ಮಾನವರನ್ನು ಹೊತ್ತೊಯ್ಯಬಲ್ಲ ಮೊದಲ ಸ್ವದೇಶಿ ಡ್ರೋನ್ 'ವರುಣಾ': ವಿಡಿಯೋ
🎬 Watch Now: Feature Video
ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ಮಾನವರನ್ನು ಹೊತ್ತೊಯ್ಯುವ ಡ್ರೋನ್ ರಚಿಸಲಾಗಿದ್ದು, ಶೀಘ್ರದಲ್ಲೇ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. 'ವರುಣಾ' ಎಂಬ ಹೆಸರಿನ ಈ ಡ್ರೋನ್ನ್ನು ಭಾರತೀಯ ಸ್ಟಾರ್ಟ್ಅಪ್ ಸಾಗರ್ ಡಿಫೆನ್ಸ್ ಎಂಜಿನಿಯರಿಂಗ್ ಅಭಿವೃದ್ಧಿಪಡಿಸಿದೆ. ಇದು 25-30 ಕಿ.ಮೀ ವ್ಯಾಪ್ತಿಯೊಂದಿಗೆ ಸುಮಾರು 30 ನಿಮಿಷಗಳ ಕಾಲ ಹಾರಬಲ್ಲದು. 130 ಕೆ.ಜಿ ತೂಕದ ಸರಕುಗಳನ್ನು ಅಥವಾ ಮನುಷ್ಯರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದೆ. ಭಾರತೀಯ ನೌಕಾಪಡೆಯು ಈ ಡ್ರೋನ್ ಅನ್ನು ಒಂದು ಹಡಗಿನಿಂದ ಇನ್ನೊಂದು ಹಡಗಿಗೆ ಸರಕುಗಳನ್ನು ಸಾಗಿಸಲು ಬಳಸಲು ಯೋಜನೆ ರೂಪಿಸಿದೆ. ಸಂಪೂರ್ಣ ಪರೀಕ್ಷೆಯ ನಂತರ ಭಾರತೀಯ ನೌಕಾಪಡೆಯು ಯುದ್ಧದಲ್ಲಿ ಮೊದಲ ಬಾರಿಗೆ ಯುದ್ಧನೌಕೆಗಳಲ್ಲಿ ಇದನ್ನು ಬಳಸುತ್ತಿದೆ. ರಿಮೋಟ್ ಸಹಾಯದಿಂದ ಇದು ಕಾರ್ಯನಿರ್ವಹಿಸಲಿದೆ.