ಹೂ ಕುಂಡ ಕಳ್ಳರು.. ರಾತ್ರೋರಾತ್ರಿ ಒಂದೇ ಸ್ಕೂಟಿಯಲ್ಲಿ ನಾಲ್ವರು ಬಂದು ಪಾಟ್ ಎತ್ಕೊಂಡು ಹೋದ್ರು! - ಹೂ ಕುಂಡ ಕದ್ದ ಕಳ್ಳರು
🎬 Watch Now: Feature Video
ಬೆಂಗಳೂರು: ಕಳ್ಳರು ಚಿನ್ನಾಭರಣ, ಬೈಕು, ಕಾರು ಇತ್ಯಾದಿ ಕಳ್ಳತನ ಮಾಡುವುದು ಸಾಮಾನ್ಯ. ಆದ್ರೆ ಈ ವಿಡಿಯೋದಲ್ಲಿರುವ ಖದೀಮರು ವಿಭಿನ್ನ. ಮನೆ ಮುಂದೆ ಅಥವಾ ಅಂಗಡಿಗಳ ಮುಂದೆ ಇಟ್ಟಿರುವ ಹೂ ಕುಂಡಗಳೇ ಇವರ ಟಾರ್ಗೆಟ್. ನಿಶಾಚರಿಯಂತೆ ರಾತ್ರಿ ವೇಳೆ ಕೃತ್ಯ ಎಸಗಿರುವ ಖದೀಮರು ಪಾಟ್ ಎತ್ತಿಕೊಂಡು ಸ್ಕೂಟಿಯಲ್ಲಿ ಪರಾರಿಯಾಗಿದ್ದಾರೆ. ಕೆ.ಆರ್.ಪುರಂ ಬಳಿ ಲೋಚನಾ ಐ ಕೇರ್ ಸೆಂಟರ್ ಮುಂದಿಟ್ಟಿರುವ ಹೂ ಕುಂಡ ಕಳ್ಳತನ ಮಾಡಲಾಗಿದೆ. ಒಂದೇ ದ್ವಿಚಕ್ರ ವಾಹನದಲ್ಲಿ ನಾಲ್ವರು ಬಂದಿದ್ದು, ಸಿಸಿಟಿವಿಯಿಂದ ತಪ್ಪಿಸಿಕೊಳ್ಳಲು ತಮ್ಮ ಟಿ-ಶರ್ಟ್ಗಳಿಂದಲೇ ಮುಖ ಮುಚ್ಚಿಕೊಂಡಿದ್ದಾರೆ. ಈ ಪಾಟ್ಗಳಿಗೆ ಸುಮಾರು 300ರಿಂದ 400 ರೂಪಾಯಿ ಇರಬಹುದು. ಅದನ್ನೂ ಬಿಡದೆ ರಾತ್ರಿಯೆಲ್ಲ ನಿದ್ದೆಗೆಟ್ಟು, ಸಿಕ್ಕಿಬೀಳಬಹುದೆಂಬ ಭಯದಲ್ಲೇ ಓಡಾಡಿ ಪಾಟ್ ಕದ್ದಿರುವುದು ವಿಚಿತ್ರವೇ ಸರಿ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.