ಮಹಾಜನ್‌ ಅವರನ್ನು ಕೈಬಿಡಲಾಗಿದೆ.

BJP drops Poonam Mahajan, picks 26/11 prosecutor Ujjwal Nikam from Mumbai North Central seat
ಹಾಲಿ ಸಂಸದೆ ಪೂನಂ ಮಹಾಜನ್​ಗೆ ಬಿಜೆಪಿ ಟಿಕೆಟ್ ನಿರಾಕರಣೆ; ಖ್ಯಾತ ವಕೀಲ ಉಜ್ವಲ್ ನಿಕ್ಕಂಗೆ ಮಣೆ
author img

By ETV Bharat Karnataka Team

Published : Apr 27, 2024, 10:53 PM IST

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ಮುಂಬೈ ಉತ್ತರ ಕೇಂದ್ರ ಲೋಕಸಭೆ ಕ್ಷೇತ್ರದ ಹಾಲಿ ಸಂಸದೆ ಪೂನಂ ಮಹಾಜನ್‌ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಬದಲಿಗೆ ಮುಂಬೈ ದಾಳಿ ಮತ್ತು 1993ರ ಸರಣಿ ಸ್ಫೋಟ ಪ್ರಕರಣಗಳಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕೆಲಸ ಮಾಡಿದ್ದ ಖ್ಯಾತ ವಕೀಲ ಉಜ್ವಲ್ ನಿಕಮ್ ಅವರನ್ನು ಕಮಲ ಪಾಳೆಯ ಕಣಕ್ಕಿಳಿಸಿದೆ.

ಪ್ರತಿಷ್ಠಿತ ಕ್ಷೇತ್ರವಾದ ಮುಂಬೈ ಉತ್ತರ ಕೇಂದ್ರಕ್ಕೆ ಕಾಂಗ್ರೆಸ್ ಪಕ್ಷವು ತನ್ನ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಅಭ್ಯರ್ಥಿಯಾಗಿ ವರ್ಷಾ ಗಾಯಕ್ವಾಡ್ ಅವರಿಗೆ ಶುಕ್ರವಾರವಷ್ಟೇ ಟಿಕೆಟ್​ ಅಂತಿಮಗೊಳಿಸಿದೆ. ಇದರ ಬೆನ್ನಲ್ಲೇ, ಆಡಳಿತಾರೂಢ ಬಿಜೆಪಿ ತನ್ನ ಹಾಲಿ ಸಂಸದೆ ಪೂನಂ ಮಹಾಜನ್‌ ಅವರಿಗೆ ಟಿಕೆಟ್​ ಕೊಡದೆ ಉಜ್ವಲ್ ನಿಕಮ್ ಅವರಿಗೆ ಮಣೆ ಹಾಕಿದೆ. 26/11ರ ಭಯೋತ್ಪಾದನಾ ದಾಳಿಯ ಪ್ರಕರಣದಲ್ಲಿ ಏಕೈಕ ಉಗ್ರ ಅಜ್ಮಲ್ ಕಸಬ್‌ನನ್ನು ಜೀವಂತವಾಗಿ ಸೆರೆಹಿಡಿಯಲಾಗಿತ್ತು. ನೂರು ಆರೋಪಿಗಳನ್ನು ಅಪರಾಧಿಗಳೆಂದು ಸಾಬೀತು ಪಡಿಸಿ, ಕಸಬ್‌ನನ್ನು ಗಲ್ಲಿಗೇರಿಸಲಾಗಿತ್ತು. ಈ ಪ್ರಕರಣದಿಂದ ನಿಕಮ್ ಸರ್ಕಾರಿ ವಕೀಲರಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು.

