ETV Bharat / bharat

ದಯಾಮರಣ ಕೋರಿದ ಗುತ್ತಿಗೆ ಆಧಾರಿತ ಶಿಕ್ಷಕ - ಪ್ರಧಾನಿ, ಸಿಎಂಗೆ ಪತ್ರ - Bihar Niyojit Teacher

ವರ್ಗಾವಣೆಯ ಆತಂಕದಿಂದ ಸರ್ಕಾರಿ ಗುತ್ತಿಗೆ ಆಧಾರಿತ ಶಿಕ್ಷಕರೊಬ್ಬರು ದಯಾಮರಣ ಕೋರಿದ ಪ್ರಸಂಗ ಬಿಹಾರದ ಭಾಗಲ್‌ಪುರ ಜಿಲ್ಲೆಯಲ್ಲಿ ನಡೆದಿದೆ.

Bihar Niyojit Teacher Seeking euthanasia: Wrote letter to PMO And CM
ಬಿಹಾರ: ದಯಾಮರಣ ಕೋರಿದ ಗುತ್ತಿಗೆ ಆಧರಿತ ಶಿಕ್ಷಕ - ಪ್ರಧಾನಿ, ಸಿಎಂಗೆ ಪತ್ರ
author img

By ETV Bharat Karnataka Team

Published : Mar 7, 2024, 8:20 PM IST

ಪಾಟ್ನಾ (ಬಿಹಾರ): ಬಿಹಾರದಲ್ಲಿ ಸರ್ಕಾರಿ ಗುತ್ತಿಗೆ ಆಧಾರಿತ ಶಿಕ್ಷಕರೊಬ್ಬರು ದಯಾಮರಣ ಕೋರಿ ಪ್ರಧಾನಿ ಕಚೇರಿ, ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಈ ಪತ್ರವು ಶಿಕ್ಷಕರ ವಲಯದಲ್ಲಿ ಸಂಚಲನ ಮೂಡಿಸಿದೆ.

ಭಾಗಲ್‌ಪುರದ ನವ್‌ಗಾಚಿಯಾದ ಶಿಕ್ಷಕ ಘನಶ್ಯಾಮ್ ಕುಮಾರ್ ಎಂಬುವವರೇ ದಯಾಮರಣ ಕೋರಿದ್ದಾರೆ. ಇವರಿಗೆ ಮೂವರು ಹೆಣ್ಣು, ಇಬ್ಬರು ಗಂಡು ಸೇರಿ ಒಟ್ಟು ಐವರು ಮಕ್ಕಳು ಇದ್ದಾರೆ. ಇದರಲ್ಲಿ ಇಬ್ಬರು ಗಂಡು ಮಕ್ಕಳು ಡಿಎಂಡಿ ಅಂದರೆ ಡುಚೆನ್ ಮಸ್ಕ್ಯುಲರ್ ಡಿಸ್ಟ್ರೋಫಿಯಿಂದ ಬಳಲುತ್ತಿದ್ದಾರೆ. 17 ವರ್ಷದ ಅನಿಮೇಶ್ ಅಮನ್ ಒಂಬತ್ತನೇ ತರಗತಿ, 9 ವರ್ಷದ ಎರಡನೇ ಮಗ ಅನುರಾಗ್ ಆನಂದ್ ಮೂರನೇ ತರಗತಿ ಓದುತ್ತಿದ್ದು, ಶೇ.80ಕ್ಕಿಂತ ಹೆಚ್ಚು ಅಂಗವೈಕಲ್ಯಕ್ಕೆ ಗುರಿಯಾಗಿದ್ದಾರೆ.

