ETV Bharat / bharat

ಕೊಳವೆಬಾವಿಯಲ್ಲಿ ಬಿದ್ದ 2 ವರ್ಷದ ಬಾಲಕನ ಯಶಸ್ವಿ ರಕ್ಷಣೆ: ಫಲ ನೀಡಿದ 9 ಗಂಟೆಗಳ ಕಾರ್ಯಾಚರಣೆ - ಬಾಲಕನ ಯಶಸ್ವಿಯಾಗಿ ರಕ್ಷಣೆ

ಗುಜರಾತ್‌ನ ಜಾಮ್‌ನಗರ ಜಿಲ್ಲೆಯ ಲಾಲ್‌ಪುರ ತಾಲೂಕಿನ ಗೋವಾನಾ ಗ್ರಾಮದಲ್ಲಿ ನಿನ್ನೆ (ಫೆಬ್ರವರಿ 6) ಸಂಜೆ 6:30ಕ್ಕೆ ಮಹಾರಾಷ್ಟ್ರದ ಕೂಲಿ ಕಾರ್ಮಿಕ ಕುಟುಂಬದ ಎರಡು ವರ್ಷದ ಬಾಲಕ ರಾಜ್ 200 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ. ಈ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಜಾಮ್‌ನಗರ ಆಡಳಿತದ ಎಲ್ಲ ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿದ್ದವು. ಇಂದು (ಬುಧವಾರ) ಬೆಳಗಿನ ಜಾವ 3:30ಕ್ಕೆ ಸತತ 9 ಗಂಟೆಗಳ ಕಾರ್ಯಾಚರಣೆ ನಂತರ, ಬಾಲಕ ರಾಜ್‌ನನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.

A child who fell into a borewell  ಕೊಳವೆಬಾವಿಯಲ್ಲಿ ಬಿದ್ದ 2 ವರ್ಷದ ಬಾಲಕ  ಬಾಲಕನ ಯಶಸ್ವಿಯಾಗಿ ರಕ್ಷಣೆ  ಫಲ ನೀಡಿದ ಕಾರ್ಯಾಚಾರಣೆ
ಕೊಳವೆಬಾವಿಯಲ್ಲಿ ಬಿದ್ದ 2 ವರ್ಷದ ಬಾಲಕನ ಯಶಸ್ವಿಯಾಗಿ ರಕ್ಷಣೆ: ಫಲ ನೀಡಿದ 9 ಗಂಟೆಗಳ ಕಾರ್ಯಾಚಾರಣೆ
author img

By ETV Bharat Karnataka Team

Published : Feb 7, 2024, 10:00 AM IST

ಜಾಮ್​ನಗರ (ಗುಜರಾತ್​): ಗುಜರಾತ್‌ ರಾಜ್ಯದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ತೆರೆದ ಕೊಳೆವೆ ಬಾವಿಗೆ ಮಕ್ಕಳು ಬಿದ್ದ ಮೂರನೇ ಘಟನೆ ನಿನ್ನೆ (ಮಂಗಳವಾರ) ಬೆಳಕಿಗೆ ಬಂದಿದೆ. ಈ ಹಿಂದೆ ತಮಾಚನ್ ಹಳ್ಳಿ ಮತ್ತು ರಾನ್ ಗ್ರಾಮದಲ್ಲಿ ನಡೆದ ಎರಡು ಘಟನೆಗಳಲ್ಲಿ ರಕ್ಷಣಾ ಕಾರ್ಯಾಚರಣೆಯ ನಂತರವೂ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಆದರೆ, ನಿನ್ನೆ (ಫೆಬ್ರವರಿ 6) ಜಾಮ್‌ನಗರ ಜಿಲ್ಲೆಯ ಲಾಲ್‌ಪುರ ತಾಲೂಕಿನ ಗೋವಾನಾ ಗ್ರಾಮದಲ್ಲಿ 2 ವರ್ಷದ ಬಾಲಕ 200 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿರುವ ಘಟನೆ ನಡೆದಿತ್ತು. ಆದರೆ, ಈ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಮಗು ಬದುಕಿ ಬಂದಿದೆ.

ರಕ್ಷಣಾ ಕಾರ್ಯಾಚರಣೆ ಶ್ಲಾಘಿಸಿದ ಗ್ರಾಮಸ್ಥರು: ಈ ಬಗ್ಗೆ ಮಾಹಿತಿ ಬಂದ ತಕ್ಷಣವೇ ಜಾಮ್‌ನಗರ ಆಡಳಿತವು ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳದ ಅಧಿಕಾರಿಗಳು, ಎಲ್ಲ ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಕರೆಯಿಸಿಕೊಂಡಿತ್ತು. ಇಂದು ಬೆಳಗಿನ ಜಾವ 3:30ಕ್ಕೆ 9 ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಕೊಳವೆ ಬಾವಿಯೊಳಗೆ ಬಿದ್ದಿದ್ದ 2 ವರ್ಷದ ಬಾಲಕ ರಾಜ್‌ನನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆಯನ್ನು ಗ್ರಾಮಸ್ಥರು ಶ್ಲಾಘಿಸಿ, ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

