ETV Bharat / bharat

ಆಫ್ರಿಕನ್ ಪತ್ರಕರ್ತರನ್ನು ಭೇಟಿ ಮಾಡಿದ ಜೈ ಶಂಕರ್​: ಭಾರತದ ರೂಪಾಂತರಗಳ ಬಗ್ಗೆ ಸಂವಾದ - JAISHANKAR MEETS JOURNALISTS

ನವದೆಹಲಿಯಲ್ಲಿ ಬುಧವಾರ ಆಫ್ರಿಕಾ ಪತ್ರಕರ್ತರ ನಿಯೋಗ ವಿದೇಶಾಂಗ ಸಚಿವ ಜೈ ಶಂಕರ್​ ಅವರನ್ನು ಭೇಟಿ ಮಾಡಿ ಸಮಾಲೋಚಿಸಿತು.

EAM Jaishankar meets African journalists
ಆಫ್ರಿಕನ್ ಪತ್ರಕರ್ತರನ್ನು ಭೇಟಿ ಮಾಡಿದ ಜೈ ಶಂಕರ್​: ಭಾರತದ ರೂಪಾಂತರಗಳ ಬಗ್ಗೆ ಸಂವಾದ (ANI)
author img

By ANI

Published : 3 hours ago

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಬುಧವಾರ ಪೂರ್ವ ಮತ್ತು ದಕ್ಷಿಣ ಆಫ್ರಿಕಾದ ದೇಶಗಳ ಪತ್ರಕರ್ತರನ್ನು ಭೇಟಿಯಾದರು. ಭಾರತದಲ್ಲಿ ನಡೆಯುತ್ತಿರುವ ಪರಿವರ್ತನೆ, ಜಾಗತಿಕ ದಕ್ಷಿಣಕ್ಕೆ ಭಾರತದ ಬದ್ಧತೆ ಮತ್ತು ಭಾರತದ ಅಭಿವೃದ್ಧಿ ಕುರಿತು ಆಫ್ರಿಕಾದ ಪತ್ರಕರ್ತರು, ವಿದೇಶಾಂಗ ಸಚಿವ ಜೈ ಶಂಕರ್ ಜತೆ ಮಾತನಾಡಿದರು.

ಈ ಬಗ್ಗೆ ತಮ್ಮ ಎಕ್ಸ್ ಹ್ಯಾಂಡಲ್​ ನಲ್ಲಿ ಪೋಸ್ಟ್​ ಹಾಕಿಕೊಂಡಿರುವ ಅವರು, "ಇಂದು ದೆಹಲಿಯಲ್ಲಿ ಪೂರ್ವ ಮತ್ತು ದಕ್ಷಿಣ ಆಫ್ರಿಕಾದ ದೇಶಗಳ 15 ಪತ್ರಕರ್ತರನ್ನು ಭೇಟಿಯಾಗಲು ಸಂತೋಷವಾಯಿತು. ಭಾರತದಲ್ಲಿ ನಡೆಯುತ್ತಿರುವ ಪರಿವರ್ತನೆ, ಗ್ಲೋಬಲ್ ಸೌತ್‌ಗೆ ಭಾರತದ ಬದ್ಧತೆ ಮತ್ತು ಭಾರತ-ಆಫ್ರಿಕಾ ಸಂಬಂಧಗಳನ್ನು ವಿಸ್ತರಿಸುವುದು, ಭಾರತದ ವಿದೇಶಾಂಗ ನೀತಿ ಆಯ್ಕೆಗಳು, ಆಫ್ರಿಕಾದೊಂದಿಗಿನ ವ್ಯಾಪಾರ ಸಂಬಂಧಗಳು ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಬಗ್ಗೆ ಸಮಾಲೋಚನೆ ನಡೆಸಿದೆವು’’ ಎಂದು ಅವರು ತಿಳಿಸಿದ್ದಾರೆ.

