ಭೋರ್ಗರೆವ ನೀರಿನ ಮೇಲೆ ರೋಪ್ ಹಾಕಿ ಗರ್ಭಿಣಿ ದಾಟಿಸಿದ ಎಸ್ಡಿಆರ್ಎಫ್: ವಿಡಿಯೋ
🎬 Watch Now: Feature Video
ಉತ್ತರಾಖಂಡದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಜನಜೀವನವನ್ನು ಕಂಗೆಡಿಸಿದೆ. ರಸ್ತೆಗಳು ನೀರಿಗೆ ಕೊಚ್ಚಿ ಹೋಗಿ ಸಂಪರ್ಕ ಬಂದ್ ಆಗಿದೆ. ಪ್ರವಾಹದಿಂದ ಎಲ್ಲೆಂದರಲ್ಲಿ ನೀರು ಭೋರ್ಗರೆಯುತ್ತಿದೆ. ಇದರಿಂದ ಚಿಕಿತ್ಸೆಗೆ ತೆರಳಬೇಕಿದ್ದ ಗರ್ಭಿಣಿಯೊಬ್ಬರನ್ನು ರೋಪ್ ಸಹಾಯದಿಂದ ಭೋರ್ಗರೆವ ನೀರಿನಲ್ಲಿ ದಾಟಿದ ವಿಡಿಯೋವೊಂದು ಹೊರಬಿದ್ದಿದೆ. ಉತ್ತರಾಖಂಡದ ತೆಹ್ರಿಯಲ್ಲಿ ನೀರಿನ ಕೊರೆತದಿಂದ ರಸ್ತೆ ಕೊಚ್ಚಿ ಹೋಗಿದೆ. ಗರ್ಭಿಣಿಯಾಗಿದ್ದ ಆಕೆ ಚಿಕಿತ್ಸೆ ಪಡೆಯಬೇಕಿತ್ತು. ಎಸ್ಡಿಆರ್ಎಫ್ ತಂಡಕ್ಕೆ ಈ ಬಗ್ಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಧಾವಿಸಿ, ಒಂದು ತುದಿಯಿಂದ ಮತ್ತೊಂದು ತುದಿಗೆ ರೋಪ್ ಸಿದ್ಧ ಮಾಡಿ ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಕರೆತಂದಿದ್ದಾರೆ. ಬಳಿಕ ರಾಜಧಾನಿ ಡೆಹ್ರಾಡೂನ್ನಲ್ಲಿ ಮಹಿಳೆಗೆ ಚಿಕಿತ್ಸೆ ಕೊಡಿಸಿದ್ದಾರೆ. ಇದಲ್ಲದೇ, ಪ್ರಹಾಹದಲ್ಲಿ ಸಿಕ್ಕಿಬಿದ್ದಿದ್ದ ಮೂವರನ್ನು ಇದೇ ವೇಳೆ ಎಸ್ಡಿಆರ್ಎಫ್ ತಂಡ ರಕ್ಷಣೆ ಮಾಡಿದೆ.