ಒಂದೇ ಏಟಿಗೆ ಕಣ್ಣು ಮುಚ್ಚಿ ಮಡಕೆ ಒಡೆದ ಪೊಲೀಸ್ ಕಮಿಷನರ್ - Police commissioner broke pot
🎬 Watch Now: Feature Video
ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಕರ್ತವ್ಯದ ಜೊತೆಗೆ ಸಾಂಸ್ಕೃತಿಕ, ಸಾಹಿತ್ಯಿಕವಾಗಿ ಈಗಾಗಲೇ ಗಮನ ಸೆಳೆದಿದ್ದಾರೆ. ಇದೀಗ ಪೊಲೀಸ್ ಕಮಿಷನರ್ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಒಂದೇ ಏಟಿಗೆ ಮಡಕೆ ಒಡೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಗರದ ರೊಸಾರಿಯೊ ಮೈದಾನದಲ್ಲಿ ಅಕ್ವಾ ಫೆಸ್ಟ್ ಕಾರ್ಯಕ್ರಮ ನಡೆಯುವ ವೇಳೆ ಅಲ್ಲಿಗೆ ಭೇಟಿ ನೀಡಿದ್ದ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಮಡಕೆ ಒಡೆದಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ಅತ್ತಿಂದಿತ್ತ ಹೋಗಿ ಸರಿಯಾದ ಸ್ಥಳ ನಿರ್ಧರಿಸಿ ಒಂದೆ ಏಟಿಗೆ ಮಡಕೆ ಒಡೆದಿದ್ದಾರೆ.