200 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಬಾಲಕ: ಗೋವಾನಾ ಗ್ರಾಮದಲ್ಲಿ ಕೃಷಿ ಕೂಲಿ ಕೆಲಸ ಮಾಡುವ ಮಹಾರಾಷ್ಟ್ರದ ಕುಟುಂಬಕ್ಕೆ ಸೇರಿದ ಎರಡು ವರ್ಷದ ರಾಜ್ ಹೊಲದಲ್ಲಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ 200 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ. ಮಗುವಿನ ಪೋಷಕರಿಗೆ ವಿಷಯ ತಿಳಿದ ತಕ್ಷಣ ಗ್ರಾಮಸ್ಥರಿಗೆ ಮಾಹಿತಿ ನೀಡಿ, ಗ್ರಾಮದ ಸರಪಂಚ ಹಾಗೂ ಸ್ಥಳೀಯ ಮುಖಂಡರ ನೆರವಿನಿಂದ ಆಡಳಿತ ಮಂಡಳಿಯ ನೆರವು ಕೋರಿದ್ದಾರೆ. ತಕ್ಷಣವೇ ವೈದ್ಯಕೀಯ ತಂಡದೊಂದಿಗೆ ಜಾಮ್‌ನಗರ ಜಿಲ್ಲಾಡಳಿತವು ಎಲ್ಲಾ ರಕ್ಷಣಾ ತಂಡಗಳ ಸಮೇತ ಸ್ಥಳಕ್ಕೆ ತಲುಪಿತ್ತು.

ರಕ್ಷಣಾ ಕಾರ್ಯಾಚರಣೆ ಪೂರ್ಣ: ಜಾಮ್‌ನಗರ ಮುನ್ಸಿಪಲ್ ಕಾರ್ಪೊರೇಷನ್ ಅಗ್ನಿಶಾಮಕ ಠಾಣಾಧಿಕಾರಿ ರಾಕೇಶ್ ಗೋಕಾನಿ ಮತ್ತು ಕಾಮಿಲ್ ಮೆಹ್ತಾ ತಂಡವು ಮೊದಲು ಸ್ಥಳಕ್ಕೆ ಧಾವಿಸಿ ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಮಗುವನ್ನು ಹೊರತೆಗೆಯಲು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿತ್ತು. ಈ ಕಾರ್ಯಾಚರಣೆಯಲ್ಲಿ ರಿಲಯನ್ಸ್ ಸೇರಿದಂತೆ ಹಲವು ಅಗ್ನಿಶಾಮಕ ತಂಡಗಳು ಭಾಗವಹಿಸಿದ್ದವು. ಬೋರ್‌ವೆಲ್‌ನಲ್ಲಿದ್ದ ಮಗುವಿಗೆ ನಿರಂತರವಾಗಿ ಆಮ್ಲಜನಕವನ್ನು ಪೂರೈಸಲಾಯಿತು. ಅದೇ ಸಮಯದಲ್ಲಿ ಬೋರ್‌ವೆಲ್‌ನ ಅಂಚಿನಿಂದ ಮೂರು ಅಡಿ ದೂರದಲ್ಲಿ ಆಳವಾದ ಹೊಂಡವನ್ನು ತೋಡಿ ಒಂಬತ್ತು ಗಂಟೆಗಳ ಪರಿಶ್ರಮದ ನಂತರ 3.30ಕ್ಕೆ ಮಗುವನ್ನು ಯಶಸ್ವಿಯಾಗಿ ಮೇಲಕ್ಕೆ ಕರೆತರಲಾಗಿದೆ. ಈ ಮೂಲಕ ರಕ್ಷಣಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.

ಜಿಜಿ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ: ಬಾಲಕನನ್ನು ಬೋರ್‌ವೆಲ್‌ನಿಂದ ಜೀವಂತವಾಗಿ ಹೊರತೆಗೆದ ನಂತರ, ಮಗುವನ್ನು ತಕ್ಷಣವೇ 108 ಆಂಬ್ಯುಲೆನ್ಸ್‌ ಮೂಲಕ ಜಿಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ಮಕ್ಕಳ ವೈದ್ಯರ ತಂಡದಿಂದ ಪ್ರಥಮ ಚಿಕಿತ್ಸೆ ನೀಡಲಾಯಿತು. ಮಹತ್ವದ ಸಂಗತಿ ಎಂದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು, ಜಾಮ್​ನಗರದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಕೊಳವೆಬಾವಿಯಲ್ಲಿ ಬಿದ್ದ ಮಗುವಿನ ಜೀವ ಉಳಿಸಲಾಗಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಂಚು ಪ್ರಕರಣ: ತಲೆಮರೆಸಿಕೊಂಡಿದ್ದ ಮಾಜಿ ಯೋಧ ದೆಹಲಿಯಲ್ಲಿ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.