ಶಿವನ ದೇಗುಲದಲ್ಲಿ ಪೂಜೆ ಮಾಡ್ತಿದ್ದಾಗ ಬಟ್ಟೆಗೆ ಹೊತ್ತಿಕೊಂಡ ಬೆಂಕಿ; ಮಹಿಳೆ ಸಾವು
🎬 Watch Now: Feature Video
ಪಲಾಮು(ಜಾರ್ಖಂಡ್): ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸಜೀವ ದಹನವಾಗಿದ್ದಾರೆ. ಘಟನೆಯ ವಿಡಿಯೋ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಮೇದಿನಿನಗರದ ಕುಂಡ್ ಮೊಹಲ್ಲಾದಲ್ಲಿರುವ ಶಿವನ ದೇವಸ್ಥಾನಕ್ಕೆ ಮಹಿಳೆ ಪೂಜೆ ಮಾಡಲು ತೆರಳಿದ್ದರು. ದೀಪ ಹಚ್ಚುವ ವೇಳೆ ಮಹಿಳೆಯ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ದೇವಾಲಯದಿಂದ ಹೊರಬಂದು, ನಂತರ ಒಳಗೆ ಓಡಿ ಹೋಗಿದ್ದಾಳೆ. ಮಹಿಳೆಗೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ.
Last Updated : Apr 27, 2022, 3:10 PM IST