100 ಅಡಿ ಎತ್ತರದ ವಿದ್ಯತ್ ಟವರ್ ಏರಿ ಕುಳಿತ ಯುವಕ : ಕೆಳಗಿಳಿಸಲು ಹರಸಾಹಸ - young man climbed the tower at Hakima Wala in Amritsar
🎬 Watch Now: Feature Video

ಅಮೃತಸರ ಜಿಲ್ಲಾ ಗೇಟ್ ಬಳಿಯಿರುವ 100 ಅಡಿ ಎತ್ತರದ ವಿದ್ಯುತ್ ಟವರ್ ಒಂದರ ಮೇಲೆ ಯುವಕನೊಬ್ಬ ಏರಿ ಕುಳಿತಿದ್ದು, ಸುತ್ತಲಿನ ಜನರನ್ನು ಮಾತ್ರವಲ್ಲದೆ ಪೊಲೀಸರನ್ನೂ ದಂಗಾಗಿಸಿದೆ. ಮೇಲೆ ಹತ್ತಿರುವ ವ್ಯಕ್ತಿ ಮಾನಸಿಕ ಅಸ್ವಸ್ಥನಲ್ಲದೆ, ಮಾದಕ ವ್ಯಸನಿಯಾಗಿದ್ದಾನೆ. ಬೆಳಗ್ಗೆ 8 ಗಂಟೆ ಹೊತ್ತಿಗೆ ಏಕಾಏಕಿ ಟವರ್ ಹತ್ತಿ ಕುಳಿತಿದ್ದಾನೆ ಎಂದು ಸ್ಥಳೀಯರು ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿ ಕುಲದೀಪ್ ಸಿಂಗ್ ಅವರಲ್ಲಿ ದೂರಿದ್ದಾರೆ. ಯಾವುದೇ ಸೌಲಭ್ಯಗಳಿಲ್ಲದ ಕಾರಣ ಪೊಲೀಸರಿಂದಲೂ ಆತನನ್ನೂ ಕೆಳಗಿಳಿಸಲಾಗಿಲ್ಲ. ಸದ್ಯ ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿದ್ದು, ಶೀಘ್ರವೇ ಆತನನ್ನು ಕೆಳಗಿಳಿಸುವ ಕಾರ್ಯ ಪ್ರಗತಿಯಲ್ಲಿದೆ.