ಹಳೆ ಬಲೆಗೆ ಸಿಲುಕಿ ಒದ್ದಾಡುತ್ತಾ ದಡಕ್ಕೆ ಸೇರಿದ ಆಮೆಗಳು: ಮೀನುಗಾರರಿಂದ ರಕ್ಷಣೆ - ದಡಕ್ಕೆ ಬಂದ ಆಮೇಗಳು
🎬 Watch Now: Feature Video
ಕಾರವಾರ: ಹಳೆಯ ಮೀನಿನ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಾ ದಡಕ್ಕೆ ತೇಲಿ ಬಂದಿದ್ದ ಎರಡು ಆಮೆಗಳನ್ನು ಕಾರವಾರದಲ್ಲಿ ಮೀನುಗಾರರು ರಕ್ಷಿಸಿದರು. ಮಾಜಾಳಿಯ ದಂಡೇಭಾಗ್ ಕಡಲತೀರದಲ್ಲಿ ಘಟನೆ ನಡೆಯಿತು. ಒಂದು ಆಮೆ ತೀವ್ರವಾಗಿ ಗಾಯಗೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸಮ್ಮುಖದಲ್ಲಿ ಇನ್ನೊಂದು ಆಮೆಯನ್ನು ಮರಳಿ ಸಮುದ್ರ ಸೇರಿಸಲಾಗಿದೆ. ಗಾಯಗೊಂಡಿದ್ದ ಆಮೆಯನ್ನು ಚಿಕಿತ್ಸೆಗಾಗಿ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದರು.