ರೋಡ್ ರೋಲರ್ ಹತ್ತಿಸಿ ಕರ್ಕಶ ಸದ್ದು ಮಾಡುವ 631 ಸೈಲೆನ್ಸರ್ ನಾಶ: ವಿಡಿಯೋ - ಕರ್ಕಶ ಸದ್ದು ಮಾಡುವ ಸೈಲೆನ್ಸರ್ ನಾಶ
🎬 Watch Now: Feature Video
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಶಬ್ಧಮಾಲಿನ್ಯಕ್ಕೆ ಕಾರಣವಾಗಿದ್ದ ಬೈಕ್ಗಳ ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ರೋಡ್ ರೋಲರ್ ಹತ್ತಿಸಿ ನಾಶಪಡಿಸಲಾಗಿದೆ. ರಾಯಲ್ ಎನ್‌ಫೀಲ್ಡ್, ಡ್ಯೂಕ್ ಮತ್ತು ಇತರೆ ಹೈ-ಎಂಡ್ ಬೈಕ್‌ಗಳಲ್ಲಿ ಬಳಸಲಾಗುತ್ತಿದ್ದ ಹೆಚ್ಚು ಸದ್ದು ಮಾಡುವ 631 ಸೈಲೆನ್ಸರ್‌ಗಳನ್ನು ಪೊಲೀಸರು ವಶಕ್ಕೆ ಪಡೆದು, ನಾಶ ಮಾಡಿದ್ದಾರೆ. ಇವುಗಳ ಬಳಕೆಯಿಂದ ಶಬ್ಧಮಾಲಿನ್ಯ, ಜನರಲ್ಲಿ ಕಿರಿಕಿರಿ ಉಂಟು ಮಾಡುತ್ತಿತ್ತು. ವಿಶಾಖಪಟ್ಟಣದ ರಸ್ತೆ ಸಂಚಾರಿ ವಿಭಾಗದ ಅಧಿಕಾರಿಗಳು ಇದಕ್ಕಾಗಿಯೇ ತಂಡಗಳನ್ನು ರಚಿಸಿದ್ದಾರೆ.