ಪ್ರಧಾನಿ ಕಚೇರಿ ಸಿಬ್ಬಂದಿ ಮಕ್ಕಳೊಂದಿಗೆ ನರೇಂದ್ರ ಮೋದಿ ರಕ್ಷಾಬಂಧನ್: ವಿಡಿಯೋ ನೋಡಿ - ಬಾಂಧವ್ಯಗಳನ್ನು ಮೆರೆಯುವ ಸುದಿನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16074734-thumbnail-3x2-bng.jpg)
ಇಂದು ಅಣ್ಣ- ತಂಗಿಯರಿಗೆ ವಿಶೇಷ ದಿನ. ಬಾಂಧವ್ಯಗಳನ್ನು ಮೆರೆಯುವ ಸುದಿನ. ನವದೆಹಲಿಯ ತಮ್ಮ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪುಟ್ಟ ಬಾಲಕಿಯರೊಂದಿಗೆ ರಕ್ಷಾಬಂಧನ್ ಆಚರಿಸಿದರು. ಮಕ್ಕಳು ಪ್ರಧಾನಿ ಮೋದಿ ಅವರಿಗೆ ರಾಕಿ ಕಟ್ಟುವ ಮೂಲಕ ಹಬ್ಬದ ಸಂಭ್ರಮವನ್ನು ಆಚರಿಸಿದರು. ಪುಟಾಣಿಗಳ ಪ್ರೀತಿಗೆ ಪ್ರಧಾನಿ ಮೋದಿ ಅವರು ಮನಸೋತರು. ಈ ಬಾಲಕಿಯರು ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಮಕ್ಕಳಾಗಿದ್ದರು. ಹೀಗಾಗಿ ಇದು ವಿಶೇಷ ರಕ್ಷಾಬಂಧನವಾಗಿತ್ತು.