ETV Bharat / bharat

ಹಾವಿನ ಚರ್ಮ ಸುಲಿದು, ಕರಿದು ತಿಂದ ತಮಿಳುನಾಡು ವ್ಯಕ್ತಿ: ವನ್ಯಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಬಂಧನ - Man Eat Snake

ತಮಿಳುನಾಡು ವ್ಯಕ್ತಿಯೊಬ್ಬ ಬುಸ್​ ಬುಸ್​ ನಾಗಪ್ಪನನ್ನು ಸಾಯಿಸಿ, ಕರಿದು ತಿಂದ ಘಟನೆ ನಡೆದಿದೆ. ಈಗ ಆತ ಜೈಲು ಕಂಬಿ ಎಣಿಸುವಂತಾಗಿದೆ.

author img

By ETV Bharat Karnataka Team

Published : Jun 12, 2024, 5:52 PM IST

ಹಾವಿನ ಚರ್ಮ ಸುಲಿದು, ಕರಿದು ತಿಂದ ತಮಿಳುನಾಡು ವ್ಯಕ್ತಿ
ಹಾವಿನ ಚರ್ಮ ಸುಲಿದು, ಕರಿದು ತಿಂದ ತಮಿಳುನಾಡು ವ್ಯಕ್ತಿ (ETV Bharat)

ತಿರುಪತ್ತೂರು(ತಮಿಳುನಾಡು): ಚೀನಾ, ಥೈಲ್ಯಾಂಡ್​ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಹಾವು, ಚೇಳು, ಜಿರಳೆಗಳು ಆಹಾರ ಖಾದ್ಯದ ಭಾಗವಾಗಿವೆ. ನಮ್ಮಲ್ಲಿ ನಾಗಪ್ಪ ಎಂದು ದೇವರಂತೆ ಭಾವಿಸಿ ಪೂಜಿಸುತ್ತೇವೆ. ಇಂತಿಪ್ಪ, ತಮಿಳುನಾಡಿನ ವ್ಯಕ್ತಿಯೊಬ್ಬ ವಿಷಪೂರಿತ ಹಾವನ್ನು ಸಾಯಿಸಿ, ಅದನ್ನು ಕರಿದು ತಿಂದಿದ್ದಾನೆ. ಇದೀಗ ಆತನನ್ನು, ವನ್ಯಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಹಾಕಲಾಗಿದೆ.

ತಿರುಪತ್ತೂರು ಜಿಲ್ಲೆಯ ಪೆರುಮಾಪಟ್ಟು ಪ್ರದೇಶದ ರಾಜೇಶ್ ಕುಮಾರ್ (30) ವಿಕೃತಿ ಮೆರೆದ ವ್ಯಕ್ತಿ. ಈತ ಜೂನ್​ 11ರಂದು ಹಾವನ್ನು ಸಾಯಿಸಿ, ಅದರ ಚರ್ಮ ಸುಲಿದು ಬಳಿಕ ಕತ್ತರಿಸಿ ಖಾದ್ಯವನ್ನಾಗಿ ಮಾಡಿಕೊಂಡು ತಿಂದಿದ್ದಾನೆ. ಹಾವಿನ ಚರ್ಮವನ್ನು ಸುಲಿದು ತೊಳೆಯುತ್ತಿರುವ ದೃಶ್ಯವನ್ನು ಆತನೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದನ್ನು ಕಂಡವರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಡಿಯೋ ಆಧಾರದ ಮೇಲೆ ತನಿಖೆ ನಡೆಸಿದ ಅರಣ್ಯ ಇಲಾಖೆ ಪೊಲೀಸರು ಆರೋಪಿಯನ್ನು ತಿರುಪತ್ತೂರಿನಲ್ಲಿ ಪತ್ತೆ ಮಾಡಿದ್ದಾರೆ. ವಿಚಾರಣೆಯ ವೇಳೆ ಆತ ಹಾವನ್ನು ಕರಿದು ತಿಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ವಿಚಾರಣೆಯ ಬಳಿಕ ಆತನನ್ನು ವನ್ಯಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಳಿಕ ಆರೋಪಿ ರಾಜ್‌ಕುಮಾರ್‌ಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಇದನ್ನೂ ಓದಿ: ಅಡುಗೆ ಕೋಣೆಯಲ್ಲಿ ಬುಸುಗುಡುತ್ತಿದ್ದ ಸರ್ಪ: ಕೇರೆ ಹಾವೆಂದುಕೊಂಡವರಿಗೆ ಹೆಡೆ ಎತ್ತಿ ಎಚ್ಚರಿಸಿದ ಕಾಳಿಂಗ! - King Cobra in Kitchen

ETV Bharat Logo

Copyright © 2024 Ushodaya Enterprises Pvt. Ltd., All Rights Reserved.