ETV Bharat / bharat

ಪ.ಬಂಗಾಳ: ಪ್ರತಿಭಟನೆ ಮುಂದುವರೆಸಿದ ವೈದ್ಯರು, ಸಿಎಂ ಜೊತೆ ಮತ್ತೊಮ್ಮೆ ಮಾತುಕತೆಗೆ ಮನವಿ - Junior Doctors Protest

ಸೋಮವಾರ ನಡೆದ ಅಂತಿಮ ಸುತ್ತಿನ ಮಾತುಕತೆಯ ಬಳಿಕ ಇದೀಗ ವೈದ್ಯರು ಮತ್ತೊಮ್ಮೆ ಸಿಎಂ ಜೊತೆ ಮಾತುಕತೆಗೆ ಮುಂದಾಗಿದ್ದಾರೆ. ಈ ಕುರಿತು ಕಾಲಾವಕಾಶ ಕೋರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಇಮೇಲ್​ ಕಳುಹಿಸಿದ್ದಾರೆ.

agitating-junior-doctors-continue-sit-in-seek-another-meeting-with-cm
ಆರ್.​ಜಿ.ಕರ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (IANS)
author img

By PTI

Published : Sep 18, 2024, 10:11 AM IST

ಕೋಲ್ಕತ್ತಾ: ತಮ್ಮ ಬೇಡಿಕೆಗಳನ್ನು ಪಶ್ಚಿಮ ಬಂಗಾಳ ಸರ್ಕಾರ ಭಾಗಶಃ ಒಪ್ಪಿದೆ ಎಂದು ತಿಳಿಸಿದ್ದ ಆರ್.ಜಿ.ಕರ್​ ಪ್ರತಿಭಟನಾನಿರತ ಕಿರಿಯ ವೈದ್ಯರು ಇದೀಗ ಮುಖ್ಯಮಂತ್ರಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ಬಯಸಿದ್ದು, ಪ್ರತಿಭಟನೆ ಮುಂದುವರೆಸುವುದಾಗಿಯೂ ತಿಳಿಸಿದ್ದಾರೆ.

ಸ್ವಾಸ್ಥ್ಯ ಭವನದ ಮುಂದೆ ಪ್ರತಿಭಟನೆಗೆ ಮುಂದುವರೆಸಿರುವ ವೈದ್ಯರು, ಆರೋಗ್ಯ ಇಲಾಖೆ ಕಾರ್ಯದರ್ಶಿ ಎನ್.​ಎಸ್.ನಿಗಮ್​ ಅವರನ್ನು ವಜಾಗೊಳಿಸಬೇಕು ಎಂದು ಬೇಡಿಕೆಯಿಟ್ಟಿದ್ದಾರೆ. ರಾಜ್ಯ ಸರ್ಕಾರದ ಆಸ್ಪತ್ರೆಗಳಲ್ಲಿರುವ ಬೆದರಿಕೆ ಸಂಸ್ಕೃತಿಯನ್ನು ಹೊಡೆದೋಡಿಸಬೇಕು. ಕುಸಿದಿರುವ ಆರೋಗ್ಯ ವ್ಯವಸ್ಥೆಯ ಮರು ನಿರ್ಮಾಣಕ್ಕೆ ಇದು ನಿರ್ಣಾಯಕವಾಗಿದೆ. ಈ ನಿಟ್ಟಿನಲ್ಲಿ ನಾವು ಮುಖ್ಯಮಂತ್ರಿಯೊಂದಿಗೆ ಮತ್ತೊಂದು ಸುತ್ತಿನ ಸಭೆ ಬಯಸಿದ್ದೇವೆ ಎಂದು ಪ್ರತಿಭಟನಾನಿರತ ವೈದ್ಯರು ಹೇಳಿದ್ದಾರೆ.

ವೈದ್ಯರು ಮುಂದಿಟ್ಟಿರುವ ಪ್ರಮುಖ 5 ಬೇಡಿಕೆಗಳಲ್ಲಿ ಆರೋಗ್ಯ ಕಾರ್ಯದರ್ಶಿಯನ್ನು ತೆಗೆದು ಹಾಕುವುದೂ ಕೂಡ ಸೇರಿದೆ.

ಮಂಗಳವಾರ ಸಂಜೆ ಆರಂಭವಾಗಿ ತಡರಾತ್ರಿವರೆಗೂ ಆಡಳಿತ ಮಂಡಳಿಯ ಸಭೆ ನಡೆಸಿದ ವೈದ್ಯರು, ರಾಜ್ಯ ಸರ್ಕಾರದ ಕ್ರಮಗಳು ನಮ್ಮ ಪ್ರತಿಭಟನೆಯ ಭಾಗಶಃ ವಿಜಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ವೈದ್ಯರ ಸುರಕ್ಷತೆ ಮತ್ತು ಭದ್ರತೆ ಕುರಿತು ಚರ್ಚೆ ಸೇರಿದಂತೆ ಇತರೆ ಅಂಶಗಳನ್ನು ಚರ್ಚಿಸಲು ವೈದ್ಯರು ನಿರ್ಧರಿಸಿದ್ದಾರೆ.

ವೈದ್ಯರ ಬೇಡಿಕೆಯಂತೆ ಮಂಗಳವಾರ ರಾಜ್ಯ ಸರ್ಕಾರ ಮನೋಜ್​ ಕುಮಾರ್​ ವರ್ಮಾ ಅವರನ್ನು ಕೋಲ್ಕತ್ತಾದ ನೂತನ ಕಮಿಷನರ್​ ಆಗಿ ನೇಮಕಾತಿ ಮಾಡಿದೆ. ಇದರ ಜೊತೆಗೆ, ಆರೋಗ್ಯ ಸೇವೆಗಳ ನಿರ್ದೇಶಕ ದೆಬಶಿಸ್​​ ಹೈದರ್​, ವೈದ್ಯಕೀಯ ಶಿಕ್ಷಣ ನಿರ್ದೇಶಕ ಕೌಸ್ತವ್​ ನಾಯಕ್​ ಮತ್ತು ಉತ್ತರ ವಿಭಾಗದ ಕೋಲ್ಕತ್ತಾ ಪೊಲೀಸ್​ ಆಯುಕ್ತ ಅಭಿಷೇಕ್​ ಗುಪ್ತಾ ಅವರನ್ನೂ ಕೂಡ ಹುದ್ದೆಯಿಂದ ವಜಾ ಮಾಡಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರ ಪ್ರತಿಭಟನೆ, ಮಾತುಕತೆ ಭಾಗಶಃ ಯಶಸ್ವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.