ಚಾಮರಾಜನಗರ: 5 ಮೀಟರ್ ದೂರದಲ್ಲಿ ಮಾಲೀಕ ಇದ್ದರೂ ಬೈಕ್ ಎಗರಿಸಿ ಕಳ್ಳ ಪರಾರಿ - ಬೈಕ್ ಎಗರಿಸಿದ ಘಟನೆ
🎬 Watch Now: Feature Video
ಚಾಮರಾಜನಗರ: 5 ಮೀ. ಅಂತರದಲ್ಲಿ ಮಾಲೀಕ ಇದ್ದರೂ ಬೈಕ್ ಎಗರಿಸಿದ ಘಟನೆ ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ನಡೆದಿದೆ. ಮೆಡಿಕಲ್ ಶಾಪ್ಗೆ ಮೊಪೆಡ್ನಲ್ಲಿ ಬಂದು ಕೀ ಅನ್ನು ಅಲ್ಲೇ ಬಿಟ್ಟು ಔಷಧಿ ಕೊಳ್ಳುತ್ತಿದ್ದರು. ಆಗ ದಿಡೀರನೇ ಪ್ರತ್ಯಕ್ಷವಾದ ಕಳ್ಳ ಬೈಕ್ ಸ್ಟಾರ್ಟ್ ಮಾಡಿ ಪರಾರಿ ಆಗಿದ್ದಾನೆ. ಹಿಡಿಯುವ ಪ್ರಯತ್ನ ಮಾಡಿದರೂ ಆತ ಬೈಕಿನೊಟ್ಟಿಗೆ ನುಣುಚಿಕೊಂಡು ಹೋಗಿದ್ದಾನೆ. ಭಾನುವಾರ ರಾತ್ರಿ ಘಟನೆ ನಡೆದಿದ್ದು, ಸಿಸಿಟಿವಿ ವಿಡಿಯೋ 'ಈಟಿವಿ ಭಾರತ'ಕ್ಕೆ ಲಭ್ಯವಾಗಿದೆ.