ಮೈದುಂಬಿ ಹರಿಯುತ್ತಿರುವ ಜೋಗ ಜಲಪಾತ: ವೀಕ್ಷಣೆಗೆ ಪ್ರವಾಸಿಗರ ದಂಡು - ಶಿವಮೊಗ್ಗ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15848470-thumbnail-3x2-bng.jpeg)
ಶಿವಮೊಗ್ಗ: ಜೋಗ ಜಲಪಾತ ಮಳೆಯ ಅಬ್ಬರಕ್ಕೆ ಮೈದುಂಬಿ ಹರಿಯುತ್ತಿದೆ. ಈ ಕಣ್ಮನ ಸೆಳೆಯುವ ದೃಶ್ಯ ಸವಿಯಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ವಾರದ ರಜೆಯ ಹಿನ್ನೆಲೆಯಲ್ಲಿ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಶರಾವತಿ ಧುಮ್ಮಿಕ್ಕಿ ಹರಿಯುವುದನ್ನು ಒಮ್ಮೊಮ್ಮೆ ಮಂಜು ಮುಸುಕಾಗಿಸಿ ಟೂರಿಸ್ಟ್ಗಳಿಗೆ ಬೇಸರ ತರಿಸಿದರೆ, ಬೀಸುವ ಗಾಳಿ ಮಂಜು ಸರಿದಾಗ ಮನಮೋಹಕಾವಾಗಿ ರಾಜ, ರಾಣಿ, ರೋರೋ, ರಾಕೆಟ್ ಧರೆಗಿಳಿಯುವುದನ್ನು ಕಂಡು ಉಲ್ಲಾಸಿತರಾಗುತ್ತಿದ್ದಾರೆ. ಅಭಿವೃದ್ಧಿ ಕಾರ್ಯ ಜರುಗುತ್ತಿರುವುದರಿಂದ ಪ್ರವಾಸಿಗರಿಗೆ ವಾಹನ ನಿಲುಗಡೆ ಸಮಸ್ಯೆ ಆಗುತ್ತಿದೆ. ಪ್ರವಾಸಿಗರ ಹೆಚ್ಚಳ ಇಲ್ಲಿನ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ.