ಕಂಠಪೂರ್ತಿ ಕುಡಿದು ಶಾಲೆಗೆ ಬಂದ ಪ್ರಾಂಶುಪಾಲ: ಗ್ರಾಮಸ್ಥರ ಛೀಮಾರಿ - ಈಟಿವಿ ಭಾರತ ಕರ್ನಾಟಕ
🎬 Watch Now: Feature Video
ದುಮ್ಕಾ(ಜಾರ್ಖಂಡ್): ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಕೆಲಸ ಮಹತ್ವದ್ದು. ಆದರೆ, ಕೆಲವು ಶಿಕ್ಷಕರ ದುಶ್ಚಟಗಳು ಪವಿತ್ರ ವೃತ್ತಿಗೆ ಕಳಂಕ ತರುತ್ತಿವೆ. ಇಂತಹದ್ದೇ ಘಟನೆ ಜಾರ್ಖಂಡ್ನಲ್ಲಿ ನಡೆಯಿತು. ಇಲ್ಲೊಬ್ಬ ಪ್ರಾಂಶುಪಾಲ ಕಂಠಪೂರ್ತಿ ಮದ್ಯ ಸೇವಿಸಿ ಶಾಲೆಗೆ ಆಗಮಿಸಿದ್ದಾನೆ. ಸರಿಯಾಗಿ ನಿಲ್ಲಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದ ಆತ ಶಾಲಾವರಣದಲ್ಲಿಯೇ ಬಿದ್ದು ಹೊರಳಾಡಿದ್ದಾನೆ. ದುಮ್ಕಾ ಜಿಲ್ಲೆಯ ಶಿಕಾರಿಪಾಡಾ ಬ್ಲಾಕ್ನ ದರ್ಬಾರ್ಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಪ್ರಾಂಶುಪಾಲ ಆಂಡ್ರಿಯಾಸ್ ಮರಾಂಡಿ ವರ್ತನೆಗೆ ಗ್ರಾಮಸ್ಥರು ಕೋಪಗೊಂಡು ಛೀಮಾರಿ ಹಾಕಿದ್ದಾರೆ. ಮೊಬೈಲ್ ಕ್ಯಾಮರಾದಲ್ಲಿ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.