ಮದುವೆಯಲ್ಲಿ ಪಿಸ್ತೂಲ್‌ನಿಂದ ಗುಂಡು ಹಾರಿಸುತ್ತ ಭರ್ಜರಿ ನೃತ್ಯ: ವಿಡಿಯೋ ವೈರಲ್ - ಪಿಸ್ತೂಲ್‌ನಿಂದ ಗುಂಡು ಹಾರಿಸುತ್ತಾ ನೃತ್ಯ
🎬 Watch Now: Feature Video
ನಳಂದಾ (ಬಿಹಾರ): ಮಹಿಳಾ ಡ್ಯಾನ್ಸರ್ ಜೊತೆ ಯುವಕನೋರ್ವ ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಡ್ಯಾನ್ಸ್ ಮಾಡ್ತಿರುವ ವಿಡಿಯೋ ವೈರಲ್ ಆಗಿದೆ. ಬಿಹಾರದ ನಳಂದಾದ ಹರ್ನೌಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗ್ತಿದೆ. ಗೋನಾಮಾ ಗ್ರಾಮದ ರಂಜಿತ್ ಸಿಂಗ್ ಅವರ ಪುತ್ರ ಆಕಾಶ್ ಕುಮಾರ್ ಅವರ ವಿವಾಹದ ಸಮಾರಂಭದ ವಿಡಿಯೋ ಎಂದು ಹೇಳಲಾಗುತ್ತದೆ. ಇದರಲ್ಲಿ ಹಳ್ಳಿಯ ದಬಾಂಗ್ ಕನ್ಹಯ್ಯಾ ಕುಮಾರ್ ಬಾರ್ ಗರ್ಲ್‌ಗಳೊಂದಿಗೆ ಕಂಟ್ರಿ ಪಿಸ್ತೂಲ್‌ನಿಂದ ಗುಂಡು ಹಾರಿಸುತ್ತ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ವಿಡಿಯೋ ಹೊರಬಿದ್ದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.