ಬಿಜೆಪಿ ಟಿಕೆಟ್​ ಘೋಷಿಸಿದ ಬಳಿಕ ಮೊದಲ ಬಾರಿಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬಡವರು ಮತ್ತು ದುರ್ಬಲರಿಗೆ ಕಾನೂನು ಪ್ರಮುಖ ಬೆಂಬಲವಾಗಿದೆ. ಈ ದೃಷ್ಟಿಯಿಂದ ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಯಾವುದೇ ಧಕ್ಕೆಯಾಗದಂತೆ ನಾನು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ. ನ್ಯಾಯಾಲಯದಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಕಡಿಮೆ ಅಂದಾಜು ಮಾಡುತ್ತಿದ್ದೆ. ಚುನಾವಣಾ ಕಣದಲ್ಲಿ ಹಾಗೆ ಮಾಡುವುದಿಲ್ಲ ಎಂದು ತಿಳಿಸಿದರು.

ಈ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿರುವ ವರ್ಷಾ ಗಾಯಕ್ವಾಡ್ ಅನುಭವಿ ರಾಜಕಾರಣಿಯಾಗಿದ್ದಾರೆ. ಮುಂಬೈ ಕಾಂಗ್ರೆಸ್ ಘಟಕದ ಮುಖ್ಯಸ್ಥರೂ ಆಗಿರುವ ವರ್ಷಾ ಧಾರವಿ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ತಮ್ಮ ಹೋರಾಟ ಯಾವುದೇ ಅಭ್ಯರ್ಥಿಯ ವಿರುದ್ಧ ಅಲ್ಲ. ಇದು ಸೈದ್ಧಾಂತಿಕ ಹೋರಾಟವಾಗಿದೆ ಎಂದು ವರ್ಷಾ ಇದೇ ವೇಳೆ ಹೇಳಿದ್ದಾರೆ. 2014 ಮತ್ತು 2019ರ ಚುನಾವಣೆಗಳಲ್ಲಿ ಬಿಜೆಪಿಯ ದಿವಂಗತ ಪ್ರಮೋದ್ ಮಹಾಜನ್ ಅವರ ಪುತ್ರಿ ಪೂನಂ ಮಹಾಜನ್ ಮುಂಬೈ ಉತ್ತರ ಕೇಂದ್ರದಿಂದ ಚುನಾಯಿತರಾಗಿದ್ದರು. ಇವರು ಬಿಜೆಪಿಯ ಯುವ ಘಟಕದ ಮಾಜಿ ಅಧ್ಯಕ್ಷರೂ ಆಗಿದ್ದಾರೆ.

ಮುಂಬೈನಲ್ಲಿ ಐದನೇ ಹಂತದ ಸಾರ್ವತ್ರಿಕ ಚುನಾವಣೆಗೆ ಮೇ 20ರಂದು ಮತದಾನ ನಡೆಯಲಿದೆ. ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರವು ವೈಲ್ ಪಾರ್ಲೆ, ಚಾಂಡಿವಲಿ, ಕುರ್ಲಾ, ಕಲಿನಾ, ಬಾಂದ್ರಾ ಪೂರ್ವ ಮತ್ತು ಬಾಂದ್ರಾ ಪಶ್ಚಿಮದ ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಆರು ಕ್ಷೇತ್ರಗಳ ಪೈಕಿ ಮೈತ್ರಿಪಕ್ಷಗಳಾದ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ತಲಾ ಇಬ್ಬರು ಶಾಸಕರು ಹಾಗೂ ಪ್ರತಿಪಕ್ಷದ ಮೈತ್ರಿಪಕ್ಷಗಳಾದ ಶಿವಸೇನೆ (ಯುಬಿಟಿ) ಮತ್ತು ಕಾಂಗ್ರೆಸ್ ತಲಾ ಒಬ್ಬ ಶಾಸಕರನ್ನು ಹೊಂದಿದೆ.

ಇದನ್ನೂ ಓದಿ: 2ನೇ ಹಂತದ ಚುನಾವಣೆ ನಂತರ ಕಾಂಗ್ರೆಸ್​ನಲ್ಲಿ ಹುಮ್ಮಸ್ಸು; ಕೇರಳ ಸ್ವೀಪ್​, ಕರ್ನಾಟಕ, ರಾಜಸ್ಥಾನದಲ್ಲಿ ಹೆಚ್ಚಿನ ಸ್ಥಾನದ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.