ETV Bharat / bharat

ಈ ಬಾರಿಯ ದೀಪಾವಳಿ ಹಬ್ಬದ ಆಚರಣೆ ಬಗೆಗಿನ ಗೊಂದಲ ನಿವಾರಿಸಿದ ಜ್ಯೋತಿಷಿಗಳು: ಏನದು ಗೊಂದಲ? - ASTROLOGERS CLEARED DIWALI

ದೀಪಾವಳಿ ಹಬ್ಬವನ್ನು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ ಈ ವರ್ಷ ದೀಪಾವಳಿಯನ್ನು ನವೆಂಬರ್ 1 ರಂದು ಆಚರಿಸಲಾಗುತ್ತದೆ.

astrologers-cleared-the-confusion-regarding-the-date-of-diwali-festival-2024
ಈ ಬಾರಿಯ ದೀಪಾವಳಿ ಹಬ್ಬದ ಆಚರಣೆ ಬಗೆಗಿನ ಗೊಂದಲ ನಿವಾರಿಸಿದ ಜ್ಯೋತಿಷಿಗಳು: ಏನದು ಗೊಂದಲ? (ETV Bharat)
author img

By ETV Bharat Karnataka Team

Published : Oct 23, 2024, 9:24 AM IST

ಹಲ್ದ್ವಾನಿ (ಉತ್ತರಾಖಂಡ): ಈ ಬಾರಿಯ ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಿಸಬೇಕೇ ಅಥವಾ ನವೆಂಬರ್​​​​​​​ 1 ರಂದು ಆಚರಿಸಬೇಕಾ ಎಂಬ ಬಗ್ಗೆ ಗೊಂದಲವಿದೆ. ಯಾವಾಗ ಆಚರಿಸಬೇಕು ಎಂಬ ಬಗ್ಗೆ ಜಿಜ್ಞಾಸೆ ಇದೆ. ಈ ನಿಟ್ಟಿನಲ್ಲಿ ಹಲ್ದ್ವಾನಿಯಲ್ಲಿ ಪ್ರಾಂತೀಯ ಕೈಗಾರಿಕಾ ವ್ಯಾಪಾರದಿಂದ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಜ್ಯೋತಿಷ್ಯ ಮತ್ತು ದೀಪಾವಳಿಗೆ ಸಂಬಂಧಿಸಿದ ಇತರ ಲೆಕ್ಕಾಚಾರಗಳ ಪ್ರಕಾರ ನವೆಂಬರ್ 1 ರಂದು ದೀಪಾವಳಿ ಹಬ್ಬವನ್ನು ಆಚರಿಸಲು ಜ್ಯೋತಿಷಿಗಳು ಒಮ್ಮತದಿಂದ ಮನವಿ ಮಾಡಿದ್ದಾರೆ.

ಈ ಬಾರಿ ಅಮಾವಾಸ್ಯೆ ಎರಡು ದಿನ, ಹೀಗಾಗಿಯೇ ಗೊಂದಲ: ದೀಪಾವಳಿ ಆಚರಣೆ ಬಗ್ಗೆ ಆಚಾರ್ಯ ಡಾ.ನವೀನ್ ಚಂದ್ರ ಜೋಶಿ ಮಾತನಾಡಿ, ಈ ವರ್ಷ ಕಾರ್ತಿಕ ಅಮಾವಾಸ್ಯೆ ಒಂದು ದಿನದ ಬದಲು ಎರಡು ದಿನ ಬರುತ್ತಿದೆ. ದೀಪಾವಳಿಯ ದಿನಾಂಕದ ಕುರಿತು ನಿಮ್ಮ ಮನಸ್ಸಿನಲ್ಲಿರುವ ಸಂದಿಗ್ಧತೆಯನ್ನು ಹೋಗಲಾಡಿಸಲು, ಅನುಭವಿ, ಪಂಡಿತ ಜ್ಯೋತಿಷಿಗಳು ಮತ್ತು ದೇಶಾದ್ಯಂತ ಪ್ರಮುಖ ಜ್ಯೋತಿಷ್ಯ ಮತ್ತು ಸಂಸ್ಕೃತ ಸಂಸ್ಥೆಗಳೊಂದಿಗೆ ಮಾತನಾಡಿದ್ದೇವೆ. ಆ ಬಳಿಕ ಒಂದು ನಿರ್ಧಾರಕ್ಕೆ ಬಂದು ದೀಪಾವಳಿಯನ್ನು ನವೆಂಬರ್ 1 ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದಿನಾಂಕಗಳಿಗೆ ಏಕೆ ಅಷ್ಟೊಂದು ಮಹತ್ವ: ಹಿಂದೂ ಧರ್ಮದಲ್ಲಿ ದಿನಾಂಕಗಳಿಗೆ ವಿಶೇಷ ಮಹತ್ವವಿದೆ ಮತ್ತು ಅವುಗಳಲ್ಲಿ ಉದಯ ತಿಥಿಗೆ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಿಂದೂ ಧರ್ಮದಲ್ಲಿ, ಉಪವಾಸ ಮತ್ತು ಹಬ್ಬಗಳನ್ನು ಕೇವಲ ಉದಯ ತಿಥಿಯ ಆಧಾರದ ಮೇಲೆ ಆಚರಿಸಲಾಗುತ್ತದೆ. ಉದಯ ತಿಥಿ ಎಂದರೆ ಸೂರ್ಯೋದಯದ ಸಮಯದಲ್ಲಿ ಬರುವ ತಿಥಿ ಆಗಿರುತ್ತದೆ. ಇದಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಹೀಗಾಗಿ ನವೆಂಬರ್ 1 ರಂದು ದೀಪಾವಳಿ ಆಚರಿಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಯಾರೆಲ್ಲ ಈ ಸಮಾರಂಭದಲ್ಲಿ ಭಾಗವಹಿಸಿದ್ದರು, ಏನು ತೀರ್ಮಾನ ಬಂತು?: ಆಚಾರ್ಯ ಡಾ.ಜಗದೀಶ್ ಚಂದ್ರ ಭಟ್, ಡಾ.ನವೀನ್ ಜೋಶಿ, ಗೋಪಾಲ್ ದತ್ ಭಟ್ (ವ್ಯಾಸ್ ಜಿ), ದೀಪಕ್ ಜೋಶಿ (ರಾಮದತ್ತ ಜೋಶಿ ಪಂಚಾಂಗ ರಚನೆಕಾರ), ಮಂಜು ಜೋಶಿ, ಗೋಪಾಲ್ ದತ್ ತ್ರಿಪಾಠಿ, ಡಾ.ನವೀನ್ ಬೆಳ್ವಾಲ್, ಡಾ.ರಾಜೇಶ್ ಜೋಶಿ ನವೆಂಬರ್ 1 ರಂದು ದೀಪಾವಳಿಯನ್ನು ಆಚರಿಸುವ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಮಾರಂಭದ ವೇದಿಕೆಯಿಂದ ಉಪಾಧ್ಯಕ್ಷ ಮನೋಜ್ ಮಾತನಾಡಿದರು.

ಇದನ್ನು ಓದಿ:ಅವಿವಾಹಿತ ಹೆಣ್ಣುಮಕ್ಕಳು ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ಕಂಕಣಭಾಗ್ಯ ಕೂಡಿ ಬರುತ್ತದೆಯಂತೆ!; ಎಲ್ಲಿದೆ ಈ ಆಲಯ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.