ETV Bharat / bharat

ಬೋರ್​​​​​ವೆಲ್​​​ ಗೆ ಬಿದ್ದ ಬಾಲಕಿ ರಕ್ಷಣೆಗೆ ಮುಂದುವರಿದ ಕಾರ್ಯಾಚರಣೆ - OPERATION CHETNA

ಕೊಟ್‌ಪುಟ್ಲಿಯಲ್ಲಿ ಬಾಲಕಿ ಬೋರ್‌ವೆಲ್‌ಗೆ ಬಿದ್ದಿದ್ದು, 18 ಗಂಟೆಗಳಿಂದ ಬಾಲಕಿ ರಕ್ಷಿಸಿ ಮೇಲೆ ತರುವ ಕಾರ್ಯಾಚರಣೆ ಮುಂದುವರೆದಿದೆ.

continuous-rescue-operation-for-girl-fell-into-borewell-in-kotputli-behror
ಬೋರ್​​​​​ ವೆಲ್​​​ ಗೆ ಬಿದ್ದ ಬಾಲಕಿ ರಕ್ಷಣೆಗೆ ಮುಂದುವರಿದ ಕಾರ್ಯಾಚರಣೆ (ETV Bharat)
author img

By ETV Bharat Karnataka Team

Published : 14 hours ago

ಜೈಪುರ, ರಾಜಸ್ಥಾನ: ಸೋಮವಾರ ಮಧ್ಯಾಹ್ನ ಬೋರ್‌ವೆಲ್‌ಗೆ ಬಿದ್ದ 3 ವರ್ಷದ ಬಾಲಕಿಯನ್ನು ಜೀವಂತವಾಗಿ ಮೇಲೆ ತರಲು ಭರದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ 18 ಗಂಟೆಗಳಿಂದ ರಕ್ಷಣಾ ಪಡೆಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿವೆ. ನಾವು ಬಾಲಕಿಯನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ. ಆದರೆ ಕೊಳವೆ ಬಾವಿಯಲ್ಲಿ ಅವಳು ಸಿಲುಕಿಕೊಂಡಿರುವ ಜಾಗದಲ್ಲಿ ಕೆಸರು ತುಂಬಿಕೊಂಡಿದೆ. ಹೀಗಾಗಿ ಅವಳನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಎಸ್ ಡಿಆರ್ ಎಫ್ ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ಹೇಳಿದ್ದಾರೆ.

ನಾವು ನಮ್ಮ ಕೈಲಾದಷ್ಟು ನಮ್ಮ ಪಯತ್ನ ಮಾಡುತ್ತಿದ್ದೇವೆ. ಬೋರ್‌ವೆಲ್‌ ಒಳಗೆ ನಿರಂತರವಾಗಿ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ ಎಂದು ರವಿಕುಮಾರ್ ಮಾಹಿತಿ ನೀಡಿದ್ದಾರೆ.

ಇನ್ನೊಂದು ಕಡೆ ಉಂಗುರ ತೊಡಿಸಿ ಬಾಲಕಿಯನ್ನು ಹೊರತರುವ ಪ್ರಯತ್ನವೂ ನಡೆಯುತ್ತಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಬಾಲಕಿ ಮೇಲಕ್ಕೆ ಕರೆ ತರಲು ಕೆಳಗೆ ಉಂಗುರ ಇರಿಸುವಲ್ಲಿ ಯಶಸ್ಸು ಸಾಧಿಸಲಾಗಿದೆ. ಇದೇ ಕಾರಣಕ್ಕೆ ಸಂಪೂರ್ಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ.

ಘಟನೆಯ ವಿವರ: ಸೋಮವಾರ ಮಧ್ಯಾಹ್ನ 1:30ರ ಸುಮಾರಿಗೆ ಮೂರೂವರೆ ವರ್ಷದ ಬಾಲಕಿ ಹೊಲದಲ್ಲಿ ಆಟವಾಡುತ್ತಿದ್ದ ವೇಳೆ ಬೋರ್‌ವೆಲ್‌ಗೆ ಬಿದ್ದಿದ್ದಳು. ಆರಂಭದಲ್ಲಿ 15 ಅಡಿ ಆಳದಲ್ಲ ಸಿಲುಕಿಕೊಂಡ ಮಗು ಬಳಿಕ ಸುಮಾರು 150 ಅಡಿ ಆಳಕ್ಕೆ ತಲುಪಿದೆ ಎನ್ನಲಾಗಿದೆ.