ತಮ್ಮ ಮಕ್ಕಳ ಕಾಯಿಲೆ ಬಗ್ಗೆ 'ಈಟಿವಿ ಭಾರತ್' ಜೊತೆಗೆ ಮಾಹಿತಿ ಹಂಚಿಕೊಂಡ ಶಿಕ್ಷಕ ಘನಶ್ಯಾಮ್ ಕುಮಾರ್, ನನ್ನ ಮಕ್ಕಳಿಬ್ಬರೂ ವಾಸಿಯಾಗದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಇದರಿಂದ ದಿನೇ ದಿನೇ ಸಾವಿನತ್ತ ಸಾಗುತ್ತಿದ್ದಾರೆ. ನಾನು ನಿಯೋಜಿತ (ಗುತ್ತಿಗೆ) ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ವರ್ಗಾವಣೆ ಮಾಡಿದರೆ ನನ್ನ ಇಬ್ಬರು ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ?. ಇದುವರೆಗೆ ಅವರಿಬ್ಬರಿಗೂ 50ರಿಂದ 60 ಲಕ್ಷ ರೂಪಾಯಿ ಖರ್ಚು ಮಾಡಿದರೂ ಅವರ ಕಾಯಿಲೆ ಇನ್ನೂ ಗುಣಮುಖವಾಗಿಲ್ಲ. ದೇಶಾದ್ಯಂತ ಸುಮಾರು 6 ರಿಂದ 7 ರಾಜ್ಯಗಳಲ್ಲಿ ಚಿಕಿತ್ಸೆ ಕೊಡಿಸಿ ಸುಸ್ತಾಗಿದ್ದೇನೆ ಎಂದು ಅಳಲು ತೋಡಿಕೊಂಡರು.

ಕ್ಷಮತೆ ಪರೀಕ್ಷೆ ಮುಗಿದ ಬಳಿಕ ಇದೀಗ ನೌಕರಿಯಲ್ಲಿರುವ ಶಿಕ್ಷಕರ ವರ್ಗಾವಣೆಗೆ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಇದೇ ಸಮಯದಲ್ಲಿ ನನ್ನ ಮಕ್ಕಳ ಅಂಗವೈಕಲ್ಯವು ಹೆಚ್ಚುತ್ತಿದೆ. ಮಕ್ಕಳ ದಿನಚರಿ ಮತ್ತು ದೈನಂದಿನ ಚಟುವಟಿಕೆಗಳನ್ನು ನಾನೇ ಮಾಡಿಸಬೇಕು. ಸರ್ಕಾರ ಎಲ್ಲೋ ದೂರಕ್ಕೆ ವರ್ಗಾವಣೆ ಮಾಡಿದರೆ, ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತದೆ. ಕುಟುಂಬದಲ್ಲಿ ನಾನು ಮಾತ್ರ ಸಂಪಾದಿಸುವ ವ್ಯಕ್ತಿ. ನನ್ನ ಇಬ್ಬರು ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ. ಬೆಳಗ್ಗೆ ಶಾಲೆಗೆ ಹೋಗುವ ಮುನ್ನ ಮಕ್ಕಳಿಗೆ ನಾನೇ ಊಟ, ಔಷಧ ಕೊಟ್ಟು ಆರೈಕೆ ಮಾಡುತ್ತೇನೆ. ಆದರೆ, ಈಗ ವರ್ಗಾವಣೆ ಸುದ್ದಿಯಿಂದ ಇಡೀ ಕುಟುಂಬ ಕಂಗಾಲಾಗಿದೆ. ಸರ್ಕಾರ ಬೇರೆಡೆ ವರ್ಗಾವಣೆ ಮಾಡಿದರೆ, ಇಡೀ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಈ ವರ್ಗಾವಣೆ ಬದಲಿಗೆ ದಯಾಮರಣ ನೀಡಬೇಕು ಎಂದು ಶಿಕ್ಷಕ ಘನಶ್ಯಾಮ್ ಕುಮಾರ್ ತಮ್ಮ ಸಂಕಟವನ್ನು ಬಿಚ್ಚಿಟ್ಟರು.

ಬಿಹಾರ ರಾಜ್ಯ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಮಿತ್ ಕುಮಾರ್ ಪ್ರತಿಕ್ರಿಯಿಸಿ, ಕ್ಷಮತೆ ಪರೀಕ್ಷೆಗೆ ಯಾವುದೇ ವಿರೋಧವಿಲ್ಲ. ಆದರೆ, ಗುತ್ತಿಗೆ ಶಿಕ್ಷಕರು ಬಯಸಿದರೆ ಮಾತ್ರ, ಅಂತಹವರಿಗೆ ಸ್ವಯಂಪ್ರೇರಿತ ವರ್ಗಾವಣೆ ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಸಂಘವು ಈಗಾಗಲೇ ಒತ್ತಾಯಿಸಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಮತ್ತೆ ಪರ್ಸಂಟೇಜ್ ಸದ್ದು: ದಯಾಮರಣ ಕೋರಿದ ಗುತ್ತಿಗೆದಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.