ಅಪಾಯಕಾರಿ ನದಿ ನೀರಿನಲ್ಲಿ ಕಾರು ಓಡಿಸಿ ಯುವಕರ ಹುಚ್ಚಾಟ: ವಿಡಿಯೋ - ರಾಜ್ಕೋಟ್ನಲ್ಲಿ ಯುವಕರ ಹುಚ್ಚಾಟ
🎬 Watch Now: Feature Video
ಗುಜರಾತ್ನಲ್ಲಿ ಮಳೆ ರಣಭೀಕರತೆ ಪಡೆದಿದೆ. ನದಿಗಳು ಪ್ರವಾಹದ ರೀತಿಯಲ್ಲಿ ಹರಿಯುತ್ತಿವೆ. ನದಿ ಪಾತ್ರಗಳಿಗೆ ಜನರು ತೆರಳದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಈ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಯುವಕರ ಹುಚ್ಚು ಸಾಹಸದ ವಿಡಿಯೋವೊಂದು ವೈರಲ್ ಆಗಿದೆ. ರಾಜ್ಕೋಟ್ನಲ್ಲಿನ ನದಿಯಲ್ಲಿ ಯುವಕರು ವಾಹನದ ಸಮೇತ ಹುಚ್ಚಾಟ ಮೆರೆದಿದ್ದಾರೆ. ನದಿಯ ದಂಡೆಯ ಮೇಲೆ ಕಾರು ಓಡಿಸಿಕೊಂಡು ಹೋಗಿ ಬಳಿಕ ಅಲ್ಲಿಂದ ಹರಿಯುತ್ತಿರುವ ನದಿ ನೀರಿನಲ್ಲಿಯೇ ಕಾರನ್ನು ಓಡಿಸಿಕೊಂಡು ಬಂದಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಕಾರು ಕೊಚ್ಚಿಕೊಂಡು ಹೋಗಿದ್ದರೆ ಯವಕರು ನೀರು ಪಾಲಾಗುತ್ತಿದ್ದರು. ಈ ಅಪಾಯಕಾರಿ ಸಾಹಸದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.