ಆಫ್ರಿಕಾದೊಂದಿಗಿನ ಬಾಂಧವ್ಯ ಬಲಪಡಿಸುವ ಪ್ರಯತ್ನದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ನೈಜೀರಿಯಾಕ್ಕೆ ಭೇಟಿ ನೀಡಿದ್ದರು. 17 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರು ಆ ದೇಶಕ್ಕೆ ನೀಡಿದ ಮೊದಲ ಭೇಟಿಯಾಗಿದೆ. ಈ ಪ್ರವಾಸದ ಸಮಯದಲ್ಲಿ ಪ್ರಧಾನಿ ಮೋದಿ ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರೊಂದಿಗೆ ಫಲಪ್ರದ ಚರ್ಚೆ ನಡೆಸಿದ್ದರು. ರಕ್ಷಣೆ, ತಂತ್ರಜ್ಞಾನ, ಆರೋಗ್ಯ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ತಮ್ಮ ಪಾಲುದಾರಿಕೆಯನ್ನು ಬಲಪಡಿಸುವುದರ ಬಗ್ಗೆ ಚರ್ಚಿಸಿದ್ದರು.

ಗ್ಲೋಬಲ್ ಸೌತ್‌ನ ಅಭಿವೃದ್ಧಿ ಆಕಾಂಕ್ಷೆಗಳನ್ನು ಪೂರೈಸಲು ಒಟ್ಟಿಗೆ ಕೆಲಸ ಮಾಡಲು ಉಭಯ ನಾಯಕರು ಒಪ್ಪಿಕೊಂಡಿದ್ದರು. ಹೆಚ್ಚುವರಿಯಾಗಿ, ನೈಜೀರಿಯಾದ ಪ್ರವಾಹ ಪರಿಹಾರ ಪ್ರಯತ್ನಗಳನ್ನು ಬೆಂಬಲಿಸಲು ಭಾರತವು 20 ಟನ್‌ಗಳಷ್ಟು ಮಾನವೀಯ ನೆರವನ್ನು ಕಳುಹಿಸುವುದಾಗಿ ಘೋಷಿಸಿತು. ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದ ಪ್ರಧಾನಿ ಮೋದಿ, ಫಲಪ್ರದ ಭೇಟಿಗಾಗಿ ನೈಜೀರಿಯಾಕ್ಕೆ ಧನ್ಯವಾದಗಳು, ಇದು ಭಾರತ-ನೈಜೀರಿಯಾ ಸ್ನೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ನೀಡುತ್ತದೆ." ಎಂದು ಬರೆದುಕೊಂಡಿದ್ದರು.

ಪ್ರಧಾನಿ ಅವರ ನೈಜೀರಿಯಾ ಭೇಟಿಯ ಸಮಯದಲ್ಲಿ ಪಿಎಂ ಮೋದಿ ಮತ್ತು ನೈಜೀರಿಯಾ ಅಧ್ಯಕ್ಷ ಟಿನುಬು ಅವರು ಜಾಗತಿಕ ಮತ್ತು ಪ್ರಾದೇಶಿಕ ಸಮಸ್ಯೆಗಳ ಕುರಿತು ಚರ್​ಚೆ ನಡೆಸಿದ್ದು. ಗ್ಲೋಬಲ್ ಸೌತ್‌ನ ಅಭಿವೃದ್ಧಿ ಆಕಾಂಕ್ಷೆಗಳನ್ನು ಪೂರೈಸಲು ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ಮಾಹಿತಿ ನೀಡಿತ್ತು.

ಇದನ್ನು ಓದಿ:ಅಂಬೇಡ್ಕರ್​​ರನ್ನು ಅಮಿತ್​ ಶಾ ಅವಮಾನಿಸಿಲ್ಲ, ಕಾಂಗ್ರೆಸ್​​ನ ಕುತಂತ್ರವನ್ನು ಬಯಲಿಗೆಳೆದಿದ್ದಾರೆ: ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.