ಅಂಗಡಿಗೆ ನುಗ್ಗಿ ನಗದು, ಸಾಮಗ್ರಿ ದೋಚಿ ಸಿಸಿಟಿವಿಯೆದುರು ಕಳ್ಳನ ನೃತ್ಯ: ವಿಡಿಯೋ - ಕಳ್ಳತನ ಮಾಡಿದ ಬಳಿಕ CCTV ಮುಂದೆ ಡ್ಯಾನ್ಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15049464-thumbnail-3x2-wdfdfd.jpg)
ಲಖನೌ(ಉತ್ತರ ಪ್ರದೇಶ): ಕಳ್ಳತನ ಮಾಡಲು ಬರುವ ಕಳ್ಳರು, ತಮ್ಮ ಗುರುತು ಯಾರಿಗೂ ಗೊತ್ತಾಗದ ರೀತಿಯಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗದಂತೆ ಮರೆಮಾಚಿ ಕೃತ್ಯ ಎಸಗುತ್ತಾರೆ. ಆದರೆ, ಉತ್ತರ ಪ್ರದೇಶದಲ್ಲೊಂದು ವಿಭಿನ್ನ ಘಟನೆ ನಡೆದಿದೆ. ಕಳ್ಳತನ ಮಾಡಿದ ಬಳಿಕ ಕಳ್ಳನೋರ್ವ ಡ್ಯಾನ್ಸ್ ಮಾಡಿದ್ದಾನೆ. ಹಾರ್ಡ್ವೇರ್ ಅಂಗಡಿಯೊಳಗೆ ನುಗ್ಗಿರುವ ಆತ ಕಳ್ಳತನದ ಬಳಿಕ ಅಂಗಡಿಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಮುಂದೆ ಕುಣಿದಿದ್ದಾನೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಆರು ಸಾವಿರ ನಗದು ಹಾಗೂ ಸಾಮಗ್ರಿಯನ್ನು ಆತ ದೋಚಿದ್ದಾನೆ.