ETV Bharat / bharat

ಬಾರಾಮುಲ್ಲಾದಲ್ಲಿ ಗುಂಡಿನ ಚಕಮಕಿ: ಭದ್ರತಾ ಪಡೆಗಳಿಂದ ಇಬ್ಬರು ಉಗ್ರರ ಹತ್ಯೆ - Terrorists Killed - TERRORISTS KILLED

ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಕಳೆದ ಎರಡು ದಿನಗಳಿಂದ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಯುತ್ತಿದೆ. ಇಂದು ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ.

ಭದ್ರತಾ ಸಿಬ್ಬಂದಿ ಗುಂಡೇಟಿಗೆ ಇಬ್ಬರು ಉಗ್ರರು ಬಲಿ

author img

By PTI

Published : Apr 26, 2024, 2:55 PM IST

ಶ್ರೀನಗರ(ಜಮ್ಮು- ಕಾಶ್ಮೀರ): ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನದ ನಡುವೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ಮೊರೆತ ಕೇಳಿಬಂದಿದೆ. ಭದ್ರತಾ ಪಡೆಗಳ ಗುಂಡಿನ ದಾಳಿಗೆ ಇಬ್ಬರು ಉಗ್ರರು ಹತರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾರಾಮುಲ್ಲಾದಲ್ಲಿ ಗುರುವಾರ ಉಗ್ರರು ಅಡಗಿ ಕುಳಿತಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಂದು ಉಗ್ರರ ದಾಳಿಗೆ ಪ್ರತಿ ದಾಳಿ ನಡೆಸಿದ ಭದ್ರತಾ ಸಿಬ್ಬಂದಿ ಇಬ್ಬರನ್ನು ಹತ್ಯೆಗೈದಿದ್ದಾರೆ.

ಉತ್ತರ ಕಾಶ್ಮೀರದ ಸೋಪೋರ್ ಪ್ರದೇಶದ ಚೆಕ್ ಮೊಹಲ್ಲಾ ನೌಪೋರಾದಲ್ಲಿ ಎನ್‌ಕೌಂಟರ್ ಪ್ರಾರಂಭವಾಗಿದೆ. ಗುರುವಾರ ರಾತ್ರಿಯ ವಿರಾಮದ ನಂತರ ಶುಕ್ರವಾರ ಬೆಳಿಗ್ಗೆ ಗುಂಡಿನ ಚಕಮಕಿ ನಡೆದಿದೆ. ಗಾಯಗೊಂಡ ಸೇನಾ ಸಿಬ್ಬಂದಿಯನ್ನು ಸೇನಾಸ್ಪತ್ರೆಗೆ ರವಾನಿಸಲಾಗಿದೆ.

ಎನ್‌ಕೌಂಟರ್ ನಡೆದ ಸ್ಥಳದ ಸಮೀಪ ನಾಗರಿಕರೊಬ್ಬರು ಗಾಯಗೊಂಡಿದ್ದಾರೆ. ಈ ಪ್ರದೇಶದಿಂದ ಭಯೋತ್ಪಾದಕರನ್ನು ಹೊಡೆದೋಡಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ನೈಜರ್, ಚಾಡ್​ನಿಂದ ಸೇನಾಪಡೆಗಳನ್ನು ಹಿಂಪಡೆಯಲು ಅಮೆರಿಕ ಸಿದ್ಧತೆ - troops withdrawal from niger

ETV Bharat Logo

Copyright © 2024 Ushodaya Enterprises Pvt. Ltd., All Rights Reserved.