ಸಿಎಂ ಸಾಹೇಬ್ರು ಬರುತ್ತಿದ್ದನ್ನು ನೋಡಿ ಗೌರವ ಸಲ್ಲಿಸಿದ ಶ್ವಾನ... ನಕ್ಕು ನಮಸ್ಕರಿಸಿದ ಬಿಎಸ್ವೈ! - ಬೆಳಗಾವಿ ಪ್ರವಾಸಿ ಮಂದರಿ
🎬 Watch Now: Feature Video
ಮಹಾರಾಷ್ಟ್ರಕ್ಕೆ ಪ್ರವಾಸ ಬೆಳೆಸುವ ಉದ್ದೇಶದಿಂದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿನ್ನೆ ರಾತ್ರಿ ಬೆಳಗಾವಿ ಪ್ರವಾಸಿ ಮಂದಿರ ಸರ್ಕಿಟ್ ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದು, ಇಂದು ಬೆಳಗ್ಗೆ ವಾಯುವಿಹಾರಕ್ಕಾಗಿ ತೆರಳಿದ್ದ ವೇಳೆ ಅಪರೂಪದ ಘಟನೆವೊಂದು ನಡೆದಿದೆ. ಸರ್ಕಿಟ್ ಹೌಸ್ ಮುಂದೆ ನಿಂತಿದ್ದ ಶ್ವಾನದಳದ ಸೋನಿ ಎಂಬ ನಾಯಿ ಮುಖ್ಯಮಂತ್ರಿ ನೋಡಿ ತನ್ನ ಎರಡು ಕಾಲುಗಳನ್ನ ನೆಲಕ್ಕೆ ಊರಿ, ಬಾಲ ಅಲ್ಲಾಡಿಸುತ್ತಾ ಗೌರವ ತೋರಿದೆ. ಈ ದೃಶ್ಯ ನೋಡಿರುವ ಬಿಎಸ್ವೈ ಮುಗುಳುನಗೆ ನೀಡಿ, ನಮಸ್ಕರಿಸಿ ಮುಂದೆ ಸಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.