ETV Bharat / bharat

ಗಣರಾಜ್ಯೋತ್ಸವಕ್ಕೆ ಮುನ್ನ ಕಣಿವೆ ರಾಜ್ಯದಲ್ಲಿ ಗುಂಡಿನ ಸದ್ದು; ಸೇನೆ- ಭಯೋತ್ಪಾದಕರ ನಡುವೆ ಎನ್​ಕೌಂಟರ್​​ - ARMY TROOPS EXCHANGE FIRE

ಭಯೋತ್ಪಾದಕರ ಶೋಧ ಕಾರ್ಯಾಚರಣೆ ವೇಳೆ ಸೇನೆ ಮತ್ತು ಉಗ್ರರ ನಡುವೆ ಎನ್​ಕೌಂಟರ್​ ಶುರುವಾಗಿದೆ.

army-troops-exchange-fire-with-terrorists-in-j-search-operation-underway
ಸಾಂದರ್ಭಿಕ ಚಿತ್ರ (ಐಎಎನ್​ಎಸ್​)
author img

By PTI

Published : Jan 25, 2025, 12:06 PM IST

ಜಮ್ಮು: ಇಂದು ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಸೇನೆ ಮತ್ತು ಭಯೋತ್ಪಾದಕರ ನಡುವೆ ಎನ್​ಕೌಂಟರ್​ ಆರಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಯೋತ್ಪಾದಕರ ಶೋಧ ಕಾರ್ಯಾಚರಣೆ ವೇಳೆ ಈ ಗುಂಡಿನ ಚಕಮಕಿ ನಡೆದಿದೆ.

ಮಧ್ಯರಾತ್ರಿ 1.20ರ ಸುಮಾರಿಗೆ ಶಂಕಿತ ಭಯೋತ್ಪಾದಕರ ಚಲನವಲನವು ಬಟೊಡ್​ ಪಂಚಾಯತ್​ನಲ್ಲಿ ಪತ್ತೆಯಾಗಿದೆ ಎಂದು ತಾತ್ಕಾಲಿಕ ಸೇನಾ ಕ್ಯಾಂಪ್​ ಆಗಿದ್ದ ಯೋಧರಿಗೆ ತಲುಪಿದೆ. ಈ ಬೆನ್ನಲ್ಲೇ ಅವರು ಶೋಧಕ್ಕೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಸೇನೆ ಮತ್ತು ಭಯೋತ್ಪಾದಕರ ನಡುವೆ ಸುಮಾರು ಒಂದೂವರೆ ಗಂಟೆಗಳ ಕಾಲ ಪರಸ್ಪರ ಗುಂಡಿನ ಚಕಮಕಿ ನಡೆದಿದೆ.

ಆದಾಗ್ಯೂ ಎರಡು ಕಡೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಈ ವೇಳೆ ಮೂವರು ಭಯೋತ್ಪಾದಕರು ಹತ್ತಿರದ ಅರಣ್ಯದಲ್ಲಿ ಓಡಿಹೋಗಿದ್ದಾರೆ ಎಂದು ತಿಳಿಸಿದರು.

ಭಯೋತ್ಪಾದಕರ ಮಟ್ಟಹಾಕಲು ಸೇನಾ ತಂಡಗಳು ಕಾರ್ಡೊನ್​ ಮತ್ತು ಶೋಧ ಕಾರ್ಯಾಚರನೆಯನ್ನು ನಡೆಸಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್​ ಬಿಕ್ಕಟ್ಟು: ಇಲ್ಲವೇ ಇದಕ್ಕೆ ಪರಿಹಾರ?!

ಇದನ್ನೂ ಓದಿ: ಕೇಜ್ರಿವಾಲ್ ಕೊಲ್ಲಲು ಬಿಜೆಪಿ, ದಿಲ್ಲಿ ಪೊಲೀಸ್ ಸಂಚು : ದೆಹಲಿ ಸಿಎಂ ಅತಿಶಿ ಗಂಭೀರ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.