ಕೇದಾರನಾಥ: ಭಕ್ತರ ನಿಯಂತ್ರಿಸಲು ಎನ್ಡಿಆರ್ಎಫ್, ಐಟಿಬಿಪಿ ತಂಡ ನಿಯೋಜನೆ
🎬 Watch Now: Feature Video
ಕೇದಾರನಾಥ(ಉತ್ತರಾಖಂಡ): ಸುಪ್ರಸಿದ್ಧ ಕೇದಾರನಾಥ ಧಾಮ ದೇಗುಲದ ಬಾಗಿಲನ್ನು ಮೇ 6 ರ ಶುಕ್ರವಾರ ಮುಂಜಾನೆ 6.25ಕ್ಕೆ ತೆರೆಯಲಾಗಿದ್ದು, ಅಂದಿನಿಂದ ಇಂದಿನವರೆಗೂ ದಿನಕ್ಕೆ ಸಾವಿರಾರು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದು, ಭಕ್ತರನ್ನು ನಿಯಂತ್ರಿಸಲು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಎನ್ಡಿಆರ್ಎಫ್ ಹಾಗು ಐಟಿಬಿಪಿ ತಂಡವನ್ನು ನಿಯೋಜಿಸಲಾಗಿದೆ.