ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಯ್ತು ತುಂಗಭದ್ರೆಯ ನಿಸರ್ಗ ರಮಣೀಯ ದೃಶ್ಯ - Koppal Gangavati Tungabhadra Reservoir
🎬 Watch Now: Feature Video
ಗಂಗಾವತಿ(ಕೊಪ್ಪಳ): ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಸಿದ್ದರಿಂದ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತುಂಗಭದ್ರಾ ನದಿಯಲ್ಲಿ ಉಂಟಾಗಿರುವ ಪ್ರವಾಹದ ಸನ್ನಿವೇಶದ ಕೆಲ ಅದ್ಭುತ ದೃಶ್ಯಗಳನ್ನು ಸೃಷ್ಟಿಸಿದ್ದು, ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಸುಮಾರು 300 ಮೀಟರ್ ಎತ್ತರದಿಂದ ಡ್ರೋನ್ ಕ್ಯಾಮರಾದಲ್ಲಿ ಇಲ್ಲಿನ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಜೊತೆಗೆ ಮಾಧ್ವಮತ ಅನುಯಾಯಿಗಳ ಪವಿತ್ರ ತಾಣವಾಗಿರುವ ನವವೃಂದಾವನ ಗಡ್ಡೆ ಹಾಗೂ ವಿರುಪಾಪುರಗಡ್ಡೆ ಸಮೀಪದ ಪುರಾತನ ಕಲ್ಲಿನ ಸೇತುವೆ, ಕಡೆಬಾಗಿಲು-ಬುಕ್ಕಸಾಗರದ ಸೇತುವೆ ಹೀಗೆ ನಾನಾ ದೃಶ್ಯಗಳನ್ನು ಡ್ರೋನ್ ನಲ್ಲಿ ಸೆರೆಹಿಡಿಯಲಾಗಿದೆ. ಗಂಗಾವತಿ ತಾಲ್ಲೂಕಿನ ಆನೆಗೊಂದಿ ಭಾಗದಲ್ಲಿನ ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಿಸರ್ಗದ ರಮಣೀಯ ದೃಶ್ಯ ಕಾವ್ಯಕ್ಕೆ ಜನರು ಸಾಕ್ಷಿಯಾಗಿದ್ದಾರೆ.