'ಜನರನ್ನು ಉಳಿಸಿ, ದೇಶವನ್ನು ಉಳಿಸಿ'.. ಶಿವಮೊಗ್ಗದಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ - Trade Union Protest In shivamogga
🎬 Watch Now: Feature Video

ಶಿವಮೊಗ್ಗ: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಶಿವಮೊಗ್ಗ ವತಿಯಿಂದ 'ಜನರನ್ನು ಉಳಿಸಿ, ದೇಶವನ್ನು ಉಳಿಸಿ' ಎಂಬ ಘೋಷ ವಾಕ್ಯದೊಂದಿಗೆ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಾರ್ಮಿಕ ಸಂಹಿತೆ ರದ್ದು, ಖಾಸಗೀಕರಣಕ್ಕೆ ವಿರೋಧ, ಎಲ್ಲಾ ಶ್ರಮಿಕರಿಗೆ ಸಾಮಾಜಿಕ ಭದ್ರತೆ, ಗುತ್ತಿಗೆ ಕಾರ್ಮಿಕರ ಖಾಯಂಗೊಳಿಸುವಿಕೆ, ಹಳೆ ರೀತಿಯ ಪಿಂಚಣಿ ಯೋಜನೆ ಜಾರಿ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು. ಸುಮಾರು 11 ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
Last Updated : Feb 3, 2023, 8:21 PM IST