ಭಾರಿ ಮಳೆಗೆ ವಿಜಯಪುರ ಸಂಗಮನಾಥ ದೇವಸ್ಥಾನ ಜಲಾವೃತ - ETV Bharat Kannada
🎬 Watch Now: Feature Video
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆ ಹಾಗೂ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ಮೂಲಕ ಕಾಲುವೆಗೆ ಹರಿದ ನೀರಿನಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿವೆ. ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳ ತುಂಬಿ ಹರಿಯುತ್ತಿದ್ದು, ದೇವಾಲಯದ ಆವರಣದ ತುಂಬಾ ನೀರು ಹರಿಯುತ್ತಿದೆ. ಗರ್ಭಗುಡಿಯೊಳಗೂ ನೀರು ನುಗ್ಗಿ, ನೋಡುಗರಿಗೆ ಸೆಲ್ಫಿ ತಾಣವಾಗಿದೆ.