ನವದೆಹಲಿ: ದೇಶದಲ್ಲಿ ನಡೆದ ಎರಡು ರೈಲು ಅಪಘಾತಗಳ ಬಗ್ಗೆ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ವಿರುದ್ಧ ಕಿಡಿಕಾರಿದೆ. ಗುರುವಾರ ಸಂಭವಿಸಿದ ಮೊದಲ ಘಟನೆಯಲ್ಲಿ, ಉತ್ತರ ಪ್ರದೇಶದ ಗೊಂಡಾದಲ್ಲಿ ಪ್ಯಾಸೆಂಜರ್ ರೈಲು ಹಳಿತಪ್ಪಿ 3 ಮಂದಿ ಸಾವನ್ನಪ್ಪಿದ್ದು, ಮತ್ತು 30 ಮಂದಿ ಗಾಯಗೊಂಡಿದ್ದಾರೆ. ದಿಬ್ರುಗಢ ಎಕ್ಸ್‌ಪ್ರೆಸ್ ರೈಲಿನ ಮುಂಭಾಗದಿಂದ 4 ರಿಂದ 5 ಬೋಗಿಗಳು ಹಳಿತಪ್ಪಿದ್ದವು.
ಎರಡನೇ ಘಟನೆಗೆ ಸಂಬಂಧಿಸಿದಂತೆ, ಶುಕ್ರವಾರ ಸಂಜೆ ಗುಜರಾತ್‌ನ ವಲ್ಸಾದ್‌ನಲ್ಲಿ ಗೂಡ್ಸ್ ರೈಲಿನ ವ್ಯಾಗನ್ ಹಳಿ ತಪ್ಪಿತ್ತು. ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ತೊಂದರೆಯಾಗಿದೆ.
मोदी सरकार में एक और रेल हादसा‼️👇
— AAP (@AamAadmiParty) July 19, 2024
अब गुजरात में मालगाड़ी पटरी से उतरी गई।
अभी एक रेल दुर्घटना की ख़बर सुर्ख़ियों से ग़ायब नहीं होती कि दूसरा रेल हादसा हो जाता है।
लेकिन अजीब बात है कि आये दिन होने वाले रेल हादसों के बाद भी प्रधानमंत्री और रेलवे मंत्री के कानों पर जूं तक नहीं… https://t.co/5cXfVP2VRh
ಎಎಪಿ ಕೇಂದ್ರದ ವಿರುದ್ಧ ವಾಗ್ದಾಳಿ: "ಮೋದಿ ಸರ್ಕಾರದಲ್ಲಿ ಮತ್ತೊಂದು ರೈಲು ಅಪಘಾತವಾಗಿದೆ. ಈಗ ಗುಜರಾತ್‌ನಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದೆ. ಈಗ ಒಂದು ರೈಲು ಅಪಘಾತದ ಸುದ್ದಿ ಮುಖ್ಯಾಂಶಗಳಿಂದ ಮಾಯವಾಗುವುದಿಲ್ಲ. ಜೊತೆಗೆ ಇನ್ನೊಂದು ರೈಲು ಅಪಘಾತ ಸಂಭವಿಸಿದೆ. ಆದರೆ, ವಿಚಿತ್ರವೆಂದರೆ ಪ್ರತಿದಿನ ರೈಲ್ವೆ ಅಪಘಾತಗಳು ಸಂಭವಿಸಿದರೂ ಪ್ರಧಾನಿ ಮತ್ತು ರೈಲ್ವೆ ಸಚಿವರು ಇತ್ತ ಗಮನಹರಿಸುತ್ತಿಲ್ಲ" ಎಂದು ಎಎಪಿ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ತೀವ್ರ ಆರೋಪಿಸಿದೆ.
ಚಂಡೀಗಢ- ದಿಬ್ರುಗಢ ಎಕ್ಸ್‌ಪ್ರೆಸ್ ಹಳಿ ತಪ್ಪಿ ಮೂವರು ಸಾವನ್ನಪ್ಪಿದ್ದಾರೆ. ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಈಶಾನ್ಯ ರೈಲ್ವೆಯ ಸಿಪಿಆರ್ಒ ಪಂಕಜ್ ಕುಮಾರ್ ಹೇಳಿದರು.
ಮೃತರ ಕುಟುಂಬಗಳಿಗೆ, ಗಾಯಾಳುಗಳಿಗೆ ಪರಿಹಾರ ಘೋಷಣೆ: ಈಶಾನ್ಯ ರೈಲ್ವೆಯ ವ್ಯಾಪ್ತಿಯಲ್ಲಿರುವ ಮೋತಿಗಂಜ್ ಮತ್ತು ಜಿಲಾಹಿ ರೈಲು ನಿಲ್ದಾಣಗಳ ನಡುವೆ ಗೊಂಡಾ ನಿಲ್ದಾಣದ ಬಳಿ ರೈಲು ಹಳಿತಪ್ಪಿದೆ. ಅಪಘಾತದ ನಂತರ, ರೈಲ್ವೆ ಸಚಿವಾಲಯವು ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ ಹಳಿ ತಪ್ಪಿ ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 10 ಲಕ್ಷ ರೂ., ಗಂಭೀರ ಗಾಯಗಳಿಗೆ 2.5 ಲಕ್ಷ ರೂ. ಮತ್ತು ಸಣ್ಣ ಗಾಯಗಳಿಗೆ ರೂ 50,000 ಪರಿಹಾರವನ್ನು ಘೋಷಣೆ ಮಾಡಿದೆ. ರೈಲ್ವೆ ಸುರಕ್ಷತಾ ಆಯುಕ್ತ (ಸಿಆರ್‌ಎಸ್) ಅವರು ರೈಲು ಹಳಿ ತಪ್ಪಿ ಅಪಘಾತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.