ಮಲೆಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಅದ್ಧೂರಿ ರಥೋತ್ಸವ: 5 ದಿನಗಳ ಜಾತ್ರೆ ಸಂಪನ್ನ!! - ಮಲೆಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಅದ್ಧೂರಿ ರಥೋತ್ಸವ
🎬 Watch Now: Feature Video
ಮಾಯಕಾರ ಮಾದಪ್ಪನ ಯುಗಾದಿಯ ರಥೋತ್ಸವ ಇಂದು ಸಾವಿರಾರು ಭಕ್ತ ಸಮೂಹದೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಿತು. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರಸ್ವಾಮಿ ಬೆಟ್ಟದಲ್ಲಿಂದು ಯುಗಾದಿ ಹಬ್ಬದ ಅಂಗವಾಗಿ ಮಾದಪ್ಪನ ರಥೋತ್ಸವ ಇಂದು ಬೆಳಗ್ಗೆ 7.30ರಿಂದ 9.00ರವರೆಗಿನ ಶುಭ ಮಹೂರ್ತದಲ್ಲಿ ಸಾಲೂರು ಮಠದ ಪೀಠಾಧಿಪತಿಗಳ ಅಧ್ಯಕ್ಷತೆಯಲ್ಲಿ ನಡೆಯಿತು. ಸಾಲೂರು ಮಠದ ಪೀಠಾಧಿಪತಿಗಳು ತೇರಿಗೆ ಮತ್ತು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಮಹಾರಥೊತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಮಾದಪ್ಪನ ರಥ ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಇದೆ ವೇಳೆ ಮುಜರಾಯಿ ಇಲಾಖೆ ಸೂಚನೆ ಹಿನ್ನೆಲೆ ಸಾವಿರಾರು ಮಂದಿಗೆ ಬೇವು-ಬೆಲ್ಲ ವಿತರಣೆ ಮಾಡಲಾಯಿತು. ಇನ್ನು, ಕಳೆದ 5 ದಿನಗಳಿಂದ ನಡೆಯುತ್ತಿದ್ದ ಯುಗಾದಿ ಜಾತ್ರೆ ರಥೋತ್ಸವದ ಮೂಲಕ ವಿದ್ಯುಕ್ತವಾಗಿ ಸಂಪನ್ನಗೊಂಡಿತು.
Last Updated : Feb 3, 2023, 8:21 PM IST