ETV Bharat / bharat

1.87 ಕೋಟಿ ರೂಪಾಯಿಗೆ ಹರಾಜಾದ ಗಣೇಶ ಲಡ್ಡು! - Ganesh Laddu Auction

ಹೈದರಾಬಾದ್‌ನ ಬಂಡ್ಲಗುಡ ಕೀರ್ತಿ ರಿಚ್ಮಂಡ್​ ವಿಲ್ಲಾದ ಗಣೇಶ ಲಡ್ಡು 2023ರಲ್ಲಿ 1.26 ಕೋಟಿ ರೂ.ಗೆ ಹರಾಜಾಗಿದ್ದು, ಈ ವರ್ಷ ಕಳೆದ ವರ್ಷಕ್ಕಿಂತ 61 ಲಕ್ಷ ರೂ. ಹೆಚ್ಚು ಬೆಲೆಗೆ ಹರಾಜಾಗಿದೆ.

Bandlaguda Kirti Richmond Villa Ganesh Laddu auctioned for Rs 1.87 crore
ದಾಖಲೆ ಬೆಲೆಗೆ ಹರಾಜಾದ ಬಂಡ್ಲಗುಡ ಕೀರ್ತಿ ರಿಚ್ಮಂಡ್ ವಿಲ್ಲಾ​​ ಗಣೇಶ ಲಡ್ಡು (ETV Bharat)
author img

By ETV Bharat Karnataka Team

Published : Sep 17, 2024, 11:13 AM IST

ಹೈದರಾಬಾದ್​: ಹೈದರಾಬಾದ್​ನ ಬಂಡ್ಲಗುಡದಲ್ಲಿರುವ ಕೀರ್ತಿ ರಿಚ್ಮಂಡ್​ ವಿಲ್ಲಾದ ಗಣೇಶ ಲಡ್ಡು ಸೋಮವಾರ ತಡರಾತ್ರಿ ನಡೆದ ಹರಾಜಿನಲ್ಲಿ ದಾಖಲೆಯ 1.87 ಕೋಟಿ ರೂ.ಗೆ ಮಾರಾಟವಾಯಿತು. ಈ ಮೂಲಕ ತೆಲಂಗಾಣದ ಅತ್ಯಂತ ದುಬಾರಿ ಲಡ್ಡು ಎಂಬ ಮನ್ನಣೆಗೆ ಪಾತ್ರವಾಗಿದೆ.

ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ನಡೆದ ಹರಾಜಿನಲ್ಲಿ ಲಡ್ಡು 1,87,36,500 ರೂ.ಗೆ ಮಾರಾಟವಾಗಿದೆ. ಆದರೆ ಖರೀದಿದಾರರ ಹೆಸರನ್ನು ಸಂಘಟಕರು ಬಹಿರಂಗಪಡಿಸಿಲ್ಲ. 2023ರಲ್ಲಿ ಈ ಲಡ್ಡು 1.26 ಕೋಟಿ ರೂ.ಗೆ ಹರಾಜಾಗಿತ್ತು. ಕಳೆದ ವರ್ಷಕ್ಕಿಂತ ಈ ಬಾರಿ 61 ಲಕ್ಷ ರೂ. ಹೆಚ್ಚು ಬೆಲೆಗೆ ಹರಾಜಾಗಿದೆ.

ಕಳೆದ ಕೆಲವು ವರ್ಷಗಳಿಂದ ತೆಲಂಗಾಣ ರಾಜ್ಯದ ಗಣೇಶ ಚತುರ್ಥಿ ಆಚರಣೆಯಲ್ಲಿ ಕೀರ್ತಿ ರಿಚ್ಮಂಡ್​ ವಿಲ್ಲಾದ​ ಲಡ್ಡು ಅತ್ಯಂತ ದುಬಾರಿ ಬೆಲೆ ಹರಾಜಾಗುವ ಲಡ್ಡಾಗಿದೆ. 2022ರಲ್ಲಿ ಲಡ್ಡು 60 ಲಕ್ಷ ರೂಪಾಯಿಗೆ ಹರಾಜಾಗಿತ್ತು.

ಸೇವಾ ಚಟುವಟಿಕೆಗಳಿಗೆ ಹಣ ಬಳಕೆ: ಕಳೆದ 11 ವರ್ಷಗಳಿಂದ ಕೀರ್ತಿ ರಿಚ್ಮಂಡ್​ ವಿಲ್ಲಾದಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ವಿಲ್ಲಾದಲ್ಲಿರುವವರು ಮಾತ್ರ ಭಾಗವಹಿಸುತ್ತಾರೆ. ಲಡ್ಡು ಯಾರಿಗೆ ಸಿಕ್ಕರೂ ಎಲ್ಲರೂ ಸೇರಿ ಆ ಹಣವನ್ನು ಸೇವಾ ಚಟುವಟಿಕೆಗಳಿಗೆ ಬಳಸುತ್ತಾರೆ. ಒಂದು ರುಪಾಯಿಯನ್ನೂ ಕೂಡ ವೈಯಕ್ತಿಕ ಅಗತ್ಯಗಳಿಗೆ ಬಳಸುವುದಿಲ್ಲ ಎಂಬುದು ವಿಶೇಷ.

ಇದನ್ನೂ ಓದಿ: ಬೆಂಗಳೂರು: ಗಣೇಶ ಲಡ್ಡು 4.5 ಲಕ್ಷ ರೂ.ಗೆ ಹರಾಜು, ಬಿಜೆಪಿ ಮುಖಂಡನಿಂದ ಖರೀದಿ - Ganesh Laddu Auction

ETV Bharat Logo

Copyright © 2024 Ushodaya Enterprises Pvt. Ltd., All Rights Reserved.