ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ನಲ್ಲಿ ತಾಂತ್ರಿಕ ಸಮಸ್ಯೆ: 31 ಗೇಟ್ಗಳ ಮೂಲಕ ನದಿಗೆ ನೀರು - 31 ಗೇಟ್ಗಳ ಮೂಲಕ ನದಿಗೆ ನೀರು
🎬 Watch Now: Feature Video
ಕೊಪ್ಪಳ: ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದಲ್ಲಿ ಒಟ್ಟು 33 ಕ್ರಸ್ಟ್ ಗೇಟ್ಗಳಿವೆ. ಈ ಪೈಕಿ ಒಂದು ಗೇಟನ್ನು ತಾಂತ್ರಿಕ ಸಮಸ್ಯೆಯಿಂದಾಗಿ ತೆರೆದಿಲ್ಲ. ಜಲಾಶಯದ ಒಟ್ಟು ಸಾಮರ್ಥ್ಯ 105.788 ಟಿಎಂಸಿ ಇದ್ದು, ಇಂದು 1,66,904 ಕ್ಯೂಸೆಕ್ಸ್ ಒಳಹರಿವಿದೆ. ಸದ್ಯ ಜಲಾಶಯದಲ್ಲಿ 95.924 ಟಿಎಂಸಿ ನೀರು ಭರ್ತಿಯಾದ ಹಿನ್ನೆಲೆ ನದಿಗೆ 31 ಗೇಟ್ಗಳ ಮೂಲಕ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ತುಂಗಭದ್ರಾ ಜಲಾಶಯದಲ್ಲಿ ತಾಂತ್ರಿಕ ಸಮಸ್ಯೆ ಇರುವ 21ನೇ ಗೇಟ್ ದುರಸ್ತಿ ಕಾರ್ಯ ನಡೆಸಿರುವುದಾಗಿ ಜಲಾಶಯದ ತಾಂತ್ರಿಕ ಸಿಬ್ಬಂದಿ ತಿಳಿಸಿದ್ದಾರೆ.