ಎರಡು ಬಾರಿ ರಕ್ಷಣಾ ಯತ್ನ ವಿಫಲ: ಸ್ಥಳದಲ್ಲಿದ್ದ ರಕ್ಷಣಾ ತಂಡ ಜುಗಾಡ್ ಮೂಲಕ ಬಾಲಕಿಯನ್ನು ಹೊರ ತೆಗೆಯಲು ಯತ್ನಿಸುತ್ತಿದೆ. ಇದಕ್ಕಾಗಿ ಬೋರ್‌ವೆಲ್‌ಗೆ ಕೊಕ್ಕೆ ಹಾಕಲಾಗುತ್ತಿದೆ. ಆದರೆ, ಸ್ಥಳೀಯ ಜುಗಾಡ್ ಬಳಸಿ ಬಾಲಕಿಯನ್ನು ಹೊರತೆಗೆಯುವ ಪ್ರಯತ್ನ ಎರಡು ಬಾರಿ ವಿಫಲವಾಗಿದೆ. ಸದ್ಯ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಇದೀಗ ಮತ್ತೆ ರಕ್ಷಣಾ ತಂಡ ಜುಗಾಡ್ ಮೂಲಕ ಬಾಲಕಿಯನ್ನು ರಕ್ಷಿಸಲು ಯತ್ನಿಸುತ್ತಿದೆ. ಬಾಲಕಿ ಬೋರ್​ ವೆಲ್​​​ ಗೆ ಬೀಳುವ ಸಂದರ್ಭದಲ್ಲಿ ಅದರೊಂದಿಗೆ ಮಣ್ಣು ಕೂಡ ಇಳಿಯುತ್ತಿರುವುದರಿಂದ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ.

ಏತನ್ಮಧ್ಯೆ, ತೀವ್ರ ಚಳಿಯಲ್ಲಿ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ರಾತ್ರಿಯಿಡೀ ನಿದ್ದೆ ಮಾಡಿಲ್ಲ. ಬಾಲಕಿಯನ್ನು ಹೊರತರಲು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಚೇತನಾಳ ತಾಯಿ ಧೋಲಿ ದೇವಿ ಸ್ಥಿತಿ ಹದಗೆಟ್ಟು ಅಳಲು ತೋಡಿಕೊಂಡಿದ್ದಾರೆ.

ರಕ್ಷಣಾ ತಂಡದಲ್ಲಿರುವವರು ಇವರೇ: ಬೋರ್‌ವೆಲ್‌ನಲ್ಲಿ ಸಿಲುಕಿರುವ ಚೇತನಾಳನ್ನು ರಕ್ಷಿಸಲು ರಕ್ಷಣಾ ತಂಡದಲ್ಲಿ 25 ಎನ್‌ಡಿಆರ್‌ಎಫ್ ಮತ್ತು 15 ಎಸ್‌ಡಿಆರ್‌ಎಫ್ ಸಿಬ್ಬಂದಿ ಇದ್ದಾರೆ. ಇದಲ್ಲದೇ ಪೊಲೀಸ್ ಇಲಾಖೆಯಿಂದ ಕೊಟ್‌ಪುಟ್ಲಿ ಎಸ್‌ಪಿ, ಎಎಸ್‌ಪಿ, ಡಿಎಸ್‌ಪಿ, ಮೂರು ಠಾಣೆಗಳ ಎಸ್‌ಎಚ್‌ಒ ಸೇರಿದಂತೆ 40 ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

ಸ್ಥಳದಲ್ಲಿದ್ದಾರೆ ವೈದ್ಯರು: CMHO, BCMHO, ಶಿಶುವೈದ್ಯರು ಮತ್ತು ಅರಿವಳಿಕೆ ವಿಭಾಗದ ಮುಖ್ಯಸ್ಥರು ಮತ್ತು ಆರೋಗ್ಯ ಇಲಾಖೆಯ 19 ನರ್ಸಿಂಗ್ ಸಿಬ್ಬಂದಿಯನ್ನೂ ಸಹ ಸ್ಥಳದಲ್ಲಿ ಇರಿಸಲಾಗಿದೆ. ಅಗ್ನಿಶಾಮಕ ದಳ, ಜೆಸಿಬಿ ಮತ್ತು ನಗರಸಭೆಯ 25 ಸಿಬ್ಬಂದಿಯನ್ನು ಸಹ ನಿಯೋಜಿಸಲಾಗಿದೆ.

ಸಚಿನ್ ಪೈಲಟ್ ಕಳವಳ: ಬಾಲಕಿ ಬೋರ್‌ವೆಲ್‌ಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಕಳವಳ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿ ಬಾಲಕಿಯನ್ನು ಆದಷ್ಟು ಬೇಗ ಬೋರ್‌ವೆಲ್‌ನಿಂದ ಹೊರತರುವಂತೆ ಆಡಳಿತವನ್ನು ಕೋರುತ್ತೇನೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ. ಆ ಮುಗ್ಧ ಹುಡುಗಿಯನ್ನು ಸುರಕ್ಷಿತವಾಗಿಡಲು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ:ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಐದು ವರ್ಷದ ಬಾಲಕ ಆಸ್ಪತ್ರೆಯಲ್ಲಿ ಸಾವು: ಫಲ ನೀಡಲಿಲ್ಲ 55 ಗಂಟೆಗಳ ಕಾರ್ಯಾಚರಣೆ

ನಿಷ್ಕ್ರಿಯಗೊಂಡ ಕೊಳವೆಬಾವಿಗೆ ರಿಚಾರ್ಜ್; ಆಕಾಶದೆತ್ತರಕ್ಕೆ ಚಿಮ್ಮಿದ ನೀರು! ವಿಡಿಯೋ - Borewell recharge

ETV Bharat Logo

Copyright © 2024 Ushodaya Enterprises Pvt. Ltd., All Rights Reserved.