ಗಣಪತಿ ನಿಮಜ್ಜನ ವೇಳೆ ಚಾಕು ಇರಿತ ವದಂತಿ: ರಾಣೆಬೆನ್ನೂರಿನಲ್ಲಿ ಆತಂಕ ಸೃಷ್ಟಿ - rumors of stabbing during ganesh immersion
🎬 Watch Now: Feature Video
ಹಾವೇರಿ: ಗಣಪತಿ ನಿಮಜ್ಜನ ವೇಳೆ ಚಾಕು ಇರಿತದ ವದಂತಿ ಕೇಳಿಬಂದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕ ಸೃಷ್ಟಿಯಾದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ತಡರಾತ್ರಿ ನಡೆದಿದೆ. ದರ್ಗಾ ಸರ್ಕಲ್‌ನಲ್ಲಿ ಜಮಾಯಿಸಿದ ನೂರಾರು ಜನರನ್ನು ಪೊಲೀಸರು ಚದುರಿಸಿದ್ದು, ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಸ್ಥಳಕ್ಕೆ ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಉನ್ನತ ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟಿದ್ದು, ಯಾವುದೇ ಚಾಕು ಇರಿತ ಆಗಿಲ್ಲ ಎಸ್ಪಿ ತಿಳಿಸಿದ್ದಾರೆ.